ಜೋತು ಬಿದ್ದ ವಿದ್ಯುತ್ ತಂತಿ: ಗ್ರಾಮಸ್ಥರ ಆತಂಕ.

Bangarappa c journalist
Bangarappa c journalist - Journalist
2 Min Read

*ಆನಂದ್ ಬಸಲಾಪುರ*


ಜೋತು ಬಿದ್ದ ವಿದ್ಯುತ್ ತಂತಿ: ಗ್ರಾಮಸ್ಥರ ಆತಂಕ.

ಸೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರಲ್ಲಿ ಆತಂಕ

ಪಿರಿಯಾಪಟ್ಟಣ : ತಾಲೂಕಿನ ಗಡಿ ಭಾಗವಾದ ಮನುಗನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಹಿನ್ನೆಲೆ ಗ್ರಾಮಸ್ಥರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ

ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ ಪರಿಣಾಮ ಜನ ಸಾಮಾನ್ಯರು ಭಯದ ನೆರಳಲ್ಲಿ ಬದುಕುವಂತಾಗಿದೆ. ಜೋತು ಬಿದ್ದಿರುವ ರಸ್ತೆಯಲ್ಲಿ 10 ಕ್ಕೂ ಹೆಚ್ಚು ಮನೆಗಳು ಇದ್ದು ಗ್ರಾಮಸ್ಥರು ಓಡಾಡುವುದಕ್ಕೆ, ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಚಾಲನೆ ಮಾಡಲು ಕೂಡ ಸಂಚಕಾರ ಒದಗಿ ಬಂದಿದೆ ವಿದ್ಯುತ್ ಕಂಬಗಳ ನಡುವಿನ ಅಂತರ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇದ್ದ ಕಾರಣ ವಿದ್ಯುತ್ ತಂತಿಗಳು ಜೊತು ಬಿದ್ದು ಕಾಡಲಾರಂಭಿಸಿದೆ. ಆಕಸ್ಮಿಕವಾಗಿ ತಂತಿಗಳು ಹರಿದು ಬಿದ್ದರೆ ದೊಡ್ಡ ಅನಾಹುತವೇ ಸಂಭವಿಸಲಿದೆ.
ವಿದ್ಯುತ್ ತಂತಿಗಳು ನೆಲಕ್ಕೆ ಅತಿ ಸಮೀಪದಲ್ಲೇ ನೇತಾಡುತ್ತಿದ್ದು, ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿವೆ ವಿದ್ಯುತ್ ಕಂಬಗಳ ನಡುವೆ ಜೋಡಿಸಲಾದ ತಂತಿಗಳು ತುಂಬಾ ಹಳೆಯದಾಗಿದ್ದು, ಹೊಸ ವಿದ್ಯುತ್ ತಂತಿ ಅಳವಡಿಸಲಾಗಿಲ್ಲ.
ಸೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನದಿಂದಾಗಿ ಭಯದಲ್ಲಿಯೇ ಓಡಾಡುವಂತಾಗಿದೆ ಕೂಡಲೇ ವಿದ್ಯುತ್ ಮಾರ್ಗಗಳನ್ನು ಬದಲಿಸಲು ಅಗತ್ಯವಾದ ಕ್ರಮಕೈಗೊಳ್ಳಬೇಕಿದೆ ಒಂದು ವೇಳೆ ನಿಷ್ಕಾಳಜಿ ವಹಿಸಿದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮನುಗನಹಳ್ಳಿ ಗ್ರಾಮದ ಗ್ರಾಮಸ್ಥ ಶ್ಯಾಮಂತ್ ಮಾತನಾಡಿ ವಿದ್ಯುತ್ ಕಂಬಗಳ ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿ ಇವೆ. ಕಂಬಗಳಿಗೆ ಗೈ ಅಳವಡಿಸಿ ತಂತಿಗಳನ್ನು ಬಿಗಿಗೊಳಿಸುವಂತೆ ಸೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಕಳೆದ ನಾಲ್ಕೈದು ದಿನಗಳಿಂದ ಮಳೆ ಬೀಳುತ್ತಿದ್ದು ರಭಸದ ಗಾಳಿ ಬೀಸುತ್ತಿದೆ. ಯಾವಾಗ ಅವಘಡ ಸಂಭವಿಸುತ್ತದೊ ಹೇಳಲಿಕ್ಕಾಗದು ಜನ- ಜಾನುವಾರುಗಳು ಓಡಾಡುವುದಕ್ಕೂ ಭಯಪಡುವಂತಾಗಿದೆ ಎಂದು ಹೇಳಿದರು.

ಹೇಳಿಕೆ : 1
ಮನುಗನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ವಿಷಯ ತಿಳಿದು ಬಂದಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದೇನೆ ತಕ್ಷಣದಲ್ಲೇ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸಲಾಗುವುದು ಹಾಗೂ ವಿದ್ಯುತ್ ಕಂಬ ಹಾಕಿ ಸಮಸ್ಯೆಯನ್ನು ಬಗೆಹರಿಸಲಾಗುವುದು.

ಮಹೇಶ್
ಜೆಇ ಸೆಸ್ಕಾಂ,
ಬೆಟ್ಟದಪುರ ವಿಭಾಗ

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದಿನೇಶ್, ಕುಮಾರ್, ಶಕುಂತಲಾ, ಮಣಿಯಮ್ಮ, ನಾಗರಾಜು ಚೇತನ್, ಲೋಕೇಶ್ ಸೇರಿದಂತೆ ಇತರರು ಇದ್ದರು

Share This Article