Bangarappa c

Follow:
18 Articles

ಕೊಳ್ಳೇಗಾಲ :ಮನುಷ್ಯನ ಮನಸ್ಸು ಮತ್ತು ರಕ್ತ ಶುದ್ಧವಾಗಿದ್ದರೆ, ದೇಹದ ಆರೋಗ್ಯ ಸದಾ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧಗೊಳ್ಳುವುದಲ್ಲದೆ ರಕ್ತದ ಮರುಉತ್ಪತ್ತಿ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಚಾವೈವಿಸಂ ಯ ರಕ್ತನಿಧಿ ಕೇಂದ್ರದ ಹಿರಿಯ ತಂತ್ರಜ್ಞರಾದ ಸತ್ಯಣ್ಣ ಹೇಳಿದರು.ಅವರು ಏ.೧ ರಂದು ಜೆಎಸ್’ಬಿ ಪ್ರತಿಷ್ಠಾನ ಇವರ ವತಿಯಿಂದ ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ೧೧೯ ನೇ ಜನ್ಮದಿನದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ರಕ್ತದಾನದ ಮಹತ್ವ ವಿವರಿಸಿದರು.ಪ್ರತಿವರ್ಷ ಲಕ್ಷಾಂತರ ಯುನಿಟ್ ರಕ್ತದ ಕೊರತೆ ಇರುವುದರಿಂದ, ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳು, ವಿಶೇಷವಾಗಿ ಯುವಜನತೆ, ರಕ್ತದಾನ ಮಾಡಬೇಕು. ಇದು ದಾನಿಗಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕೆಂದರು.ನಮ್ಮ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಜಿಲ್ಲೆಯ ವಿವಿಧೆಡೆ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅವುಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ವೈದ್ಯಕೀಯ ತಂಡದವರಾದಡಾ| ಪ್ರಿಯದರ್ಶಿನಿ, ಡಾ| ತೀರ್ಥ, ಹಿರಿಯ ಶುಶ್ರೂಷಕಿಯರಾದ ಸೌಮ್ಯ, ಮಂಗಳಮ್ಮ, ರಕ್ತನಿಧಿ ಕೇಂದ್ರದ ಆಪ್ತಸಮಾಲೋಚಕರಾದ ಅಜ಼್ಗರ್ ಅಹ್ಮದ್, ಮಹದೇವಸ್ವಾಮಿ, ತಂತ್ರಜ್ಞರಾದ ಮೌನೀಷ, ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಇಂದಿನ ಶಿಬಿರದಲ್ಲಿ 49 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.

Bangarappa c

ಬಸವೇಶ್ವರ, ಜಡೇಸ್ವಾಮಿಗೆ ವಿಶೇಷ ಪೂಜೆ ಪರ್ವ . ವರದಿ :- ಬಸವರಾಜ್ ಕಾಂಚಳ್ಳಿ . ಹನೂರು :ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಜಡೇಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು.ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರು ತಿದ್ದು ಬಸವೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚ ಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿ ಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ.

ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದುವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ.ತಳಿರು…

Bangarappa c

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Bangarappa c

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ರೈತರು ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Bangarappa c

ಹನೂರು ಪಟ್ಟಣದ ವಿವಿಧೆಡೆ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಬೇಟಿ ಅನಧಿಕೃತ ಸಿಲಿಂಡರುಗಳ ವಶ.

ಹನೂರು:ವಿದೇಶದಲ್ಲಿ ನಡೆಯುವ ಯುದ್ದದಿಂದ ದೇಶದಲ್ಲಿ ಅನಿಲಗಳ ಕೊರತೆಯನ್ನು ಎದುರಿಸುವಾಗ ನಮ್ಮ ತಾಲ್ಲೂಕು ಕೇಂದದಲ್ಲಿ ಅಂತಹ ಕೊರತೆ…

Bangarappa c

ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ

ಕನಕಪುರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ರೂರಲ್ ಪದವಿ ಕಾಲೇಜಿನಲ್ಲಿ ಶನಿವಾರ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು…

Bangarappa c