ಚಾ.ನಗರ ಹೆಜ್ಜಾಲ ಮಾರ್ಗ 142ಕಿ ಮೀ ರೈಲ್ವೆ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸಚಿವ ವಿ ಸೋಮಣ್ಣ ಆರೋಪ.

Bangarappa c journalist
Bangarappa c journalist - Journalist
2 Min Read

ಕೊಳ್ಳೇಗಾಲ. ಚಾ.ನಗರ ಹೆಜ್ಜಾಲ ಮಾರ್ಗ 142ಕಿ ಮೀ ರೈಲ್ವೆ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸಚಿವ ವಿ ಸೋಮಣ್ಣ ಆರೋಪ.
ಚಾಮರಾಜನಗರದಿಂದ ಹೆಜ್ಜಾಲ ಬೆಂಗಳೂರಿಗೆ ರೈಲ್ವೆ ಸಂರ್ಪಕ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರದ ವೇಗಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತಿಲಾ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮ.ಬೆಟ್ಟಕ್ಕೆ ತೆರಳಲು ಆಗಮಿಸಿದ ವೇಳೆ ಮಾನಸ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ನಂತರ ಅವರು ಮಾತನಾಡಿದರು.

ಬೆಂಗಳೂರು, ಹೆಜ್ಜಾಲ, ಕೊಳ್ಳೇಗಾಲ, ಯಳಂದೂರು, ಸಂತೇಮರಳ್ಳಿ ಮೂಲಕ ಚಾ.ನಗರದವರೆಗೆ ರೈಲ್ವೆ ಮಾರ್ಗ ಕಲ್ಪಿಸಲು 142 ಕಿ.ಮೀ ಭೂಸ್ವಾಧಿನ ಮಾಡಿ ಭೂಮಿ ನೀಡಿ ಇಡೀ ಪ್ರಾಜೆಕ್ಟ್ ನಮ್ಮಗೆ ನೀಡಿದರೆ ರೈಲ್ವೆ ಮಾರ್ಗ ಪೂರ್ಣಗೊಳಿಸಿಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ತಿಳಿಸಿ 25 ದಿನ ಕಳೆದರೂ ಯಾವುದೇ ಸ್ಪಂದನೆ ಇಲ್ಲ. ಸಿದ್ದರಾಮಯ್ಯರವರು ಮುಖ್ಯಮಂತ್ರಿ ಯಾಗಿದ್ದಾಗ ಹತ್ತಾರು ಬಾರಿ ಪತ್ರ ಬರೆದ್ದಿದೆ. ಸಂಸದರಾಗಿದ್ದ ಡಿ.ಕೆ.ಸುರೇಶ್, ಚಾ.ನಗರ ಸಂಸದ ಸುನೀಲ್ ಬೋಸ್ ರವರಿಗೂ ಹೇಳಿದರೂ ಕೂಡ ಏನು ಪ್ರಯೋಜನವಾಗಿಲ್ಲ . ನನ್ನ ಒತ್ತಡ ತಡೆಯಲು ಆಗದೆ ಮೈಸೂರುನಿಂದ ಕುಶಾಲನಗರದವರೆಗೆ ಸರ್ವೇಯಾಗಿ ಡಿಪಿಆರ್ ಆಗಿ ಭೂಸ್ವಾಧೀನ ಪಡಿಸಿಕೊಳ್ಳಲು ತಯಾರಿಗಿದ್ದ ಯೋಜನೆಗೆ ರಾಜ್ಯ ಹಣವಿಲ್ಲ ಎಂದು ಪತ್ರ ಬರೆದರು.
ಸುಮಾರು 25 ರಿಂದ 30 ವರ್ಷದ ಯೋಜನೆ ತುಮಕೂರು, ದಾವಣಗೆರೆ, ರಾಯದುರ್ಗದವರೆಗೆ ಸುಮಾರು 217 ಕೀ.ಮೀ ರೈಲ್ವೆ ಮಾರ್ಗ ಕಾಮಗಾರಿಯನ್ನು ಡಿಸೆಂಬರ್ 27 ರೊಳಗೆ ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗು ವುದು.ನಾನು ರಾಜ್ಯದಲ್ಲಿ ಸುಮಾರು 52 ಸಾವಿರ ಕೋಟಿ ರೂ.ಗಳ ಹಳೇ ಯೋಜನೆಗಳನ್ನು ಕೈಗೆತ್ತಿಕೊಂಡು ಎಲ್ಲಾ ಮುಕ್ತಾಯ ಹಂತಕ್ಕೆ ಬಂದಿದೆ. ಕರ್ನಾಟಕ ಸರ್ಕಾರ ರೈಲ್ವೆ ಮತ್ತು ಹೈವೈಗೆ ಭೂಸ್ವಾಧೀನ ಪಡಿಸಿಕೊಳ್ಳುವ ಮೂಲಕ ಭಾರತ ಸರ್ಕಾರದ ಜೊತೆ ಸಹಕರಿಸುತ್ತಿಲ್ಲ ಕರ್ನಾಟಕ ಕೊನೆ ಹಂಚಿನಲ್ಲಿರುವ ಚಾ.ನಗರವನ್ನು ಅಭಿವೃದ್ಧಿ ಪಡಿಸಲು ಹೇಗೆ ಸಾಧ್ಯ ಎಂದರು

ನೆನ್ನೆ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ನರೇಂದ್ರಮೋದಿ 15.600 ಸಾವಿರ ಕೋಟಿ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಆದರೂ ಜನರಿಗೆ ಮೋದಿ ವಿರುದ್ಧ ತಪ್ಪು ಸಂದೇಶವನ್ನು ಹೇಳುವುದನ್ನು ಬಿಡಬೇಕು ಎಂದರು.

ಮಾಧ್ಯಮದ ಪ್ರಶ್ನೆಗೆ ಮಾತನಾಡಿದ ಅವರು, ರಾಹುಲ್ ಗಾಂದಿ ಭಾರತದ ದೇಶದ ಇತಿಹಾಸ ಗೊತ್ತಿಲ್ಲ. ಈ ದೇಶದ ವ್ಯವಸ್ಥೆ, ಸಂಸ್ಕಾರ ಏನುವುದು ಗೋತ್ತಿಲ್ಲ‌. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಅಷ್ಟೆ ಅವರ ಪೋನ್ ಟ್ಯಾಪ್ ಮಾಡುವ ಅವಶ್ಯಕತೆ ಇಲ್ಲ ಎಂದರು.

ಈ ಸಂಧರ್ಭದಲ್ಲಿ ಮಾನಸ ಕಾಲೇಜು ಸಂಸ್ಥೆ ಕಾರ್ಯದರ್ಶಿ ದತ್ತೇಶ್, ಅಧ್ಯಕ್ಷ ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಪುಟ್ಟಣ್ಣ, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ಕಾರ್ಯದರ್ಶಿ ಮಹೇಶ್ ಕೆಂಪನಪಾಳ್ಯ, ಅಚ್ಗಾಲ್ ಮಹದೇವಸ್ವಾಮಿ, ಮಾಜಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಮಾಜಿ ಸದಸ್ಯರು ಮಂಗಲ ಶಿವಕುಮಾರ್ ಹಾಗೂ ಇತರರು ಇದ್ದರು.

Share This Article