ವಿಕೆ ಸುದ್ದಿ ವಿಶೇಷ

Your blog category

ಯುವಕರು ಪ್ರತಿ ಸಮುದಾಯದ ಆಸ್ತಿ: ಯುವ ಮುಖಂಡ ನವನೀತ್ ಗೌಡ

ಯುವಕರು ಪ್ರತಿ ಸಮುದಾಯದ ಆಸ್ತಿ :ಯುವ ಮುಖಂಡ ನವನೀತ್ ಗೌಡ. ವರದಿ:ಮಂಜುನಾಥ್ ಎಂ . ಹನೂರು : ಸಮಾಜದ ಎಲ್ಲಾ ಸಮುದಾಯಗಳಲ್ಲಿ ಯುವಕರೆ ದೇಶದ ಆಸ್ತಿಯಾಗಿದೆ ಇಂದಿನ…

Bangarappa c

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ

ಮಧ್ಯರಂಗನ. ದರ್ಶನ ಪಡೆದ. ಡಿ.ಕೆ. ಶಿವನಿಗೆ. ಒಲಿದ ಮುಖ್ಯಮಂತ್ರಿ ಪದವಿ.

Bangarappa c

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ. ಚಾಮರಾಜನಗರ : ಮೂಡ ನಂಬಿಕೆಗೆ ಜೋತು ಬಿತ್ತು ಹಲವಾರು ನಾಯಕರು ಜಿಲ್ಲೆಗೆ ಆಗಮಿಸದೆ ತಮ್ಮ ಅಧಿಕಾರವನ್ನು ಅನುಭವಿಸುತ್ತಾರೆ . ಆದರೆ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರವರು ನೂತನವಾಗಿ ಜೀರ್ಣೋದ್ಧಾರ ಮಾಡಿದ ಶಿವನಸಮುದ್ರ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗನ್ನೋ ಹನ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ಅದೃಷ್ಟ ಫಲನೀಡಿದಂತೆ ಕಾಣುತ್ತಿದೆ .

ಡಿ.ಕೆ.ಶಿವಕುಮಾರ್ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ವಿರೋಧಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು 2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತದಿಂದ ಶಾಸಕರು ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ ಶಿವಕುಮಾರ್…

Bangarappa c

ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ. ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.

Bangarappa c
- Advertisement -
Ad imageAd image