ಏಳು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ದೀಪಾವಳಿ ಹಬ್ಬದ ದಿನವೇ ಮನೆಗೆ ವಾಪಸ್*

Bangarappa c journalist
Bangarappa c journalist - Journalist
2 Min Read

​ಏಳು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ದೀಪಾವಳಿ ಹಬ್ಬದ ದಿನವೇ ಮನೆಗೆ ವಾಪಸ್*

*ಕತ್ತಲನ್ನು ಸೀಳಿ ಬಂದ ಬೆಳಕು: ಏಳು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ದೀಪಾವಳಿ ಹಬ್ಬದ ದಿನವೇ ಮನೆಗೆ ವಾಪಸ್* *ಕುಟುಂಬಸ್ಥರಿಂದ ಸಂತಸದ ದೀಪಾವಳಿ ಆಚರಣೆ*

ಹುಣಸೂರಿನ ಗಾವಡಗೆರೆ ಗ್ರಾಮದಲ್ಲಿ ಹಿಂದೆ ವಾಸವಾಗಿದ್ದ *ಲಕ್ಷ್ಮಣ್ ರವರು ಹಾಲಿ ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಿದ್ದು ಮಂತ್ರಾಲಯಕ್ಕೆ ಹೋಗಿ ವಾಪಸಾಗುವಾಗ ದಿನಾಂಕ 29.03.2026ರಂದು ರಾತ್ರಿ ಮಂತ್ರಾಲಯದಿಂದ ಮೈಸೂರಿಗೆ ಬರುವ ಬಸವ ಎಕ್ಸ್ಪ್ರೆಸ್ ಟ್ರೈನಿನಲ್ಲಿ ಕೋಚ್ ನಂಬರ್ S5 ರಲ್ಲಿ ಪ್ರಯಾಣಿಸುತ್ತಿದ್ದವರು ಕಾಣೆಯಾಗಿದ್ದರೂ.

ಇವರು ಕಾಣೆಯಾಗಿರುವ ಬಗ್ಗೆ ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಪತ್ರಿಕಾ ಪ್ರಕಟಣೆ ಕೊಡುವುದರೊಂದಿಗೆ ಕೇಂದ್ರ ರೈಲ್ವೆ ಇಲಾಖೆಗೆ ಹಾಗೂ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಗೆ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ದೂರು ವರ್ಗಾವಣೆ ಆಗಿತ್ತು.

ನಂತರದಲ್ಲಿ ಕುಟುಂಬಸ್ಥರು ಕಣ್ಣೀರಿಡುತ್ತಾ, ತೀವ್ರ ಸಂಕಟದೊಂದಿಗೆ ಪತ್ರಿಕ ಪ್ರಕಟಣೆ ನೀಡಿ ಠಾಣೆಗಳಲ್ಲಿ ದೂರು ಸಲ್ಲಿಸಿ ಹುಡುಕಾಟ ಮಾಡಿದರೂ ಲಕ್ಷ್ಮಣ್ ರವರ ಪತ್ತೆಯಾಗಿರಲಿಲ್ಲ. ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರೂ ಸಹ ಈ ಕುಟುಂಬದೊಂದಿಗೆ ಕೈಜೋಡಿಸಿ ಹುಡುಕಾಟ ನಡೆಸಿದ್ದರು. ನಂತರ ನಂಬಿದ ದೇವರಿಗೆ ಕೈಮುಗಿದು ಪ್ರಾರ್ಥಿಸಿಕೊಂಡಿದ್ದಲ್ಲದೆ ಭಗವಂತನ ಪ್ರಾರ್ಥನೆಯೊಂದಿಗೆ ಪ್ರತಿದಿನವೂ ಇವರ ಬರುವಿಕೆಗಾಗಿ ಕಾಯುತ್ತಿದ್ದರು.

ಅಂತಹ ಒಂದು ಸುದಿನ ಬಂದೇ ಬಿಟ್ಟಿತು. ಇಂದು ಲಕ್ಷ್ಮಣ್ ರವರು ಇವರ ಮನೆಗೆ ವಾಪಸ್ ಆಗಿದ್ದು
ಈ ಕುಟುಂಬದ ಮನೆಯಲ್ಲಿ ಈ ದಿನ ದೀಪಾವಳಿ ಸಂಭ್ರಮ!
​ಕಳೆದ ಏಳು ತಿಂಗಳುಗಳು ಈ ಕುಟುಂಬಕ್ಕೆ ಕಣ್ಣೀರು, ಆತಂಕ ಮತ್ತು ಕಾಯುವಿಕೆಯ ದಿನಗಳಾಗಿದ್ದವು. ಇವರ ನೆನಪಿನೊಂದಿಗೆ ಎಲ್ಲೋ ಒಂದು ಕಡೆ ಅವರು ಸುರಕ್ಷಿತವಾಗಿ ಮರಳಿ ಬರುತ್ತಾರೆ ಎನ್ನುವ ಅಚಲ ನಂಬಿಕೆ ಮಾತ್ರ ಈ ಕುಟುಂಬದವರಲ್ಲಿ ಅಳಿದಿರಲಿಲ್ಲ.

​ಹಬ್ಬಗಳ ರಾಜ ದೀಪಾವಳಿ ಬಂದಿತು… ಆದರೆ ಈ ಬಾರಿ ಹಬ್ಬದ ಸಂಭ್ರಮಕ್ಕಿಂತ ಕಾಯುವಿಕೆಯ ನೋವೇ ಹೆಚ್ಚಿತ್ತು. ಆದರೆ, ಭಗವಂತನ ಕೃಪೆ ಮತ್ತು ಈ ಕುಟುಂಬದ ಪ್ರಾರ್ಥನೆ ಫಲಿಸಿತು!

ದೀಪಾವಳಿಯ ಪವಿತ್ರ ದಿನದಂದೇ (ನೆನ್ನೆ) ಏಳು ತಿಂಗಳ ಹಿಂದೆ ಕಾಣೆಯಾಗಿದ್ದ ಲಕ್ಷ್ಮಣರಾವ್ ಘಾಟ್ಕೆ ಅವರು ಯಾವುದೇ ಅಪಾಯವಿಲ್ಲದೆ ಮರಳಿ ಮನೆಗೆ ಬಂದು ಸೇರಿದ್ದಾರೆ.

​ದೀಪಾವಳಿಯ ಹಬ್ಬದ ಹಚ್ಚಿದ ಹಣತೆಗಳು ಇವರ ಮನೆಗೆ ಬೆಳಕನ್ನು ಮಾತ್ರ ತರಲಿಲ್ಲ, ಬದಲಿಗೆ ಇವರು ಭಗವಂತನಲ್ಲಿ ಇಟ್ಟಿದ್ದ ಅಚಲವಾದ ನಂಬಿಕೆ ಮನೆಯ ಕತ್ತಲಾಗಿದ್ದ ಬದುಕಿಗೆ ಜೀವ ತುಂಬಿದವು. ಏಳು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಕಳೆದುಕೊಂಡಿದ್ದ ಕುಟುಂಬ ಸದಸ್ಯನನ್ನು ವಾಪಸ್ಸು ಕಂಡು ಇಡೀ ಕುಟುಂಬ ಕಂಡ ಸಂತೋಷಕ್ಕೆಣೆಯೇ ಇಲ್ಲ. ಕಣ್ಣೀರಿನಲ್ಲಿ ಮುಳುಗಿದ್ದ ಇವರ ಮನೆ ಈಗ ನಗು ಮತ್ತು ಆನಂದದಿಂದ ಕಳೆಗಟ್ಟಿದೆ.

*ಭಗವಂತನ ಮೇಲಿನ ಪ್ರಾರ್ಥನೆಗೆ ಪ್ರತಿಫಲ ಸಿಗುತ್ತದೆ ಎನ್ನಲು ಇವರ ಕುಟುಂಬವೆ ಸಾಕ್ಷಿ , ಈ ಘಟನೆಯಿಂದ ಭಗವಂತನಲ್ಲಿ ಮತ್ತಷ್ಟು ನಂಬಿಕೆ ಭಕ್ತಿ ಉಂಟಾಗಿದೆ.*

ಸತ್ಯ ಎಮ್ಎಎಸ್ ಫೌಂಡೇಶನ್ ವತಿಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

 

Share This Article