ಕಾವ್ಯ ಕಮ್ಮಟಕ್ಕೆ ಆಹ್ವಾನ

ಪಾವಗಡ: ತಾಲ್ಲೂಕಿನ ಸರ್ಕಾರಿ /ಅನುದಾನಿತ/ ಅನುದಾನ ರಹಿತ ಹಾಗೂ ವಸತಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಾವ್ಯ ಕಮ್ಮಟಕ್ಕೆ ಆಹ್ವಾನ.
ದಿನಾಂಕ 8-11-2026 ಭಾನುವಾರದಂದು ಸಹನಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಟಗುಡ್ಡ ಇಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಾವಗಡ ವತಿಯಿಂದ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾವ್ಯ ಕಮ್ಮಟ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾವ್ಯ ಕಮ್ಮಟದಲ್ಲಿ ವಿಷಯ ಪರಿಣಿತರಿಂದ ಕವನಗಳನ್ನು ಬರೆಯುವ ಬಗ್ಗೆ ಅರ್ಥವತ್ತಾಗಿ ಪದಗಳನ್ನು ಜೋಡಿಸುವ ಕೌಶಲ್ಯಗಳನ್ನು ಮಕ್ಕಳಿಗೆ ತಿಳಿಸಲಾಗುವುದು.
ಈ ಕಾರ್ಯಗಾರದಲ್ಲಿ ಅತ್ಯುತ್ತಮವಾಗಿ ಕವನವನ್ನು ರಚಿಸುವಂತಹ ವಿದ್ಯಾರ್ಥಿಗಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕವಿಗೋಷ್ಠಿಯಲ್ಲಿ ಅವಕಾಶ ನೀಡಲಾಗುವುದು.
ಆಸಕ್ತ ವಿದ್ಯಾರ್ಥಿಗಳು ದಿನಾಂಕ 6-11-2026ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕಾಲಾವಕಾಶ ಇರುತ್ತದೆ.
ಅದಾಗಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸೂಚಿಸಲು ಎಲ್ಲ ಮುಖ್ಯೋಪಾಧ್ಯಾಯರು ಮತ್ತು ಕನ್ನಡ ಶಿಕ್ಷಕರಲ್ಲಿ ಮನವಿ.
ನೋಂದಾವಣೆಗಾಗಿ ಸಂಪರ್ಕಿಸಿ :
ಕಟ್ಟಾ ನರಸಿಂಹಮೂರ್ತಿ ಪೋ: 9448333082 ಹೊ.ಮ. ನಾಗರಾಜು, ಪೋ: 9620564544
