ಬಸವೇಶ್ವರ, ಜಡೇಸ್ವಾಮಿಗೆ ವಿಶೇಷ ಪೂಜೆ ಪರ್ವ . ವರದಿ :- ಬಸವರಾಜ್ ಕಾಂಚಳ್ಳಿ . ಹನೂರು :ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಜಡೇಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು.ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರು ತಿದ್ದು ಬಸವೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚ ಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿ ಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ.

Bangarappa c
1 Min Read

ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದು
ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ.
ತಳಿರು ತೋರಣಗಳಿಂದ ಸಿಂಗರಿಸಿ. ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು . ಎಸ್. ಎ. ಸೌಂಡ್ಸ್ ಸಿಸ್ಟಮ್ ವತಿಯಿಂದ ಪಚ್ಚೆದೊಡ್ಡಿ ಗ್ರಾಮದ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನ ದಾನ ವಿಶೇಷ ಪೂಜೆ ನಡೆದ ನಂತರ ರಾತ್ರಿ 8 ಗಂಟೆಗೆ ನೆರೆದಿರುವ ಭಕ್ತರಿಗೆ ಪಾಯಸ, ಮುದ್ದೆ, ದ್ವಿದಳ ದಾನ್ಯದ ಸಾಂಬಾರು, ಪಲ್ಯ, ಹಪ್ಪಳ,ಅನ್ನಸಾಂಬಾ‌ರ್ ಅನ್ನು ನೆರೆದಿರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನ ಕಲ್ಪಿಸಿದರು. ನಟರಾಜ್ ಮೈಸೂರು ತಂಡದವರಿಂದ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಹರಿಕಥೆ ನಡೆ ಸಲಾಯಿತು. ಇದೇ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಯ ಅರ್ಚಕ ಬಸವರಾಜು, ಅರ್ಚಕರಾದ ಶಿವು, ಶ್ರೀನಿವಾಸ್, ಗೌಡರದ ಮನ್ನಾರ್ ಕೃಷ್ಣಗೌಡ, ಕೃಷ್ಣಗೌಡ, ಕುಮಾರ, ರಾಜು, ಗಣೇಶ್, ಮಾದೇವ, ಚಂದ್ರು, ನಾರಾಯಣ ಗೌಡ, ಪಚ್ಚೇಗೌಡ. ಮಾದೇಶ್ ಗೌಡ ಬಸವರಾಜ್ ಕಾಂಚಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.

Share This Article