ದೇವರಾಜ ಮಾರುಕಟ್ಟೆ ಬಾಡಿಗೆ ಪರಿಷ್ಕರಣೆ ಅಗತ್ಯ: ಕೆ.ಹರೀಶ್‌ ಗೌಡ

Bangarappa c journalist
Bangarappa c journalist - Journalist
5 Min Read

ದೇವರಾಜ ಮಾರುಕಟ್ಟೆ ಬಾಡಿಗೆ ಪರಿಷ್ಕರಣೆ ಅಗತ್ಯ: ಕೆ.ಹರೀಶ್‌ ಗೌಡ
ಮೈಸೂರು: ೧೨ ವರ್ಷಕೊಮ್ಮೆ ಬಾಡಿಗೆ ಪರಿಷ್ಕರಣೆ ಮಾಡಲೇಬೇಕು. ದೇವರಾಜ ಮಾರುಕಟ್ಟೆಯನ್ನು ನಿರ್ವಹಣೆಗೆ ಬಾಡಿಗೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಳಿಗೆಗಳ ಬಾಡಿಗೆ ಪರಿಷ್ಕರಣೆ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ೨೦೦೩ರ ನಂತರ ಯಾವುದೇ ಪರಿಷ್ಕರಣೆ ಆಗಿಲ್ಲ. ಈ ಸಮಸ್ಯೆ ಸ್ವಲ್ಪ ದೊಡ್ಡದಾದರೆ ಮಳಿಗೆದಾರರಿಗೆ ತೊಂದರೆಯಾಗುತ್ತದೆ. ಕಾನೂನು ಹೋರಾಟದಲ್ಲಿ ಕಾರ್ಪೋರೆಷನ್, ಜಿಲ್ಲಾಡಳಿತದ ವಿರುದ್ಧ ಗೆಲ್ಲಲು ಆಗುವುದಿಲ್ಲ. ಮುಂದೊಂದು ದಿನ ಮಳಿಗೆಯನ್ನು ಖಾಲಿ ಮಾಡಿ ಎಂದು ಕೋರ್ಟ್ ಹೇಳಬಹುದು. ಹೀಗಾಗಿ ಮಳಿಗೆಯವರೇ ತೀರ್ಮಾನಿಸಿ ಮಹದೇವಣ್ಣ ಎಂಬುವವರ ಸಮೇತ ೫ ರಿಂದ ೬ ಜನ ಬಂದು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎಷ್ಟು ಪರಿಷ್ಕರಣೆ ಮಾಡಬಹುದು ಎಂದು ಚರ್ಚಿಸಿ ಎಂದು ಸಲಹೆ ನೀಡಿದರು.
ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಬಾಡಿಗೆಗೆ ಯಾರು ಮಳಿಗೆಯನ್ನು ಕೊಡುವುದಿಲ್ಲ. ಮಾರುಕಟ್ಟೆಗೆ ನೀರು, ವಿದ್ಯುತ್ ಕೊಡಬೇಕು. ಓಡಾಡಲು ರಸ್ತೆಗಳನ್ನು ಮಾಡಿಸಬೇಕು, ಬಣ್ಣ ಒಡೆಸಬೇಕು. ಕಸವನ್ನು ವಿಲೇವಾರಿ ಮಾಡಬೇಕು. ಮಳಿಗೆಯವರೂ ಸಹ ಇದನ್ನು ಯೋಚನೆ ಮಾಡಬೇಕು. ಬಾಡಿಗೆ ಪರಿಷ್ಕರಣೆ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳು ಮೊದಲೇ ಮಾಹಿತಿ ನೀಡಿದ್ದೇವು ಎಂದು ಹೇಳುತ್ತಿದ್ದಾರೆ. ಹೀಗಾಗಿ ಮಳಿಗೆಯವರೇ ಸಭೆ ಸೇರಿ ಸ್ವಯಂ ಘೋಷಿತವಾಗಿ ಎಷ್ಟು ಕಟ್ಟುತ್ತೇವೆ ಎಂದು ತಿಳಿಸಬೇಕು ಎಂದು ಹೇಳಿದರು.
