ನೈಟಿಂಗೇಲ್ಸ್ ಸ್ಮೃತಿ ಗ್ರಾಮ : ನೆವೆಂಬರ್ 06ರಂದು ಗಣ್ಯರಿಂದ ಉದ್ಘಾಟನೆ

Bangarappa c journalist
Bangarappa c journalist - Journalist
1 Min Read

ನೈಟಿಂಗೇಲ್ಸ್ ಸ್ಮೃತಿ ಗ್ರಾಮ : ನೆವೆಂಬರ್ 06ರಂದು ಗಣ್ಯರಿಂದ ಉದ್ಘಾಟನೆ


ದೊಡ್ಡಬಳ್ಳಾಪುರ : ಭಾರತದಲ್ಲಿ ಹೆಚ್ಚುತ್ತಿರುವ ಡಿಮೆನ್ಸಿಯಾ ಆರೈಕೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸುಮಾರು 28 ವರ್ಷಗಳಿಂದ ಹಿರಿಯ ನಾಗರೀಕರ ಕಲ್ಯಾಣ ಮತ್ತು ಡಿಮೆನ್ಸಿಯಾ ಆರೈಕೆಯಲ್ಲಿ ಕಾರ್ಯನಿರ್ಹಿಸುತ್ತಿರುವ ಬೆಂಗಳೂರಿನ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ದೊಡ್ಡಬಳ್ಳಾಪುರದ ಸಮೀಪ ಸಮಗ್ರ ಡಿಮೆನ್ಸಿಯಾ ಆರೈಕೆಗಾಗಿ ‘ನೈಟಿಂಗೇಲ್ಸ್ ಸ್ಮೃತಿ ಗ್ರಾಮ’ ವನ್ನು ಸ್ಥಾಪಿಸಿದ್ದು, ಶುಕ್ರವಾರ( ನೆ. 06) ರಂದು ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಸ್ಮೃತಿ ಗ್ರಾಮದ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ. ಕೆ. ಸುಧಾಕರ್ ಹಾಗೂ ಶಾಸಕ ಧೀರಜ್ ಮುನಿರಾಜ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿಮೆನ್ಸಿಯಾ ಆರೈಕೆಯ ಕ್ಷೇತ್ರದಲ್ಲಿ ಒಂದು ಮಹತ್ವದ ಮಾದರಿಯಾಗಿ ರೂಪುಗೊಳ್ಳುತ್ತಿರುವ ಸ್ಮೃತಿ ಗ್ರಾಮವು ವಿಶೇಷ ವಸತಿ ಆರೈಕೆ ಆರೈಕೆದಾರರ ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಒಂದೇ ಸಮಗ್ರ ಆವರಣದಲ್ಲಿ ಒಗ್ಗೂಡಿಸಿದೆ. ಇದರ ಮೊದಲ ಹಂತದಲ್ಲಿ ಆರ್ಥಿಕವಾಗಿ ಹಿಂದುಳಿದ 100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆಯನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಅಸಹಾಯಕ ಸ್ಥಿತಿಯಲ್ಲಿರುವವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಒಂಟಿಯಾಗಿ ವಾಸಿಸುವವರು ಅಥವಾ ಕುಟುಂಬದ ಸಮರ್ಪಕ ಬೆಂಬಲವಿಲ್ಲದ ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ.

55 ವರ್ಷ ಮತ್ತು ಅದಕ್ಕಿಂತ ಮೇಲ್ಮಟ್ಟ, ಡಿಮೆನ್ಶಿಯಾ ಇರುವುದು ವೈದ್ಯಕೀಯವಾಗಿ ದೃಢಪಟ್ಟಿರುವ ಹಿರಿಯ ನಾಗರಿಕರಿಗೆ ದಾಖಲಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ದಿನದ 24 ಗಂಟೆಗಳ ಆರೈಕೆಯ ಅಗತ್ಯವಿರುವ ಹಾಗೂ ಆರೈಕೆ ಮಾಡಲು ಕುಟುಂಬದ ಸದಸ್ಯರ ಬೆಂಬಲವಿಲ್ಲದ ಅಥವಾ ಅತ್ಯಲ್ಪ ಬೆಂಬಲ ಹೊಂದಿರುವ ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Share This Article