ಆರೋಗ್ಯ ತಪಾಸಣಾ ಶಿಬಿರ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ

Bangarappa c journalist
Bangarappa c journalist - Journalist
3 Min Read

ಆರೋಗ್ಯ ತಪಾಸಣಾ ಶಿಬಿರ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ

ನಮ್ಮ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಕೆವಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಾಳೆ ನಡೆಯಬೇಕಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯರ ಲಭ್ಯತೆಯ ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದು, ಸೋಮವಾರ, ನವೆಂಬರ್ 16ರಂದು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ನಮ್ಮ ಸದಸ್ಯರಿಗೆ ಮಾತ್ರ ಹಲವಾರು ಆರೋಗ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿ ಲಭ್ಯವಿರುತ್ತವೆ.

  1. ಕಣ್ಣಿನ ತಪಾಸಣೆ (Eye Check-up)
  2. ಶ್ವಾಸಕೋಶದ ಕಾರ್ಯಕ್ಷಮತೆ ಪರೀಕ್ಷೆ (Pulmonary Function Test)
  3. ಇಸಿಜಿ (ECG)
  4. ಪ್ಯಾಪ್ ಸ್ಮಿಯರ್ ಪರೀಕ್ಷೆ (Pap Smear Test)
  5. ಮೂಳೆ ಸಾಂದ್ರತೆ ಪರೀಕ್ಷೆ (Bone Mineral Density Test)
  6. ಫ್ಯಾಟಿ ಲಿವರ್ ಪತ್ತೆಹಚ್ಚುವ ಫೈಬ್ರೋಸ್ಕ್ಯಾನ್ (FibroScan)
  7. ರಕ್ತದ ಸಕ್ಕರೆ ಪರೀಕ್ಷೆ (GRBS)
  8. ಹಿಮೋಗ್ಲೋಬಿನ್ ಮಟ್ಟದ ಪರೀಕ್ಷೆ (Hemoglobin Test) ಇಷ್ಟನ್ನೂ ತಪಾಸಣೆ ಮಾಡಲಾಗುತ್ತದೆ.
    ಈ ಹಿಂದೆ ಕಾವೇರಿ ಆಸ್ಪತ್ರೆಯಲ್ಲಿ ನಡೆದ ಮಹಿಳಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ಯಾಪ್ ಸ್ಮಿಯರ್ ಮತ್ತು ಬೋನ್ ಮಿನರಲ್ ಡೆನ್ಸಿಟಿ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದವರು ಈ ಶಿಬಿರದಲ್ಲಿ ಮಾಡಿಸಿಕೊಳ್ಳಬಹುದು.

ಶಿಬಿರದಲ್ಲಿ ಗ್ಯಾಸ್ಟ್ರೋಎಂಟರಾಲಜಿ, ಗ್ಯಾಸ್ಟ್ರೈಟಿಸ್ ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತಜ್ಞ ವೈದ್ಯರಲ್ಲಿ ತಮ್ಮ ಸಂದೇಹಗಳನ್ನು ಕೇಳಿ ಪರಿಹಾರ ಪಡೆಯಬಹುದು.ಅದೇ ರೀತಿ, ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಆರ್ಥೋಪೆಡಿಕ್ ತಜ್ಞರ ಸಲಹೆ, ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞರ ಸಲಹೆ ಪಡೆಯಬಹುದು.

ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರೊಂದಿಗೆ ನೇರವಾಗಿ ಚರ್ಚಿಸಿ ಮಾರ್ಗದರ್ಶನ ಪಡೆಯುವ ಅವಕಾಶವಿರುತ್ತದೆ.

ಇದಲ್ಲದೆ ವೈದ್ಯರು ಶಿಫಾರಸು ಮಾಡುವ ಅಥವಾ ತಮಗೆ ಅಗತ್ಯವಿರುವ ಹೆಚ್ಚುವರಿ ಪರೀಕ್ಷೆಗಳನ್ನು ಬೇಕಿದ್ದರೆ ಮಾತ್ರ 20% ರಿಯಾಯಿತಿಯಲ್ಲಿ, ನಿಗದಿತ ಶುಲ್ಕ ಪಾವತಿಸಿ ಮಾಡಿಸಿಕೊಳ್ಳಬಹುದು. ಸದಸ್ಯರಿಗೆ ಮೇಲಿನ ಎಲ್ಲಾ ನಿಗದಿತ ತಪಾಸಣೆಗಳು ಸಂಪೂರ್ಣ ಉಚಿತವಾಗಿರುತ್ತವೆ.