ಮಾರುಕಟ್ಟೆಗಳಲ್ಲೇ ವ್ಯಾಪರ ನಡೆಯುತ್ತಿದೆ ಎಂದು ಸೂಪರ್ ಮಾರುಕಟ್ಟೆಗಳನು ಮುಚ್ಚಿಸಲು ಸಾಧ್ಯವಿಲ್ಲ. ಫುಟ್‌ಪಾತ್‌ಗಳಲ್ಲಿ ನಮ್ಮ ಮುತ್ತಾತನ ಕಾಲದಿಂದಲೂ ವ್ಯಾಪರ ಮಾಡುತ್ತಾ ಬರುತ್ತಿದ್ದಾರೆ. ಅದನ್ನೆಲ್ಲ ನಾವು ತಪ್ಪು ಎಂದು ಹೇಳಲು ಆಗುವುದಿಲ್ಲ. ಗ್ರಾಹಕರು ತಮಗಿಷ್ಟವಾದ ಕಡೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಬಹುದು. ಮನುಷ್ಯನ ಜೀವನ ಶೈಲಿ ಬದಲಾವಣೆ ಆಗುತ್ತಿದೆ. ನಾವು ಅದಕ್ಕೆ ಹೊಂದಿಕೊಂಡು ಹೋಗಬೇಕು ಎಂದರು.
ಇಂದಿನ ಪರಿಸ್ಥಿತಿಗೆ ತಕ್ಕಂತೆ ಮಳಿಗೆಯವರು ಬದಲಾವಣೆ ಮಾಡಿಕೊಂಡು ಹೋಗಬೇಕು. ಜನರಿಗೆ ದಿನನಿತ್ಯಕ್ಕೆ ಏನು ಅವಶ್ಯಕತೆ ಇರುತ್ತದೆಯೋ ಅದನ್ನೇ ಮಾರಾಟ ಮಾಡಿ. ಅಂದಿನ ಮಹಾರಾಜರು ಎಲ್ಲರೂ ಒಂದೇ ಸೂರಿನಡಿ ಬಂದು ವ್ಯಾಪರ ಮಾಡಲಿ ಎಂದು ಮಾರುಕಟ್ಟೆಯನ್ನು ಸ್ಥಾಪಿಸಿದ್ದರು. ಅದನ್ನು ನಾವು ನಶಿಸಿಹೋಗಲು ಬಿಡಬಾರದು. ಅಧಿಕಾರಿಗಳೂ ಸಹ ಪ್ರತಿ ಮಳಿಗೆಗಳಿಗೂ ಹೋಗಿ ಮಳಿಗೆದಾರರಿಗೆ ಬಾಡಿಗೆ ಪರಿಷ್ಕರಣೆಯ ಬಗ್ಗೆ ಒಪ್ಪಿಸಿ. ಈ ಸಮಸ್ಯೆ ದೊಡ್ಡದಾದರೆ ಇಲ್ಲಿರುವವರೆಲ್ಲರಿಗೂ ಬಹಳ ತೊಂದರೆಯಾಗುತ್ತದೆ. ಈಗಾಗಲೇ ಕೌನ್ಸಿಲ್‌ನಲ್ಲಿ ಬಾಡಿಗೆ ಪರಿಷ್ಕರಣೆಯ ಬಗ್ಗೆ ನಿರ್ಣಯ ಆಗಿದೆ. ಕೌನ್ಸಿಲ್‌ನಲ್ಲಿ ಏನು ನಿರ್ಣಯ ಆಗಿರುತ್ತದೆಯೋ ಅದನ್ನು ನಾವು, ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿದರು. ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಸೇರಿ ಇತರರು ಹಾಜರಿದ್ದರು.


