ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹನೂರು ತಾಲೂಕಿನ ಮಂಗಲ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು
.
ಚಾಮರಾಜನಗರ : ಜಿಲ್ಲಾ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹನೂರು ತಾಲೂಕಿನ ಮಂಗಲ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ವಿಜೇತರಾಗಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗಳ ವಿವರ:
17 ವರ್ಷದೊಳಗಿನ ಬಾಲಕಿಯರ ವಿಭಾಗ:
ಮೈನಾ .ಸಿ:
1500 ಮೀಟರ್ ಓಟ – ಪ್ರಥಮ ಸ್ಥಾನ
3000 ಮೀಟರ್ ಓಟ – ಪ್ರಥಮ ಸ್ಥಾನ
ತಮನ್ನಾ ಖಾನಂ:
200 ಮೀಟರ್ ಓಟ – ಪ್ರಥಮ ಸ್ಥಾನ
100 ಮೀಟರ್ ಓಟ – ದ್ವಿತೀಯ ಸ್ಥಾನ
ಉದ್ದ ಜಿಗಿತ – ಪ್ರಥಮ ಸ್ಥಾನ
ಬಾಲಕರ ವಿಭಾಗ:
ರಂಜಿತ್ .ಎಸ್: 1500 ಮೀಟರ್ ಓಟ – ಪ್ರಥಮ ಸ್ಥಾನ (ರಾಜ್ಯ ಮಟ್ಟಕ್ಕೆ ಆಯ್ಕೆ)
ವಿಶೇಷ ಸಾಧನೆ:
ತಮನ್ನಾ ಖಾನಂ ಅವರು ತಮ್ಮ ನಿರಂತರ ಪರಿಶ್ರಮದಿಂದ ಸತತ 3 ವರ್ಷಗಳಿಂದ ರಾಜ್ಯ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ಶಿಪ್ (ವೈಯಕ್ತಿಕ ಸಮಗ್ರ ಪಾರಿತೋಷಕ) ಪಡೆದುಕೊಂಡಿದ್ದಾರೆ.
ದಸರಾ ರಜೆಯಲ್ಲೂ ತಮ್ಮ ನಿರಂತರ ಅಭ್ಯಾಸದಿಂದ ಚಾಮರಾಜನಗರ ಜಿಲ್ಲಾ ಕ್ರೀಡಾಕೂಟದಲ್ಲೂ ಶ್ರೇಷ್ಠ ಸಾಧನೆ ಮಾಡಿ ಶಾಲೆ, ಗ್ರಾಮ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್. ತರಬೇತುದಾರರಾದ ಶಂಭಯ್ಯ, ಶಾಲಾ ಶಿಕ್ಷಕರುಗಳಾದ ಸೂರ್ಯಕಾಂತ್ ,ಸತೀಶ್ ವೆಂಕಟೇಶ್ ಮಹದೇವಸ್ವಾಮಿ ಪುಟ್ಟಸ್ವಾಮಿ, ಅಂಜಲಿ, ಪ್ರಥಮ ದರ್ಜೆ ಸಹಾಯಕ ವೆಂಕಟೇಶ್, ಬಾಲು ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