ಆರೋಗ್ಯದ ಅರಿವು ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ನಮ್ಮ ಸದಸ್ಯರ ಕುಟುಂಬದವರು, ಸ್ನೇಹಿತರು, ಕಿಟ್ಟಿ ಪಾರ್ಟಿ ಸ್ನೇಹಿತೆಯರು ಹಾಗೂ ಪರಿಚಯದ ಮಹಿಳೆಯರನ್ನೂ ಈ ಶಿಬಿರಕ್ಕೆ ಆಹ್ವಾನಿಸಬಹುದು. ಜಾತಿ, ಧರ್ಮದ ಯಾವುದೇ ಭೇದವಿಲ್ಲದೆ ಎಲ್ಲಾ ಮಹಿಳೆಯರೂ ಭಾಗವಹಿಸಬಹುದು. ಆದರೆ ನಮ್ಮ ಸದಸ್ಯರಲ್ಲದ ಹೊರಗಿನ ಪ್ರತಿಯೊಬ್ಬರಿಗೂ ₹100 ನೋಂದಣಿ ಶುಲ್ಕ ಇರುತ್ತದೆ. ಈ ಶುಲ್ಕವನ್ನು ತಮ್ಮ ತಮ್ಮ ಗ್ರೂಪ್ ಲೀಡರ್‌ಗಳಿಗೆ ನೀಡಬೇಕು. ಶಿಬಿರಕ್ಕೆ ಆಗಮಿಸುವವರ ಹೆಸರು ಮತ್ತು ಅಗತ್ಯ ವಿವರಗಳನ್ನು ಮುಂಚಿತವಾಗಿ ಗ್ರೂಪ್ ಲೀಡರ್‌ಗಳಿಗೆ ತಿಳಿಸಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಶಿಬಿರಕ್ಕೆ ಎಷ್ಟು ಜನರು ಆಗಮಿಸುತ್ತಾರೆ ಎಂಬ ನಿಖರ ಮಾಹಿತಿ ನಮಗೆ ದೊರೆಯುತ್ತದೆ.

ಕನ್ನಡ ರಾಜ್ಯೋತ್ಸವ
ನವೆಂಬರ್ ತಿಂಗಳ ವಿಶೇಷತೆಯಾಗಿ ಆರೋಗ್ಯ ಶಿಬಿರದ ಜೊತೆಗೆ ಕನ್ನಡ ರಾಜ್ಯೋತ್ಸವವನ್ನೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದೇವೆ. ಆದ್ದರಿಂದ ಎಲ್ಲರೂ ಹಳದಿ ಅಥವಾ ಕೆಂಪು ಬಣ್ಣದ ಸೀರೆಯನ್ನು ಧರಿಸಿ ಬರಬೇಕಾಗಿ ಆತ್ಮೀಯವಾಗಿ ವಿನಂತಿಸುತ್ತೇವೆ.
ನಿಮ್ಮ ಸ್ನೇಹಿತೆಯರು ಮತ್ತು ಸಂಬಂಧಿಕರನ್ನೂ ಆಹ್ವಾನಿಸುವಾಗ ಇದೇ ಉಡುಗೆ ಸಂಹಿತೆಯನ್ನು ತಿಳಿಸಿ. ಎಲ್ಲರೂ ಒಂದೇ ರೀತಿಯ ಕನ್ನಡದ ಬಣ್ಣದಲ್ಲಿ ಒಟ್ಟಾಗಿ ಸೇರಿ ರಾಜ್ಯೋತ್ಸವ ಆಚರಿಸುವುದು ನಮ್ಮೆಲ್ಲರಿಗೂ ಸಂತೋಷದ ಕ್ಷಣವಾಗಲಿದೆ.

ಸ್ಥಳ: ನೇಗಿಲಯೋಗಿ ಭವನ
ದಿನಾಂಕ: ಸೋಮವಾರ, ನವೆಂಬರ್ 16, ಬೆಳಗ್ಗೆ 9.30 ರಿಂದ 9.45ರ ಒಳಗೆ ಎಲ್ಲರೂ ಆಗಮಿಸಬೇಕು.

🙏 ಸದಸ್ಯರಲ್ಲಿ ವಿಶೇಷ ಮನವಿ:

ಈ ಕಾರ್ಯಕ್ರಮದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲು, ಸೋಮವಾರದಂದು ಭಾಗವಹಿಸುವುದನ್ನು ಖಚಿತಪಡಿಸುವವರು ದಯವಿಟ್ಟು ಈ ಸಂದೇಶಕ್ಕೆ 👍 ಹಾಕುವ ಮೂಲಕ ತಮ್ಮ ಒಪ್ಪಿಗೆಯನ್ನು ತಿಳಿಸಬೇಕಾಗಿ ವಿನಂತಿ.

ಹೊರಗಿನವರನ್ನು ಆಹ್ವಾನಿಸುವವರು ಕಡ್ಡಾಯವಾಗಿ ತಮ್ಮ ಗ್ರೂಪ್ ಲೀಡರ್‌ಗಳಿಗೆ ಮಾಹಿತಿ ನೀಡಿ ಹೆಸರು ನೋಂದಾಯಿಸಲು ಮರೆಯಬೇಡಿ.

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಸಂದೇಶದ ಮೂಲಕವಾಗಲಿ ಅಥವಾ ದೂರವಾಣಿ ಮೂಲಕವಾಗಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಧನ್ಯವಾದಗಳೊಂದಿಗೆ,
🌺 ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗ 🌺

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:: 9741731955

Share This Article