ಬಾಡಿಗೆಯನ್ನು ಕಡಿಮೆ ಮಾಡಬೇಕು ಎಂದರೆ ಅದಕ್ಕೆ ಆಧಾರ ಬೇಕು. ಅದಕ್ಕಾಗಿ ಹಿರಿಯ ಅಧಿಕಾರಿಗಳ ತಂಡವನ್ನು ನಿಯೋಜಿಸಿ ೩ ತಂಡ ಮಾಡಿ ಪ್ರಸ್ತುತ ನಿಗದಿ ಮಾಡಿರುವ ದರವು ಜಾಸ್ತಿ ಇದೆಯೇ ಅನ್ನೊದನ್ನು ಪರಿಶೀಲಿಸಿ ಶಾಸಕರೊಂದಿಗೆ ಚರ್ಚಿಸಿ ನಂತರ ಸಭೆಯಲ್ಲಿ ತಿರ್ಮಾನಿಸೋಣ.
-ಎಂ.ಕೆ.ಸವಿತಾ, ಆಯುಕ್ತೆ


೬೯೪ ಮಳಿಗೆಗಳಲ್ಲಿ ತಮ್ಮ ತಾತನ ಕಾಲದಿಂದ ಇದುವರೆಗೂ ವ್ಯಾಪರ ಮಾಡಿಕೊಂಡು ಬರುತ್ತಿರುವವರು ೧೫೦ ರಿಂದ ೫೦೦ ಜನ ಇರಬಹುದು. ನಿರ್ವಹಣೆಯ ವೆಚ್ಚ ಹೆಚ್ಚುತ್ತಿರುವುದರಿಂದ ಬಾಡಿಗೆ ಪರಿಷ್ಕರಣೆ ಮಾಡಬೇಕಾಗಿದೆ. ೨೦೧೯ರ ಸಾಲಿನಲ್ಲಿ ಸೂಚಿಸಿದ್ದ ಬಾಡಿಗೆಯನ್ನು ಕಟ್ಟಿ ಎಂದು ನಾವು ಹೇಳುತ್ತಿಲ್ಲ. ಇಲ್ಲಿ ಕೆಲಸ ಮಾಡುವ ಅಧಿಕಾರಿಗೂ ಸಹ ಮನುಷ್ಯರೆ. ಏಕಾಏಕಿ ಶೇ.೧೦ರಷ್ಟು ಜಾಸ್ತಿ ಮಾಡಿ ಎಂದು ಹೇಳುತ್ತಿಲ್ಲ.
-ಕೆ.ಹರೀಶ್‌ಗೌಡ, ಶಾಸಕ

ದೇವರಾಜ ಮಾರುಕಟ್ಟೆ ಬಾಡಿಗೆ ಪರಿಷ್ಕರಣೆ ಅಗತ್ಯ: ಕೆ.ಹರೀಶ್‌ ಗೌಡ
ಮೈಸೂರು: ೧೨ ವರ್ಷಕೊಮ್ಮೆ ಬಾಡಿಗೆ ಪರಿಷ್ಕರಣೆ ಮಾಡಲೇಬೇಕು. ದೇವರಾಜ ಮಾರುಕಟ್ಟೆಯನ್ನು ನಿರ್ವಹಣೆಗೆ ಬಾಡಿಗೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಳಿಗೆಗಳ ಬಾಡಿಗೆ ಪರಿಷ್ಕರಣೆ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ೨೦೦೩ರ ನಂತರ ಯಾವುದೇ ಪರಿಷ್ಕರಣೆ ಆಗಿಲ್ಲ. ಈ ಸಮಸ್ಯೆ ಸ್ವಲ್ಪ ದೊಡ್ಡದಾದರೆ ಮಳಿಗೆದಾರರಿಗೆ ತೊಂದರೆಯಾಗುತ್ತದೆ. ಕಾನೂನು ಹೋರಾಟದಲ್ಲಿ ಕಾರ್ಪೋರೆಷನ್, ಜಿಲ್ಲಾಡಳಿತದ ವಿರುದ್ಧ ಗೆಲ್ಲಲು ಆಗುವುದಿಲ್ಲ. ಮುಂದೊಂದು ದಿನ ಮಳಿಗೆಯನ್ನು ಖಾಲಿ ಮಾಡಿ ಎಂದು ಕೋರ್ಟ್ ಹೇಳಬಹುದು. ಹೀಗಾಗಿ ಮಳಿಗೆಯವರೇ ತೀರ್ಮಾನಿಸಿ ಮಹದೇವಣ್ಣ ಎಂಬುವವರ ಸಮೇತ ೫ ರಿಂದ ೬ ಜನ ಬಂದು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎಷ್ಟು ಪರಿಷ್ಕರಣೆ ಮಾಡಬಹುದು ಎಂದು ಚರ್ಚಿಸಿ ಎಂದು ಸಲಹೆ ನೀಡಿದರು.
ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಬಾಡಿಗೆಗೆ ಯಾರು ಮಳಿಗೆಯನ್ನು ಕೊಡುವುದಿಲ್ಲ. ಮಾರುಕಟ್ಟೆಗೆ ನೀರು, ವಿದ್ಯುತ್ ಕೊಡಬೇಕು. ಓಡಾಡಲು ರಸ್ತೆಗಳನ್ನು ಮಾಡಿಸಬೇಕು, ಬಣ್ಣ ಒಡೆಸಬೇಕು. ಕಸವನ್ನು ವಿಲೇವಾರಿ ಮಾಡಬೇಕು. ಮಳಿಗೆಯವರೂ ಸಹ ಇದನ್ನು ಯೋಚನೆ ಮಾಡಬೇಕು. ಬಾಡಿಗೆ ಪರಿಷ್ಕರಣೆ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳು ಮೊದಲೇ ಮಾಹಿತಿ ನೀಡಿದ್ದೇವು ಎಂದು ಹೇಳುತ್ತಿದ್ದಾರೆ. ಹೀಗಾಗಿ ಮಳಿಗೆಯವರೇ ಸಭೆ ಸೇರಿ ಸ್ವಯಂ ಘೋಷಿತವಾಗಿ ಎಷ್ಟು ಕಟ್ಟುತ್ತೇವೆ ಎಂದು ತಿಳಿಸಬೇಕು ಎಂದು ಹೇಳಿದರು.
ಮಾರುಕಟ್ಟೆಗಳಲ್ಲೇ ವ್ಯಾಪರ ನಡೆಯುತ್ತಿದೆ ಎಂದು ಸೂಪರ್ ಮಾರುಕಟ್ಟೆಗಳನು ಮುಚ್ಚಿಸಲು ಸಾಧ್ಯವಿಲ್ಲ. ಫುಟ್‌ಪಾತ್‌ಗಳಲ್ಲಿ ನಮ್ಮ ಮುತ್ತಾತನ ಕಾಲದಿಂದಲೂ ವ್ಯಾಪರ ಮಾಡುತ್ತಾ ಬರುತ್ತಿದ್ದಾರೆ. ಅದನ್ನೆಲ್ಲ ನಾವು ತಪ್ಪು ಎಂದು ಹೇಳಲು ಆಗುವುದಿಲ್ಲ. ಗ್ರಾಹಕರು ತಮಗಿಷ್ಟವಾದ ಕಡೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಬಹುದು. ಮನುಷ್ಯನ ಜೀವನ ಶೈಲಿ ಬದಲಾವಣೆ ಆಗುತ್ತಿದೆ. ನಾವು ಅದಕ್ಕೆ ಹೊಂದಿಕೊಂಡು ಹೋಗಬೇಕು ಎಂದರು.
