ಗಾವಡಗೆರೆ ಗ್ರಾಮದಲ್ಲಿ ಅಮಾವಾಸ್ಯೆಯ ದೀಪಾವಳಿ

Bangarappa c journalist
Bangarappa c journalist - Journalist
2 Min Read

*ಗಾವಡಗೆರೆ ಗ್ರಾಮದಲ್ಲಿ ಅಮಾವಾಸ್ಯೆಯ ದೀಪಾವಳಿ

ಪ್ರಯುಕ್ತ ಶ್ರೀ ಕಾಲಭೈರವೇಶ್ವರ ದೇವರ ಉತ್ಸವ ಆಚರಣೆ: ಗಾವಡಗೆರೆ ಏತ ನೀರಾವರಿ ಯೋಜನೆ ಶೀಘ್ರ ಮಂಜೂರಾತಿ ಕೋರಿ ಹರಕೆ ಹೊತ್ತ ಸತ್ಯಪ್ಪ*

ಇಂದು ಗಾವಡಗೆರೆ ಗ್ರಾಮದಲ್ಲಿ
ಶ್ರೀ ಕಾಲಭೈರವೇಶ್ವರ ದೇವರ ಮೂರ್ತಿಯನ್ನು ಗ್ರಾಮದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತರಲಾಯಿತು.

ಈ ಸಂದರ್ಭದಲ್ಲಿ ಉತ್ಸವ ಮೂರ್ತಿಗೆ ಹೆಗಲು ಕೊಟ್ಟು ಸತ್ಯಪ್ಪ ರವರು ಹೆಜ್ಜೆ ಹಾಕಿದ್ದು ಭೀಕರ ಬರಗಾಲದ ನಡುವೆ ರೈತರಿಗೆ ಯಾವುದೇ ಸಂಕಷ್ಟ ಬಾರದಿರಲಿ ಎಂದು ಮನದಲ್ಲಿ ಸಂಕಲ್ಪ ಮಾಡಿಕೊಂಡರು.

ನಂತರ ಸತ್ಯಪ್ಪ ರವರು ಮಾತನಾಡಿ ಹುಣಸೂರು ತಾಲ್ಲೂಕು ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮಳೆ ಬೀಳುವ (ಅರೆ ಮಲೆನಾಡು) ಹೋಬಳಿ ಕೇಂದ್ರವಾಗಿದ್ದು ಈ ಭಾಗದ ಕೆರೆಗಳಾದ ಗಾವಡಗೆರೆ ಕೆರೆ ಹಾಗೂ ಇತರೆ ಕೆರೆಗಳಾದ ಮಾವಿನಕೆರೆ, ಚೇಣಿಕೆರೆ, ಅತ್ತಿಕಟ್ಟೆ, ನಿಂಗೇಗೌಡನಕಟ್ಟೆ, ಶಿವನಕೆರೆ, ಮಾಚಬಾಯನಹಳ್ಳಿ ಕೆರೆ, ಗಂಗೋಜಿ ಕೆರೆ, ಕಾಳದ್ದನಕಟ್ಟೆ, ಮನುಗನಹಳ್ಳಿ ಕಟ್ಟೆ, ಸುಬ್ಬಪ್ಪನಕಟ್ಟೆ, ಗಾವಡಗೆರೆ ದೊಡ್ಡಕೆರೆ, ಗಾವಡಗೆರೆ ಚಿಕ್ಕೆರೆ, ಕಳ್ಳಿಕೊಪ್ಪಲು ಕೆರೆ, ಮುದ್ದೇಗೌಡನಕಟ್ಟೆ, ಜಾಬಗೆರೆ ಕೆರೆ, ಕಳ್ಳಿಕೊಪ್ಪಲು ಊರಮುಂದಿನಕೆರೆ, ಚಿಕ್ಕಾಡಿಗನಹಳ್ಳಿ ಕೆರೆ, ಕೆರೆಯೂರು ಕೆರೆ, ಹುಲ್ಯಾಳು ಕೆರೆ, ಮಾಚಬಾಯನಹಳ್ಳಿ ಕೆರೆ, ಮೈಲಾಂಬೂರು ಕೆರೆ, ಬಿಳಿಗೆರೆ ಕೆರೆ, ಮಾರಗೌಡನಹಳ್ಳಿ ಕೆರೆ, ಹರವೇ ದೊಡ್ಡಕೆರೆ ಈ ಕೆರೆಗಳಿಗೆ *ಕೃಷ್ಣರಾಜ ಬಲದಂಡೆ ನಾಲೆ (ಕೆ. ಆರ್ ಎಂ ಬಿ ಸಿ) ಯಿಂದ ತಕ್ಷಣದಲ್ಲಿ ಕಾಲುವೆಗಳ* ಮುಖಾಂತರ ಕೆರೆ ಕಟ್ಟೆಗಳನ್ನು ತುಂಬಿಸುವ ಕಾವೇರಿ ನದಿಗೆ ಅಡ್ಡಲಾಗಿ ಗೌಡಗೆರೆ ಏತ ನೀರಾವರಿ ಯೋಜನೆ ಮಂಜೂರಾತಿ ಮಾಡುವಂತೆ ಸತ್ಯ ಎಂ.ಎ.ಎಸ್‌ ಫೌಂಡೇಶನ್‌ ಹಾಗೂ ಸುಮಾರು 500ಕ್ಕೂ ಹೆಚ್ಚು ಮಂದಿ ರೈತರೊಂದಿಗೆ ದಿನಾಂಕ :04-09 -2026 ರಂದು ಗಾವಡಗೆರೆ ಕೆರೆಯ ಬಳಿ ಬೃಹತ್ ಪ್ರತಿಭಟನೆ ಕೈಗೊಂಡು ಮಾನ್ಯ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ವ್ಯವಸ್ಥಾಪಕ ನಿರ್ದೇಶಕರು ಕಾವೇರಿ ನೀರಾವರಿ ನಿಗಮ, ಮುಖ್ಯ ಇಂಜಿನಿಯರ್ ರವರು ದಕ್ಷಿಣ ವಲಯ ಮೈಸೂರು ರವರಿಗೆ ಪತ್ರ ರವಾನಿಸಲಾಗಿತ್ತು.

