ಮಕ್ಕಳು ದೇಶದ ನಿಜವಾದ ಸಂಪತ್ತು: ಮುಖ್ಯ ಶಿಕ್ಷಕ ದೇವೇಂದ್ರ .

Bangarappa c journalist
Bangarappa c journalist - Journalist
2 Min Read

ಮಕ್ಕಳು ದೇಶದ ನಿಜವಾದ ಸಂಪತ್ತು: ಮುಖ್ಯ ಶಿಕ್ಷಕ ದೇವೇಂದ್ರ .,

ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು : ಮುಖ್ಯ ಶಿಕ್ಷಕ ದೇವೇಂದ್ರ

​ಪಿರಿಯಾಪಟ್ಟಣ: ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಕಂಪಲಾಪುರ ನಾಗ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರ ತಿಳಿಸಿದರು.
ತಾಲ್ಲೂಕಿನ ಕಂಪಲಾಪುರದ ನಾಗ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ನಿಜವಾದ ಸಂಪತ್ತು ಮಕ್ಕಳು ಹಾಗಾಗಿ ಅವರ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಲು ಪೋಷಕರು ಹಾಗೂ ಶಿಕ್ಷಕರು ಸದಾ ಜಾಗ್ರತೆ ವಹಿಸಬೇಕು ಆದ್ದರಿಂದ ಪೋಷಕರು ಮಕ್ಕಳ ಬೆಳವಣಿಗೆಯ ಕಡೆಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಭಾವನೆ, ಹಕ್ಕುಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಮಕ್ಕಳ‌ ದಿನಾಚರಣೆ, ಮಕ್ಕಳಿಗೆಂದೇ ಮೀಸಲಾದ ದಿನ ಸದಾ ಚೆಂಡಿನಂತೆ ಪುಟಿಯುವ ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯವಾದ ಅಪೂರ್ವ ಸಂಪತ್ತು. ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ ಕಾಪಾಡಬೇಕು. ಜಾಗತೀಕರಣ, ಖಾಸಗೀಕರಣ ಮತ್ತು ನಗರೀಕರಣದ ಈ ದಿನಮಾನದಲ್ಲಿ ಎಲ್ಲೆಡೆ ಮಕ್ಕಳ ಸ್ನೇಹಿ ವಾತಾವರಣ ರೂಪುಗೊಳ್ಳಲು ಈ ಸಡಗರ, ಸಂಭ್ರಮದ ದಿನಾಚರಣೆ ಬುನಾದಿಯಾಗಬೇಕು ಎಂದು ಹೇಳಿದರು.

ಶಿಕ್ಷಕಿ ಮಮತಾ ಮಾತನಾಡಿ ಮಕ್ಕಳಿರುವ ಮನೆ ನಂದನವನವಿದ್ದಂತೆ. ಪುಟ್ಟ ಕಂಗಳಲ್ಲಿ ಸಾವಿರ ಕನಸುಗಳು, ಮುಗ್ಧ ಮನಸ್ಸಿನಲ್ಲಿ ನೂರಾರು ಆಸೆಗಳು, ಪುಟ್ಟ ಹೆಜ್ಜೆಗಳಲ್ಲಿ ಭವಿಷ್ಯದ ಭರವಸೆ ಅಡಗಿರುತ್ತದೆ. ಬಾಲ್ಯದ ಸವಿಯನ್ನು ಸವಿಯುತ್ತಾ ಕನಸುಗಳ ಲೋಕದಲ್ಲಿ ವಿಹರಿಸುವ ಮಕ್ಕಳ ಸಂತೋಷಕ್ಕೆ ಮಿತಿಯೇ ಇಲ್ಲ. ಇಂತಹ ಮುಗ್ಧ ಮನಸ್ಸುಗಳ ನಗು, ಸಂತೋಷ ಹಾಗೂ ಹಕ್ಕುಗಳನ್ನು ಗೌರವಿಸುವ ವಿಶೇಷ ದಿನವೇ ಮಕ್ಕಳ ದಿನಾಚರಣೆ. ಮಕ್ಕಳ ಸಂಭ್ರಮದ ಜತೆಗೆ ಅವರ ಭವಿಷ್ಯದ ಹೊಣೆಗಾರಿಕೆಯನ್ನು ನೆನಪಿಸುವ ಈ ದಿನಕ್ಕೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದೆ ಎಂದು ಹೇಳಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು ಹಾಗೂ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಮತ, ಶೋಭಾ, ಆನಂದ್ ಕುಮಾರ್, ಸಿಬ್ಬಂದಿಗಳಾದ ಸಂತೋಷ, ಕಾವ್ಯ ಸೇರಿದಂತೆ ವಿದ್ಯಾರ್ಥಿಗಳು ಇದ್ದರು

Share This Article