ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನಬ್ರಹ್ಮೋತ್ಸವ

Bangarappa c journalist
Bangarappa c journalist - Journalist
1 Min Read

ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನಬ್ರಹ್ಮೋತ್ಸವ

ಶ್ರೀ ಮಲೆ ಮಹದೇಶ್ವರ ಬೆಟ್ಟದ ಪವಿತ್ರ ಸನ್ನಿಧಿಯಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ನೆರವೇರಿದ ಬಳಿಕ, ಶ್ರೀ ಸ್ವಾಮಿಯ ಸಮ್ಮುಖದಲ್ಲಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅನ್ನಬ್ರಹ್ಮೋತ್ಸವವನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವೈಭವದಿಂದ ನೆರವೇರಿಸಲಾಯಿತು.

ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆ ಲಭಿಸಿ, ನಾಡು ಸುಭಿಕ್ಷವಾಗಿರಲಿ ಎಂಬ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಅನ್ನಬ್ರಹ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಈ ಪವಿತ್ರ ಧಾರ್ಮಿಕ ಕಾರ್ಯಕ್ರಮವು ಶ್ರೀ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ್ ಅವರ ಅಧ್ಯಕ್ಷತೆಯಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.

ಅನ್ನವೇ ಪರಬ್ರಹ್ಮ, ಅನ್ನದಾನವೇ ಮಹಾದಾನ ಎಂಬ ಧಾರ್ಮಿಕ ಸಂದೇಶವನ್ನು ಸಾರುವ ಈ ಅನ್ನಬ್ರಹ್ಮೋತ್ಸವವು ಕ್ಷೇತ್ರದ ಪವಿತ್ರ ಸಂಪ್ರದಾಯ, ಭಕ್ತಿ ಪರಂಪರೆ ಹಾಗೂ ಲೋಕಕಲ್ಯಾಣದ ಆಶಯಕ್ಕೆ ಸಾಕ್ಷಿಯಾಯಿತು.

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಕೃಪೆಯಿಂದ ನಾಡು ಸುಭಿಕ್ಷವಾಗಲಿ, ಸಮಸ್ತ ಭಕ್ತರ ಬಾಳಿನಲ್ಲಿ ಸಮೃದ್ಧಿ ನೆಲೆಸಲಿ.

ಓಂ ಶ್ರೀ ಮಲೆ ಮಹದೇಶ್ವರಾಯ ನಮಃ 🙏

Share This Article