ರಾಮನಗರ ಸಿಎಂ ಭೇಟಿ ನ.5 ಕ್ಕೆ ಮುಂದೂಡಿಕೆ

ರಾಮನಗರ, ನ.2-
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಮನಗರ ಭೇಟಿ ಕಾರ್ಯಕ್ರಮವನ್ನು ನ.5 ಕ್ಕೆ ಮುಂದೂಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯೂರು ವಿಧಾಸಭೆ ಉಪ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಹಲವು ತುರ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ಹಿನ್ನಲೆಯಲ್ಲಿ ನ.3 ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ನ.5ಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಮೊದಲ ಮಹಡಿಯಲ್ಲಿ ನೂತನ ಸಭಾ ಭವನ, ನಗರಸಭೆ ಆವರಣದಲ್ಲಿ ಮಾಗಡಿ ಕೆಂಪೆಗೌಡ ಪ್ರತಿಮೆ ಅನಾವರಣ, ನಗರದ ಹೃದಯ ಭಾಗದಲ್ಲಿ ಕ್ಲಾಕ್ ಟವರ್ ಉದ್ಘಾಟನೆ, ಫುಡ್ ಕೋರ್ಟ್ ಸೇರಿದಂತೆ ಹಲವು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ 11 ಸಾವಿರ ಅಸಂಘಟಿತ ಕಾರ್ಮಿಕರಿಗೆ ವಿಮಾ ಬಾಂಡ್ ವಿತರಣೆ, ಕುಶಲ ಕರ್ಮಿಗಳಿಗೆ ಕಿಟ್, ಟೀ ಅಂಗಡಿಗಳಿಗೆ ಸ್ಟೀಮರ್ ಗಳು, 2400 ಬೀದಿ ಬದಿ ವ್ಯಾಪಾರಿಗಳಿಗೆ ನೀರಿನ ಫ್ಲಾಸ್ಕ್, 670 ಜನ ಆಟೋ ಚಾಲಕರಿಗೆ ಸಮವಸ್ತ್ರ, ವಿಶ್ವಕರ್ಮ ಜನಾಂಗ ಸೇರಿದಂತೆ ಹಲವು ಕುಶಲಕರ್ಮಿಗಳಿಗೆ ಕೌಶಲ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೆ ಸಂಧರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆ, ಕಾರ್ಯಕ್ರಮ ಉದ್ಘಾಟನೆ ಸ್ಥಳ ಪರಿಶೀಲನೆ ನಡೆಸಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರೊಂದಿಗೆ ಚರ್ಚೆ ನಡೆಸಿದರು.