ಇಂದಿನ ಪರಿಸ್ಥಿತಿಗೆ ತಕ್ಕಂತೆ ಮಳಿಗೆಯವರು ಬದಲಾವಣೆ ಮಾಡಿಕೊಂಡು ಹೋಗಬೇಕು. ಜನರಿಗೆ ದಿನನಿತ್ಯಕ್ಕೆ ಏನು ಅವಶ್ಯಕತೆ ಇರುತ್ತದೆಯೋ ಅದನ್ನೇ ಮಾರಾಟ ಮಾಡಿ. ಅಂದಿನ ಮಹಾರಾಜರು ಎಲ್ಲರೂ ಒಂದೇ ಸೂರಿನಡಿ ಬಂದು ವ್ಯಾಪರ ಮಾಡಲಿ ಎಂದು ಮಾರುಕಟ್ಟೆಯನ್ನು ಸ್ಥಾಪಿಸಿದ್ದರು. ಅದನ್ನು ನಾವು ನಶಿಸಿಹೋಗಲು ಬಿಡಬಾರದು. ಅಧಿಕಾರಿಗಳೂ ಸಹ ಪ್ರತಿ ಮಳಿಗೆಗಳಿಗೂ ಹೋಗಿ ಮಳಿಗೆದಾರರಿಗೆ ಬಾಡಿಗೆ ಪರಿಷ್ಕರಣೆಯ ಬಗ್ಗೆ ಒಪ್ಪಿಸಿ. ಈ ಸಮಸ್ಯೆ ದೊಡ್ಡದಾದರೆ ಇಲ್ಲಿರುವವರೆಲ್ಲರಿಗೂ ಬಹಳ ತೊಂದರೆಯಾಗುತ್ತದೆ. ಈಗಾಗಲೇ ಕೌನ್ಸಿಲ್‌ನಲ್ಲಿ ಬಾಡಿಗೆ ಪರಿಷ್ಕರಣೆಯ ಬಗ್ಗೆ ನಿರ್ಣಯ ಆಗಿದೆ. ಕೌನ್ಸಿಲ್‌ನಲ್ಲಿ ಏನು ನಿರ್ಣಯ ಆಗಿರುತ್ತದೆಯೋ ಅದನ್ನು ನಾವು, ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿದರು. ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಸೇರಿ ಇತರರು ಹಾಜರಿದ್ದರು.

ಕೋಟ್…
ಬಾಡಿಗೆಯನ್ನು ಕಡಿಮೆ ಮಾಡಬೇಕು ಎಂದರೆ ಅದಕ್ಕೆ ಆಧಾರ ಬೇಕು. ಅದಕ್ಕಾಗಿ ಹಿರಿಯ ಅಧಿಕಾರಿಗಳ ತಂಡವನ್ನು ನಿಯೋಜಿಸಿ ೩ ತಂಡ ಮಾಡಿ ಪ್ರಸ್ತುತ ನಿಗದಿ ಮಾಡಿರುವ ದರವು ಜಾಸ್ತಿ ಇದೆಯೇ ಅನ್ನೊದನ್ನು ಪರಿಶೀಲಿಸಿ ಶಾಸಕರೊಂದಿಗೆ ಚರ್ಚಿಸಿ ನಂತರ ಸಭೆಯಲ್ಲಿ ತಿರ್ಮಾನಿಸೋಣ.
-ಎಂ.ಕೆ.ಸವಿತಾ, ಆಯುಕ್ತೆ

ಕೋಟ್
೬೯೪ ಮಳಿಗೆಗಳಲ್ಲಿ ತಮ್ಮ ತಾತನ ಕಾಲದಿಂದ ಇದುವರೆಗೂ ವ್ಯಾಪರ ಮಾಡಿಕೊಂಡು ಬರುತ್ತಿರುವವರು ೧೫೦ ರಿಂದ ೫೦೦ ಜನ ಇರಬಹುದು. ನಿರ್ವಹಣೆಯ ವೆಚ್ಚ ಹೆಚ್ಚುತ್ತಿರುವುದರಿಂದ ಬಾಡಿಗೆ ಪರಿಷ್ಕರಣೆ ಮಾಡಬೇಕಾಗಿದೆ. ೨೦೧೯ರ ಸಾಲಿನಲ್ಲಿ ಸೂಚಿಸಿದ್ದ ಬಾಡಿಗೆಯನ್ನು ಕಟ್ಟಿ ಎಂದು ನಾವು ಹೇಳುತ್ತಿಲ್ಲ. ಇಲ್ಲಿ ಕೆಲಸ ಮಾಡುವ ಅಧಿಕಾರಿಗೂ ಸಹ ಮನುಷ್ಯರೆ. ಏಕಾಏಕಿ ಶೇ.೧೦ರಷ್ಟು ಜಾಸ್ತಿ ಮಾಡಿ ಎಂದು ಹೇಳುತ್ತಿಲ್ಲ ಎಂದು ಶಾಸಕರಾದ
-ಕೆ.ಹರೀಶ್‌ಗೌಡ, ತಿಳಿಸಿದರು.

Share This Article