ನಂತರದಲ್ಲಿ ದಿನಾಂಕ :05-09-2026 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಯತೀಂದ್ರ ಸಿದ್ದರಾಮಯ್ಯರವರ ಪ್ರಜಾ ಸೇವಾ ಆಹವಾಲು ಕಾರ್ಯಕ್ರಮದಲ್ಲಿ, ದಿನಾಂಕ : 12-09-2026 ರಂದು ಗಾವಡಗೆರೆಯಲ್ಲಿ, ದಿನಾಂಕ : 19-09-2026 ರಂದು ಹನಗೋಡು ಗ್ರಾಮದಲ್ಲಿ ನಡೆದ ಪ್ರಜಾಸೇವಾ ಅಹವಾಲು ಸಭೆಯಲ್ಲಿ ಮನವಿ ಮಾಡಲಾಗಿತ್ತು.

ದಿನಾಂಕ : 03-10-2026 ರಂದು ಪಿರಿಯಾಪಟ್ಟಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ಅವರನ್ನು ಪ್ರಜಾ ಸೇವಾ ಅಹವಾಲು ಸಭೆಯಲ್ಲಿ ಭೇಟಿಯಾಗಿ ಖುದ್ದು ಮನವಿ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಂದಾಜು ಪಟ್ಟಿ (ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್) ತಯಾರಿಸುತಿದ್ದೇವೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾರಂಗಿ ಇಲಾಖೆ ಕೆ ಆರ್ ನಗರ ಡಿವಿಜನ್ ರವರಿಂದ ನಮ್ಮ ಸಂಸ್ಥೆಗೆ ಪತ್ರ ರವಾನಿಸಿರುತ್ತಾರೆ.

ಆದ್ದರಿಂದ ಗಾವಡಗೆರೆ ಏತ ನೀರಾವರಿ ಯೋಜನೆ ಶೀಘ್ರವಾಗಿ ಮಂಜೂರಾತಿಯಾಗಲೆಂದು
ಗಾವಡಗೆರೆ ಕೆರೆಯಿಂದ ಹೊರಟ ಉತ್ಸವ ಮೂರ್ತಿಗೆ ಗ್ರಾಮಸ್ಥರೊಂದಿಗೆ ಹೆಗಲು ಕೊಟ್ಟು ಭಗವಂತನಲ್ಲಿ ಪ್ರಾರ್ಥಿಸಿಕೊಂಡರು.

Share This Article