ಭಾರೀ ಹೆಚ್ಚಳ! 35 ರೂಪಾಯಿ ಇದ್ದ ಟಿಕೆಟ್ ಈಗ ಎಷ್ಟು? ಇಂದು ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

Bangarappa c journalist
Bangarappa c journalist - Journalist
1 Min Read

ಭಾರೀ ಹೆಚ್ಚಳ! 35 ರೂಪಾಯಿ ಇದ್ದ ಟಿಕೆಟ್ ಈಗ ಎಷ್ಟು? ಇಂದು ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

 

ಬೆಂಗಳೂರು (ನ.04): ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಬಿಗ್​ ಶಾಕ್ ನೀಡಿದ್ದು, ಸಾರಿಗೆ ಬಸ್​ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸೌಲಭ್ಯ ಕೊಟ್ಟ ಸರ್ಕಾರ ಇದೀಗ ಬಸ್​ ಟಿಕೆಟ್​ ದರದಲ್ಲಿ ಭಾರೀ ಏರಿಕೆ ಮಾಡಿದೆ. ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ಭೈರತಿ ಸುರೇಶ್ ಅವರು, KSRTC ಯಲ್ಲಿ 23% ಹಾಗೂ BMTCಯಲ್ಲಿ ಶೇಕಡಾ 35% ಟಿಕೆಟ್​ ದರ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಇಂದು ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಭೈರತಿ ಸುರೇಶ್ ಅವ್ರು ಡೀಸೆಲ್ ಬೆಲೆಯಲ್ಲಿ ಹೆಚ್ಚಳ, ನಿರ್ವಹಣಾ ಹೆಚ್ಚಳ ಹೆಚ್ಚಾದ ಹಿನ್ನೆಲೆ ಟಿಕೆಟ್ ದರ ಹೆಚ್ಚಳ ಮಾಡಿದ್ದು. ಹತ್ತು ವರ್ಷದಲ್ಲಿ ಕೇವಲ ಒಂದೇ ಬಾರಿ ಹೆಚ್ಚಳ ಆಗಿದೆ ಎಂದಿದ್ದಾರೆ. ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ ಪ್ರಯಾಣ ದರವನ್ನು ₹9 ಹೆಚ್ಚಳ ಮಾಡಿದ್ದು ,KSRTC, NWRTC, KKRTC ಸರಾಸರಿ 23% , BMTC – 33 ರಿಂದ 35 ಏರಿಕೆ ಮಾಡಿರೋದಾಗಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

BMTC ಟಿಕೆಟ್ ರೇಟ್​ ಗರಿಷ್ಠ ₹10 ಏರಿಕೆ

ಮೆಜೆಸ್ಟಿಕ್ ನಿಂದ ನೆಲಮಂಗಲಕ್ಕೆ 35 ರೂಪಾಯಿ ಇದ್ದ ಬಸ್​ ಟಿಕೆಟ್​ ರೇಟ್ ಇದೀಗ 44 ರೂಪಾಯಿ ಆಗಲಿದೆ. ವಾಯು ವಜ್ರ – BMTC – ಕನಿಷ್ಠ ₹5 ಗರಿಷ್ಠ ₹15 ಏರಿಕೆ ಮಾಡಲಾಗಿದೆ. ಶೇಕಡಾವಾರು ಲೆಕ್ಕಹಾಕಿಲ್ಲ ನಾವು ಸ್ಟೇಜ್ ವೈಸ್ ಲೆಕ್ಕ ಹಾಕಿದ್ದೇವೆ ಎಂದು ಸಚಿವ ಭೈರತಿ ಸುರೇಶ್ ಅವರು ತಿಳಿಸಿದ್ದಾರೆ.

Share This Article