ರಾಮನಗರ : ಶೈಕ್ಷಣಿಕ ಸಂಸ್ಥೆಗಳಿಗೆ ಸೇವಾ ಶುಲ್ಕ ವಿಧಿಸಲು ಸಾಮಾನ್ಯ ಸಭೆಯಲ್ಲಿ‌ ಒಮ್ಮತದ ನಿರ್ಣಯ

Bangarappa c journalist
Bangarappa c journalist - Journalist
2 Min Read

ರಾಮನಗರ : ಶೈಕ್ಷಣಿಕ ಸಂಸ್ಥೆಗಳಿಗೆ ಸೇವಾ ಶುಲ್ಕ ವಿಧಿಸಲು ಸಾಮಾನ್ಯ ಸಭೆಯಲ್ಲಿ‌ ಒಮ್ಮತದ ನಿರ್ಣಯ

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ

ರಾಮನಗರ :
ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರು ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವತ್ತಿಗೆ ಸೇವಾ ಶುಲ್ಕ ವಿಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ರಾಮನಗರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರು ವಿಷಯ ಪ್ರಸ್ತಾಪಿಸಿದಾಗ ಎಲ್ಲಾ ಸದಸ್ಯರು ಒಮ್ಮತದಿಂದ‌ ಅನುಮೋದಿಸಿದರು. ಖಾಸಗಿ ಶಿಕ್ಣಣ ಸಂಸ್ಥೆಗಳು ತಮಗಿಷ್ಟಬಂದಂತೆ ಪೋಷಕರಿಂದ ಹಣ ಸುಲಿಗೆ ಮಾಡುತ್ತಿರುವುದರಿಂದ‌ ಸೇವಾ ಶುಲ್ಕ ವಿಧಿಸುವುದರಿಂದ ಯಾವುದೆ ರೀತಿಯ ತೊಂದರೆ ಆಗುವುದಿಲ್ಲ ಎಂದರು.

ವಿವಿಧ ಯೋಜನೆಗಳಡಿಯಲ್ಲಿ ಅನುಮೋದನೆಯಾಗಿರುವ ಕಾಮಗಾರಿಗಳ ಅನುಮೋದನೆ, ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಗೆ ಸೇರಿದ್ದು ಖಾಲಿಯುರುವ ವಾಣಿಜ್ಯ ಮಳಿಗೆಗಳನ್ನು ಹರಾಜು ಹಾಕಲು‌ ಜಿಲ್ಲಾಧಿಕಾರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವುದು, ನಗರಸಭೆ ಕಚೇರಿ ಮೆಲ್ಬಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸಭಾಂಗಣಕ್ಕೆ ಡಿ.ದೇವರಾಜ ಅರಸು ಹೆಸರು ನಾಮಕರಣ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಹಲವು ವರ್ಷಗಳಿಂದ ಸುಪರ್ದಿಯಲ್ಲಿರುವ ವಿವಿಧ ಸಂಘ ಸಂಸ್ಥೆಗಳಿಗೆ ಈಗಾಗಲೆ ನೀಡಲಾಗಿರುವ ನಿವೇಶನಗಳಿಗೆ ಸರ್ಕಾರಿ ಮಂಜೂರಾತಿ ಪಡೆಯಲು ಸಲ್ಲಿಸುವ ವಿಚಾರಕ್ಕೆ ಅನುಮೋದನೆ ನೀಡಲಾಯಿತು. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ನಡೆಸಲು ಚನ್ನಪಟ್ಟಣ ತಾಲೂಕಿನ ಯಲಚಿಪಾಳ್ಯದಲ್ಲಿ ಕಟ್ಟಡ ಬಾಡಿಗೆ ಪಡೆಯಲು, ಈಗಾಗಲೆ ಬಿ ಖಾತ ಪಡೆದಿರುವ ಸ್ವತ್ತುಗಳಿಗೆ ಎ ಖಾತೆ ನೀಡುವುದು ಸೇರಿದಂತೆ ಸ್ವತ್ತುಗಳ ಖಾತೆ ಹಂಚಿಕೆ ತ್ವರಿತಗೊಳಿಸುವುದು, ನೀರಿನ ತೆರಿಗೆ ಹಾಗೂ ಇತರ ತೇರಿಗೆ ಸಂಗ್ರಹಿಸಲು ಮಹಿಳಾ ಸ್ವ ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಒಮ್ಮತದ ತೀರ್ಮಾನ‌ ತೆಗೆದುಕೊಳ್ಳಲಾಯಿತು.

ಬಸ್ ನಿಲ್ದಾಣ, ಉದ್ಯಾನವನಗಳಲ್ಲಿ ಸಾರ್ವಜನಿಕರಿಗೆ ಓದಲು ದಿನಪತ್ರಿಕೆ ವ್ಯವಸ್ಥೆ ಮಾಡುವುದು, ಅಸಂಘಟಿತ ಕಾರ್ಮಿಕರಿಗೆ ವಿಮೆ ನೀಡಲು ಫಲಾನುಭವಿಗಳನ್ನು ಆಯ್ಕೆ‌ ಮಾಡುವ ವಿಚಾರಕ್ಕೆ ಅನುಮೋದನೆ ನೀಡಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್ ಆರೀಫ್, ಪೌರಾಯುಕ್ತ ಡಾ.ಜಯಣ್ಣ, ನಗರಸಭೆ ಮಾಜಿ ಅಧ್ಯಕ್ಷರಾದ‌ ಬಿ.ಸಿ.ಪಾರ್ವತಮ್ಮ, ಪವಿತ್ರ, ಸದಸ್ಯರಾದ ಮಂಜುನಾಥ್ ಸೇರಿದಂತೆ‌ ಹಲವರು ಉಪಸ್ಥಿತರಿದ್ದರು.

Share This Article