ಕ್ರೀಡೆಗಳಿಂದ ಮಕ್ಕಳು ದೈಹಿಕವಾಗಿ ಶಕ್ತಿವಂತರಾಗಬಹುದು-ನಿವೃತ್ತ ದೈಹಿಕ ಶಿಕ್ಷಕ-ಜಯರಾಜು


ಚಾಮರಾಜನಗರ, ನ.೦೪- ಕ್ರೀಡೆ ಮತ್ತು ವ್ಯಾಯಾಮಮಾಡುವುದರಿಂದ ಮಕ್ಕಳ ಶಕ್ತಿವಂತರಾಗಬಹುದು ಜೊತೆಗೆ ಜ್ಞಾನವು ವೃದ್ದಿಯಾಗುತ್ತದೆ. ಮನೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಿ ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಂದು ನಿವೃತ್ತ ದೈಹಿಕ ಶಿಕ್ಷಕರಾದ ಜಯರಾಜು ತಿಳಿಸಿದರು.
ಸೇಂಟ್ ಜೋಸೆಫ್ಸ್ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆ ಆವರಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು “ಕ್ರೀಡೆಗಳು ವ್ಯಕ್ತಿತ್ವ, ಒಗ್ಗಟ್ಟು ಮತ್ತು ಆರೋಗ್ಯಕರ ಮನಸ್ಸನ್ನು ಬೆಳೆಸುತ್ತವೆ.” ಯಾವುದೇ ವಿದ್ಯಾರ್ಥಿಗೆ ಅವರ ಗುಣಕ್ಕೆ ಅನುಸರವಾಗಿ ಅನುಕೂಲಗಳನ್ನು ಕಲ್ಪಸಿದರೆ ಅಂತಹ ವಿದ್ಯಾರ್ಥಿಯು ಬೆಳೆಯಲು ಸಾಧ್ಯ ಶಿಸ್ತು ಯಾವಶಾಲೆಯಲ್ಲಿ ಇರುತ್ತದೋ ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚು ಇರುತ್ತದೆ. ಸೇಂಟ್ ಜೋಸೆಫ್ಸ್ ಶಾಲೆ ಚಾಮರಾಜನಗರದ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಅದರಲ್ಲಿ ಅನೇಕರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ರೀಟಾ ಜೇನ್, ಮಾತನಾಡಿ ನಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಹಾಗೂ ರಾಷ್ಟçಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಂದಿದ್ದಾರೆ ಅವರಿಗೆ ನಮ್ಮ ಶಾಲೆಯ ಪರವಾಗಿ ಅಭಿನಂದನೆಗಳು. ಪ್ರತಿವರ್ಷದಂತೆ ಈ ಬಾರಿಯು ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಶಾಲೆಯ ಮಕ್ಕಳು ಸಂತೋಷದಿAದ ಭಾಗವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಶೇಖರ್, ಸೇಂಟ್ ಜೋಸೇಫ್ ಆಸ್ಪತ್ರೆಯ ಸಿಸ್ಟರ್ ಜೂಲಿಯಾನಾ,ಸಾಮಾಜಿಕ ಸೇವಾ ವಿಭಾಗದ ಸಿಸ್ಟರ್ ಮೇರಿಯಾಜ್ಯೋಸ್, ಹಾಗೂ ಶಾಲಾ ಶಿಕ್ಷಕ-ಹಾಗೂ ಶಿಕ್ಷಕಿಯರು ಶಾಲೆಯ ದೈಹಿಕ ಶಿಕ್ಷಕ ಮಹಾದೇವಯ್ಯ ಉಪಸ್ಥಿತರಿದ್ದರು
ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
