ಕಾವೇರಿ ತಾಯಿಗೆ ನಮಿಸೋಣ..
ಕೃಷಿಯನ್ನೇ ನಂಬಿ ಬದುಕುವ ನಮ್ಮ ರೈತಾಪಿ ಜನತೆಗೆ ಅನ್ನ, ಬದುಕು, ಆಸರೆ ಕೊಟ್ಟ ಜೀವನದಿಯ ಸಂಭ್ರಮ ಕಾವೇರಿ ಉತ್ಸವ ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಡ್ಯ ವಿಶ್ವ ವಿದ್ಯಾಲಯದ ಅಂಗಳದಲ್ಲಿ ನಡೆಯುತ್ತಿದೆ.
ಹಳ್ಳಿಗಾಡಿನಿಂದ ಬಂದ ಹತ್ತಾರು ಒಳ್ಳೆಯ ಗೆಳೆಯರು ಜತೆಗೂಡಿ ಮಾಡುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವಿದು. ಆಹಾರ ಮೇಳ, ವಸ್ತುಪ್ರದರ್ಶನ, ಮಕ್ಕಳಿಗೆ ಅಮ್ಯೂಸ್‌ಮೆಂಟ್, ಸಾಂಸ್ಕೃತಿಕ ಸಂಗೀತ ಸಂಜೆ ನಿಮಗೆ ಸಂತಸ ಉಂಟುಮಾಡಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ವರ್ಷಕ್ಕೊಮ್ಮೆ ಮಂಡ್ಯ ನೆಲದಲ್ಲಿ ನಡೆಯುವ ಕಾವೇರಿ ಉತ್ಸವವನ್ನು ಕುಟುಂಬ ಸಮೇತ ಬಂದು ಕಣ್ತುಂಬಿಕೊಳ್ಳಿ.
ಈ ಪವಿತ್ರ ಕಾರ್ಯಕ್ರಮಕ್ಕೆ
ಈ ಆಹ್ವಾನವನ್ನೇ ವೈಯುಕ್ತಿಕ ಆಹ್ವಾನವೆಂದು ತಿಳಿದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ಇಂತಿ
-ತಗ್ಗಹಳ್ಳಿ ವೆಂಕಟೇಶ್ 🍁
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು
ನಾಲ್ವಡಿ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು
