ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಸುಧಾಕರ ವಿ ಎ ಆಯ್ಕೆ

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಎಸ್ಎಂಎಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಸುಧಾಕರ ವಿ.ಎ ರವರು ಭಾರತ ಸರ್ಕಾರದ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಹಾಗೂ ಪ್ರಾದೇಶಿಕ ನಿರ್ದೇಶನಾಲಯ ಎನ್ಎಸ್ಎಸ್, ಇವರು ನವೆಂಬರ್ 21 ರಿಂದ 27 ವರೆಗೆ ಎಸ್ ಡಿ ಎಂ ಕಾಲೇಜ್ ಆಫ್ ಆಯುರ್ವೇದಿಕ್ ಹಾಸನ ಇಲ್ಲಿ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತ ಶಿಬಿರಕ್ಕೆ ಆಯ್ಕೆಯಾಗಿದ್ದು, ಕರ್ನಾಟಕದ ಪಿಯು ಕಾಲೇಜುಗಳಿಂದ ಆಯ್ಕೆಗೊಂಡ ಆರು(6 )ಜನ ಎನ್ ಎಸ್ ಎಸ್ ಸ್ವಯಂಸೇವಕರುಗಳಲ್ಲಿ ಎಸ್ಎಂಎಸ್ ಪಿಯು ಕಾಲೇಜಿನ ಸುಧಾಕರ ವಿ ಎ ಕೂಡ ಒಬ್ಬರಾಗಿದ್ದಾರೆ ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಬಿ ವಿ ಮಂಜುನಾಥ್ ಕಾರ್ಯದರ್ಶಿಗಳಾದ ಎ ವಿ ಛಾಯಾ ಪ್ರಾಂಶುಪಾಲರಾದ ರಾಜು, ಮುಖ್ಯ ಶಿಕ್ಷಕರಾದ ವೆಂಕಟೇಶ್, ಕುಮಾರ್ ಶಿಬಿರಾಧಿಕಾರಿಗಳಾದ ಯಶವಂತ ಕುಮಾರ್, ಸತೀಶ್ ಸಹ ಶಿಬಿರಾಧಿಕಾರಿಗಳಾದ ಕುಬೇರ್, ಬಸವರಾಜು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ
