ಜಿಬಿಡಿಎ ಅಧ್ಯಕ್ಷರಾಗಿ ಎಲ್.ಚಂದ್ರಶೇಖರ್ ಅಧಿಕಾರ ಸ್ವೀಕಾರ

Bangarappa c journalist
Bangarappa c journalist - Journalist
1 Min Read

ಜಿಬಿಡಿಎ ಅಧ್ಯಕ್ಷರಾಗಿ ಎಲ್.ಚಂದ್ರಶೇಖರ್ ಅಧಿಕಾರ ಸ್ವೀಕಾರ

ರಾಮನಗರ :
ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಅವರ ಪುತ್ರ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಲ್.ಚಂದ್ರಶೇಖರ್ ಅವರು ಜಿಬಿಡಿಎ ನೂತನ‌ ಅಧ್ಯಕ್ಷರಾಗಿ ಸೋಮವಾರ ನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಅತ್ಯಂತ ಸರಳ ರೀತಿಯಲ್ಲಿ ಪೂಜ್ಯ ಸಲ್ಲಿಸಿ ನೂತನ ಅಧಿಕಾರ ಸ್ವೀಕಾರ ಮಾಡಿದರು. ಮೂರು ಬಾರಿ ಶಾಸಕರಾಗಿ ರಾಮನಗರದ ಜನಮಾನಸದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿರುವ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ಪುತ್ರರಾಗಿರುವ ಎಲ್.ಚಂದ್ರಶೇಖರ್ ಅವರಿಗೆ ಜಿಬಿಡಿಎ ಅಧ್ಯಕ್ಷ ಸ್ಥಾನ ದೊರೆತಿರುವುದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.

ನೂತನ‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವರು, ಬಿಡದಿ ಟೌನ್ ಷಿಪ್ ವಿಚಾರದಲ್ಲಿ ರೈತರ ಮನ ಒಲಿಸಿ ಯೋಜನೆ ಕಾರ್ಯಗತ ಮಾಡಲು ಕ್ರಮ ವಹಿಸಲಾಗುವುದು. ಯಾವುದೆ ರೈತರ ಭೂಮಿಯನ್ನು ಬಲವಂತದಿಂದ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಪ್ರಾಮಾಣಿಕರಿಗೆ ಸ್ಥಾನ‌- ಎಸ್.ರವಿ

ಜಿಬಿಡಿಎ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಲ್.ಚಂದ್ರಶೇಖರ್ ಅವರನ್ನು ಅಭಿನಂದಿಸಿದ ವಿಧಾನ‌ ಪರಿಷತ್ ಸದಸ್ಯ ಎಸ್.ರವಿ ಅವರು ಮಾಧ್ಯಮ‌ ಗೋಷ್ಠಿಯಲ್ಲಿ ಮಾತನಾಡಿ,
ಪಕ್ಷ ಹಿತಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರನ್ನು ಗುರ್ತಿಸಿ ನಿಗಮ, ಮಂಡಲಿ ಮತ್ತು ಸ್ಥಳೀಯ‌ ಪ್ರಾಧಿಕಾರಕ್ಕೆ ನೇಮಕ‌ ಮಾಡಲಾಗಿದೆ‌. ಪಕ್ಷ ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಪಕ್ಷವನ್ನು ಕಟ್ಟಿದ ಕಾರ್ಯಕರ್ತರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವುದು ವರಿಷ್ಠರ ಕೆಲಸ ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧ್ಯೇಯ ಎಂದು‌ ಹೇಳಿದರು.

ಜಿಬಿಡಿಎ ನಿಕಟಪೂರ್ವ ಅಧ್ಯಕ್ಷ ನಟರಾಜ್ ಗಾಣಕಲ್, ನಿರ್ದೇಶಕರಾದ ಕಲ್ಯಾಣಕುಮಾರಿ, ಜಯರಾಮಯ್ಯ, ಅಬ್ಬನಕುಪ್ಪೆ ರಮೇಶ್, ಪ್ರಮುಖರಾದ ಹೊಸೂರು ರಾಜಣ್ಣ, ಚಿಕ್ಕ ಬ್ಯಾಟಪ್ಪ, ಡಿಸಿಸಿ ಮಾಜಿ ಅಧ್ಯಕ್ಷ ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಹರೀಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಸ್ವಾಮಿ, ಕೂನಮುದ್ದನಹಳ್ಳಿ ರುದ್ರೇಶ್, ಶಿವಕುಮಾರಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article