ಯುವಕರು ಪ್ರತಿ ಸಮುದಾಯದ ಆಸ್ತಿ: ಯುವ ಮುಖಂಡ ನವನೀತ್ ಗೌಡ

Bangarappa c
1 Min Read

ಯುವಕರು ಪ್ರತಿ ಸಮುದಾಯದ ಆಸ್ತಿ :ಯುವ ಮುಖಂಡ ನವನೀತ್ ಗೌಡ. ವರದಿ:ಮಂಜುನಾಥ್ ಎಂ . ಹನೂರು : ಸಮಾಜದ ಎಲ್ಲಾ ಸಮುದಾಯಗಳಲ್ಲಿ ಯುವಕರೆ ದೇಶದ ಆಸ್ತಿಯಾಗಿದೆ ಇಂದಿನ ಯುಗದಲ್ಲಿ ಯುವ ಶಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯದ ಕಾರ್ಯಗಳ ಜೊತೆಯಲ್ಲಿ ದೇಶ ಸೇವೆಯಲ್ಲಿಯು ಸಹ ತೊಡಗಿಸಿಕೊಂಡರೆ ಅದು ಅವರ ತಂದೆ ತಾಯಿಗಳಿಗೆ ಸಾರ್ಥಕವೆನಿಸುತ್ತದೆ ಎಂದು ಯುವ ಮುಖಂಡರಾದ ಜಿಆರ್ ಜಿ ಪ್ಯೂಯಲ್ ಸ್ಟೇಷನ್ ಮಾಲಿಕರಾದ ನವನೀತ್ ಗೌಡ ತಿಳಿಸಿದರು. ಹನೂರು ಪಟ್ಟಣದಲ್ಲಿ ಅಯೋಜಿಸಿದ ಕೆಂಪೇಗೌಡ ಜಯಂತಿಯ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾದ ಪ್ರತಿಭಾ ಪುರಸ್ಕಾರವನ್ನು ಶ್ಲಾಘಿಸಿದರು, ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವು ಅಲ್ಪ ಪ್ರಮಾಣದಲ್ಲಿದ್ದರು ಸಹ ನಾವು ಮುಂದುವರಿದ ಸಮುದಾಯದ ಜೊತೆಯಲ್ಲಿ ಸಾಗಬೇಕಾಗಿದೆ, ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವೈದ್ಯರಾಗಿ ಹೊರ ಹೊಮ್ಮಿರುವುದು ಹೆಮ್ಮೆಯ ಸಂಗತಿಯಾಗಿದೆ ಇದೇ ರೀತಿ ಹನೂರು ವಿಧಾನಸಭಾ ಕ್ಷೇತ್ರದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಗುರಿ ಹೊಂದಿ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆ ಗೈದು ಉತ್ತಮ ಸಮಾಜ ನಿರ್ಮಾಣ ಮಾಡಬೇಕು . ಕಾರ್ಯಕ್ರಮದಲ್ಲಿ ಸಿಂಗಾನಲ್ಲೂರು ಗ್ರಾಮದ ಮಲ್ಲೇಗೌಡರ ಮಗಳಾದ ಹರ್ಷಿತಾ ಎಂ.ಕಾಮಗೆರೆ ಗ್ರಾಮದ ತೇಜಸ್ವಿನಿ .ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತೇಶ್ ಕುಮಾರ್ ರವರ ಮಗ ಹಿತೈಷಿ ದತ್. ಹನೂರು ಪಟ್ಟಣ ಕೃಷ್ಣೇಗೌಡರ ಮಗ ಮನೋಜ್ ಕುಮಾರ್ ಕೆ. ಮತ್ತು ಹನೂರು ಪಟ್ಟಣದ ಪ್ರಜ್ವಲ್ ರವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸನ್ಮಾನಿಸಿಲ್ಲಾಗಿತು .

Share This Article