ಪಾಳ್ಯ ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಗುಲಿ ಹೆಣ್ಣಾನೆವೊಂದು ಸಾವನ್ನಪ್ಪಿದೆ

Bangarappa c journalist
Bangarappa c journalist - Journalist
1 Min Read

ಕೊಳ್ಳೇಗಾಲ. ಪಾಳ್ಯ ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಗುಲಿ ಹೆಣ್ಣಾನೆವೊಂದು ಸಾವನ್ನಪ್ಪಿದೆ.

ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ಶಿವಮಲ್ಲನಾಯಕ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆ ಜೋಳ ತಿನ್ನಲ್ಲು ಬಂದ 20 ವರ್ಷದ ಹೆಣ್ಣಾಣೆ ಆನೆ ಸಾವೀಗಿಡಾಗಿದೆ.
ವಿಷಯ ತಿಳಿದು ಅರಣ್ಯ ಇಲಾಖೆಯ ಡಿ.ಎಫ್.ಓ ಭಾಸ್ಕರ್, ಆರ್.ಎಫ್.ಓ ರವಿಕುಮಾರ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿ ಪಶು ವೈದ್ಯಾಧಿಕಾರಿಗಳಿಂದ ಶವ ಪರೀಕ್ಷೆ ನಡೆಸಿದ್ದಾರೆ. ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನ ಮೇಲೆ ಕ್ರಮ ಜರುಗಿಸುವಂತೆ ಆರ್‌ಎಫ್ಓ ರವಿಕುಮಾರ್ ರವರು ಗ್ರಾಮಾಂತರ ಪೊಲೀಸ್ ಠಾಣೆಗೆ ಇಬ್ಬರ ವಿರುದ್ಧ ದೂರು ನೀಡಲಾಗಿದ್ದು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article