ಗುಂಡ್ಲುಪೇಟೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಕೀಲರ ಹತ್ಯೆ ಖಂಡಿಸಿ ಪ್ರತಿಭಟನೆಗೆ

Bangarappa c journalist
Bangarappa c journalist - Journalist
1 Min Read

 

ಗುಂಡ್ಲುಪೇಟೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಕೀಲರ ಹತ್ಯೆ ಖಂಡಿಸಿ ಪ್ರತಿಭಟನೆಗೆ

 

ಗುಂಡ್ಲುಪೇಟೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಕೀಲರ ಹತ್ಯೆ ಖಂಡಿಸಿ ಹಾಗೂ ವಕೀಲರ ಮೇಲೆ ರಾಜ್ಯಾದ್ಯಂತ ನಡೆಯುತ್ತಿರುವ ಹಲ್ಲೆ ಯನ್ನು ಖಂಡಿಸಿ ಬೆಂಗಳೂರಿನಲ್ಲಿ ಮತ್ತು ರಾಜ್ಯದ್ಯಂತ ನಡೆಯುತ್ತಿರುವ ವಕೀಲರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಮತ್ತು ಹೋರಾಟಕ್ಕೆ ಬೆಂಬಲವನ್ನು ಸೂಚಿಸಿ ಗುಂಡ್ಲುಪೇಟೆ ವಕೀಲರ ಸಂಘದ ವತಿಯಿಂದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಗುಂಡ್ಲುಪೇಟೆ ವಕೀಲ ಸಂಘದ ಹಿರಿಯ ಮತ್ತು ಕಿರಿಯ ವಕೀಲರು ರಾಜ್ಯದ್ಯಂತ ನಡೆಯುತ್ತಿರುವ ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ವಕೀಲರ ಸಂರಕ್ಷಣಾ ಕಾಯ್ದೆಯ ಉನ್ನತೀಕರಣ ಮಾಡಿ ತಿದ್ದುಪಡಿ ಮುಖಾಂತರ ಕರ್ನಾಟಕದಾದ್ಯಂತ ವಕೀಲರಿಗೆ ಭದ್ರತೆ ಮತ್ತು ರಕ್ಷಣೆಯನ್ನು ನೀಡಬೇಕಿತ್ತು ಆಗ್ರಹಿಸಲಾಯಿತು, ಈ ಬಗ್ಗೆ ಹಾಗೂ ವಕೀಲರಿಗೆ ರಕ್ಷಣೆಯನ್ನು ನೀಡುವ ದೃಷ್ಟಿಯಲ್ಲಿ ಗುಂಡ್ಲುಪೇಟೆ ಶಾಸಕರು ಕಾಯ್ದೆಯ ಉನ್ನತೀಕರಣದ ಬಗ್ಗೆ ವಿಧಾನಸೌಧ ಕಾರ್ಯ ಕಲಾಪಗಳಲ್ಲಿ ಚರ್ಚಿಸಿ ವಕೀಲರಿಗೆ ಭದ್ರತೆಯನ್ನು ಒದಗಿಸುವ ಬಗ್ಗೆ ಚರ್ಚಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವಕೀಲರುಗಳಿಗೆ ಭದ್ರತೆ ನೀಡಬೇಕೆಂದು ಹಾಗೂ ರಾಜ್ಯದ್ಯಂತ ವಕೀಲರಿಗೆ ರಕ್ಷಣೆಗೆ ನೀಡಬೇಕೆಂದು ಒತ್ತಾಯಿಸಲಾಯಿತು ತಾಲೂಕು ವಕೀಲರ ಸಂಘದ ವತಿಯಿಂದ ವಕೀಲರಾದ CG ಕಾಂತರಾಜ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ಗುಂಡ್ಲುಪೇಟೆ ವಕೀಲ ಸಂಘದ ಎಲ್ಲಾ ಹಿರಿಯರು ಮತ್ತೆ ಕಿರಿಯ ವಕೀಲರು ಮಹಿಳಾ ವಕೀಲರು ಬೆಂಬಲ ಸೂಚಿಸಿ ಹಾಜರಿದ್ದರು

Share This Article