ವಧು ವರರ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಕರೆ.

Bangarappa c
3 Min Read

ಅ ಕ ವಿ ಮ ಸಭಾದಿಂದ ವಧು ವರರ ಸಮಾವೇಶಕ್ಕೆ ವಿಶ್ವಕರ್ಮ ಜನಾಂಗದವರು ಭಾಗವಹಿಸಲು,: ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಕರೆ .
ವರದಿ: ಬಂಗಾರಪ್ಪ .ಸಿ ‌.‌
ಹನೂರು : ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದೆ ನಮ್ಮ ಸಂಘಟನೆಯ ಆದ್ಯ ಕರ್ತವ್ಯವಾಗಿದೆ, ಹಾಗೇಯೆ ಇದೇ ತಿಂಗಳಲ್ಲಿ ದಿನಾಂಕ 24/4/2026 . 25/4/2026..26/4/2026 . ರಂದು ನಡೆಯುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ದಿಂದ ಅಯೋಜಿಸಿರುವ ಮೂರನೆ ರಾಜ್ಯ ಮಟ್ಟದ ವದು ವರರ ಸಮಾವೇಶವನ್ನು ಬೆಂಗಳೂರಿನ ಶಿವಾನಂದ ಸರ್ಕಲ್ ನ ರೇಸ್ ಕೊರ್ಸ್ ರಸ್ತೆಯ ಚಲನಚಿತ್ರ ವಾಣಿಜ್ಯ ಮಂಡಳಿಯ ಪಕ್ಕದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವುದರಿಂದ ಸಮುದಾಯದ ಎಲ್ಲಾ ಪಂಗಡದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ರಾಜ್ಯ ಉಪಾಧ್ಯಕ್ಷರಾದ ಬಸವರಾಜು ತಿಳಿಸಿದರು.

ಹನೂರು ಪಟ್ಟಣದ ಸಿದ್ದಪ್ಪಾಜಿ ದೇವಾಲಯದ ಆವರಣದಲ್ಲಿ ವಿಶ್ವಕರ್ಮ ಜನಾಂಗದವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗದಿಂದ ಪ್ರತಿಯೊಬ್ಬರು ಆಗಮಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ದಯವಿಟ್ಟು ಆಸಕ್ತ ಯುವಕರು ಯುವತಿಯರು ಸಕಾಲದಲ್ಲಿ ಆಗಮಿಸತಕ್ಕದ್ದು.ಕಾರ್ಯಕ್ರಮಕ್ಕೆ ಬರುವವರಿಗೆ ವಸತಿ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಇನ್ನೂಳಿದಂತೆ ಪುರೋಹಿತರು ಸೇರಿದಂತೆ ಊಟ ತಿಂಡಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಇದರ ಸದುಪಯೋಗವನ್ನು ನಮ್ಮ ಜನಾಂಗದವರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಇದೇ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಮಾಜಿ ರಾಜ್ಯಾದ್ಯಕ್ಷೆ ಯವರಾದ ಗುಂಡ್ಲುಪೇಟೆಯ ಸೌಭಾಗ್ಯ ರವರು ಮಾತನಾಡಿ .ನಮ್ಮ ಜನಾಂಗವು ಹೆಚ್ಚು ಹೆಚ್ಚು
ಹಳ್ಳಿಗಳಲ್ಲಿ ಇರುವುದರಿಂದ ಎಲ್ಲಾರಿಗೂ ಮಾಹಿತಿ ದೊರೆಯಬೇಕು , ಕಡಿಮೆ ಜನ ಇರುವ ಕಡೆಯು ಪ್ರಚಾರ ಮಾಡಬೇಕು,ಈ ಶುಭ ಕಾರ್ಯವನ್ನು ನಮ್ಮ ಅಧ್ಯಕ್ಷರು ಎರಡು ವರ್ಷಗಳ ಕಾಲ ಪೂರೈಸಿ ಮೂರನೆ ವರ್ಷಕ್ಕೆ ಕಾಲಿಡುವಂತೆ ಮಾಡಿದ್ದರೆ ,ಸಮುದಾಯದವರಿಂದ ಸಂಘವು ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ , ವಧು ವರರ ವೇದಿಕೆಯ ಮುಖಾಂತರ ಅನುಭವದ ಬ್ರಾಹ್ಮಣ ಅರ್ಚಕರ ಸಹಯೋಗದಲ್ಲಿ ಸ್ಥಳದಲ್ಲೆ ವಧು ವರರ ಜಾತಕಗಳನ್ನು ನೋಡಿ ಬಗೆಹರಿಸಲಾಗುವುದು. ನಮ್ಮ
ಸಂಘಟನೆಯು ರಾಜ್ಯಕ್ಕೆ ಮಾಧರಿಯಾಗಿ ಮಾಡಿದವರು ನಮ್ಮ ನಾಯಕರಾದ ಕೆ ಪಿ ನಂಜುಂಡಿಯವರು ನಮ್ಮ ಜನಾಂಗದ ಸಂಘವು ಹಲವಾರು ಕಾರ್ಯಗಳನ್ನು ಮಾಡುತ್ತಿದ್ದು ಅದರ ಮುಂದುವರಿದ ಭಾಗವಾಗಿ ವಿಶ್ವಕರ್ಮ ಜನಾಂಗದ ಪಧಾದಿಕಾರಿಗಳ ,ಸ್ವಾಮಿಗಳ ಜೊತೆಗೂಡಿ ಅಧ್ಯಕ್ಷರ ಅದೇಶದಂತೆ ಸಮುದಾಯದ ಜನಾಂಗದ ಮುಖಂಡರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡು ತ್ತಿದ್ದೇವೆ ,ನಮಗೆ ಅಧ್ಯಕ್ಷರ ಇಚ್ಚೆಯಂತೆ ನಾಡಿನ ವಿವಿಧ ಭಾಗಗಳಿಂದ ಸಮುದಾಯದ ಎಲ್ಲಾ ಮುಖಂಡರು ಆಗಮಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಎಲ್ಲಾವು ಉಚಿತವಾಗಿರುತ್ತದೆ ಸರ್ವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ . ಹನೂರು ಭಾಗದಲ್ಲಿ ನಮ್ಮ ಜನಾಂಗದವರು ಉತ್ತಮ ಸಂಘಟನೆ ಶಕ್ತಿಯಿದೆ ಅಲ್ಲದೆ ಜನರು ಹಿಂದುಳಿದಿದ್ದಾರೆ ,, ಎಲ್ಲಾರನ್ನು ಒಗ್ಗೂಡಿಸುವ ಪ್ರಯತ್ನ ನಮ್ಮ ಸಂಘದಿಂದ ನಡೆಯುತ್ತದೆ , ರಾಜ್ಯ ಸಂಘದ ಉಪಾಧ್ಯಕ್ಷರಾದ ಬಸವರಾಜು ಮದ್ದುರುರವರನ್ನು ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಅವರಿಂದ ಅದ್ಬುತ ಸಂಘಟನೆಯಾಗಿದೆ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭೈರನತ್ತ ರಾಚ್ವಪ್ಪ ಮಾತನಾಡಿ
ಕೆಪಿ ನಂಜುಂಡಿ ರವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಉತ್ತಮ ಸಂಘಟನೆಯನ್ನು ಮಾಡುವ ಉದ್ದೇಶದಿಂದ ಜನಾಂಗದ ಹಿತ ಕಾಯಲು ಕೆ ಪಿ ನಂಜುಂಡಿಯವರು ಒತ್ತು ನೀಡಿದರು . ಕೆಲವು ದಿನಗಳಿಂದ ಸಂಘಟನೆಯ ಕುಂಠಿತವಾಗಿದೆ ಮುಂದಿನ ದಿನಗಳಲ್ಲಿ ಸಂಘವನ್ನು ಮುನ್ನೇಡೆಸೋಣ ,ಈಗಾಗಲೇ ನಾವು ಶೈಕ್ಷಣಿಕವಾಗಿ,ರಾಜಕೀಯವಾಗಿ ಹಿಂದುಳಿದಿದ್ದೆವೆ ನಮ್ಮ ಜನಾಂಗದವರು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕು . ಕಳೆದ ಎಪ್ಪತ್ತು ವರ್ಷಗಳ ಕಾಲದಿಂದ ನಮಗೆ ಸರ್ಕಾರದ ವತಿಯಿಂದ ಯಾವುದೇ ರೀತಿಯ ಸವಲತ್ತುಗಳನ್ನು ಪಡೆಯಲು ಅವಕಾಶವಾಗಿಲ್ಲ , ಶಾಲಾ ಕಾಲೇಜುಗಳಲ್ಲಿ ಮೀಸಲಾತಿ ಪಡೆಯಲು ನಾವು ಮುಂದಾಗಬೇಕು . ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತುಗಳನ್ನು ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾದ್ಯವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ , ಮುಖಂಡರಾದ ಚಿನ್ನದ ಕೆಲಸದ ನಾಗಣ್ಣಚಾರಿ .ತಮ್ಮಯಚಾರಿ , ಕುಮಾರಚಾರಿ. ಶಂಕರಚಾರ್ ಮಂಗಲ , ರಾಮಪುರ ದೊರೆ . ಲೊಕ್ಕನಳ್ಳಿ ರಾಮಚಾರಿ ,ಕಾಮಗೆರಿ ರಾಜಣ್ಣ . ಬಂಡಳ್ಳಿ ಸಿನಣ್ಣ. ಬಸವಣ್ಣ ಬಂಡಳ್ಳಿ , ಹನೂರು ಬಸವರಾಜಚಾರಿ. ಚಂಗವಾಡಿ ನಾಗೇಶಚಾರಿ . ಕೊಳ್ಳೆಗಾಲದ ತಾಲ್ಲೂಕು ಘಟಕದ ಅಧ್ಯಕ್ಷರರಾದ ಮುಳ್ಳುರು ಪಿ. ಸಿದ್ದಪ್ಪಾಜಿ. ಇನ್ನಿತರರು ಹಾಜರಿದ್ದರು.

Share This Article