ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ದೇಶ ವಿಭಜನೆಗೆ ಯತ್ನ: ಮೋಹನ್ ಭಾಗವತ್
ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ದೇಶ ವಿಭಜನೆಗೆ ಯತ್ನ: ಮೋಹನ್ ಭಾಗವತ್
ಮೋಹನ್ ಭಾಗವತ್ಕೃಪೆ: ಪಿಟಿಐ
ಜೈಪುರ: ‘ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ದೇಶವನ್ನು ವಿಭಜಿಸಲು ಹಾಗೂ ಜನರ ನಡುವೆ ಸಂಘರ್ಷ ಸೃಷ್ಟಿಸುವ ಯತ್ನಗಳು ನಡೆಯುತ್ತಿವೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ
ಈಗಲೇ ಅನ್ವೇಷಿಸಿ
‘ಇಂತಹ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು ದೇಶದ ಜನರು ಒಗ್ಗಟ್ಟಾಗಿರಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಜೋಧ್ಪುರದಲ್ಲಿ ಮಾತನಾಡಿದ ಅವರು ‘ಜಗತ್ತಿನ ಕಲ್ಯಾಣಕ್ಕಾಗಿ ಭಾರತದ ಏಳಿಗೆ ಅತ್ಯಗತ್ಯವಾಗಿದೆ. ಆದರೆ ಕೆಲವು ಶಕ್ತಿಗಳು ಭಾರತ ಬಲಿಷ್ಠವಾಗುವುದನ್ನು ಬಯಸುವುದಿಲ್ಲ’ ಎಂದಿದ್ದಾರೆ.
‘ಜಗತ್ತಿನ ಎಲ್ಲರ ಆಕಾಂಕ್ಷೆಗಳಿಗೆ ಭಾರತವೇ ಉತ್ತರವಾಗಿದೆ. ಆದರೆ, ಜಗತ್ತಿನ ಪರಿಸ್ಥಿತಿ ಭಿನ್ನವಾಗಿದೆ. ಕೆಲವು ತಮ್ಮ ಸ್ವ ಹಿತಾಸಕ್ತಿಯ ಕಾರಣದಿಂದ ಭಾರತ ಬಲಿಷ್ಠವಾಗುವುದನ್ನು ಬಯಸುವುದಿಲ್ಲ. ಅವರಿಗೆ ಭಾರತವಿಲ್ಲದೆ ಇರಲೂ ಸಾಧ್ಯವಿಲ್ಲ. ಭಾರತದೊಂದಿಗೆ ಹೊಂದಿಕೊಂಡು ಹೋಗಲೂ ಆಗುತ್ತಿಲ್ಲ. ಈ ಎರಡೂ ವಿದ್ಯಮಾನಗಳು ಏಕಕಾಲದಲ್ಲಿ ನಡೆಯುತ್ತಿವೆ’ ಎಂದು ಅವರು ಹೇಳಿದ್ದಾರೆ.
ನಿಮಗೆ ಇಷ್ಟ ಆಗಬಹುದು
ಹಲ್ಲೆ ಆರೋಪ: ಮೈಸೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು
ಬ್ರೇಕ್ ಅಪ್, ಪ್ರೀತಿ, ಮದುವೆ: ದಾಂಪತ್ಯದ ಬಗ್ಗೆ ನಟಿ ಕಾಜಲ್ ಅಗರವಾಲ್ ಮಾತು
ಮುಂಬೈ ಗಲ್ಲಿಯಲ್ಲಿ ಸಚಿನ್ ಜತೆಗೆ ಕ್ರಿಕೆಟ್ ಆಡಿದ ರಾಜಕುಮಾರ ವಿಲಿಯಂ, ಪತ್ನಿ ಕೇಟ್
ಚಿನಕುರುಳಿ: ಸೋಮವಾರ, 16 ನವೆಂಬರ್ 2026
ಬೈಕ್ನಲ್ಲಿ ಸಿಂಹವನ್ನು ಅಟ್ಟಾಡಿಸಿದ ಅರಣ್ಯ ಸಿಬ್ಬಂದಿ: ಹರಿದಾಡಿದ ವಿಡಿಯೊ
‘ಭಾರತ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವಾಗಲೇ ದೇಶವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಚಿಕ್ಕ ಚಿಕ್ಕ ವಿಷಯಗಳನ್ನು ವೈಭವೀಕರಿಸುವುದು, ಜನರು ತಮ್ಮಲ್ಲೇ ಕಚ್ಚಾಡುವಂತೆ ಮಾಡುವುದು, ಪ್ರತ್ಯೇಕತಾವಾದವನ್ನು ಹುಟ್ಟುಹಾಕುವುದು ಮತ್ತು ಸಂಘರ್ಷಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಹಿಂದೆ ಬ್ರಿಟಿಷರು ಏನು ಮಾಡಿದ್ದಾರೋ, ಅದನ್ನೇ ಈಗ ಜಗತ್ತಿನಾದ್ಯಂತ ಇರುವ ದುಷ್ಟಶಕ್ತಿಗಳು ಒಗ್ಗೂಡಿ ರಾಜಕೀಯದ ಮೂಲಕ ಪುನರಾವರ್ತಿಸುತ್ತಿವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
