ವೈದ್ಯರ ಸೇವೆ ಅನನ್ಯವಾದುದು-ನಿಜದ್ವನಿ ಗೋವಿಂದರಾಜು

Bangarappa c journalist
Bangarappa c journalist - Journalist
1 Min Read

ವೈದ್ಯರ ಸೇವೆ ಅನನ್ಯವಾದುದು-ನಿಜದ್ವನಿ ಗೋವಿಂದರಾಜು
ಚಾಮರಾಜನಗರ, ನ.೧೮- ವೈದ್ಯರ ಸೇವೆ ಅನನ್ಯವಾದುದು. ಜನರು ವೈದ್ಯರನ್ನು ದೇವರು ಎಂದು ನಂಬುತ್ತಾರೆ. ಎಂದು. ಕನ್ನಡ ಕರ್ನಾಟಕ ನಿಜದ್ವನಿ ಸೇನಾ ಸಮಿತಿಯ ನಿಜದ್ವನಿ ಗೋವಿಂದರಾಜು ತಿಳಿಸಿದರು.
ನಗರದ ಚಿಕ್ಕ ಅಂಗಡಿಬೀದಿಯಲ್ಲಿ ಇರುವ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಕರ್ನಾಟಕ ನಿಜದ್ವನಿ ಸೇನಾ ಸಮಿತಿ ವತಿಯಿಂದ ವೈದ್ಯರಾದ. ಡಾ. ರಾಜೇಂದ್ರ ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿ ಮಾತನಾಡಿದರು.
ವೈದ್ಯರು ಬಡವರ ಬಡ ರೋಗಿಗಳ ಬದುಕಿಗೆ ದಾರಿದೀಪವಾಗಬೇಕು. ಡಾ. ಬಸವರಾಜೇಂದ್ರ ರವರು. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಹಲವಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅದರ ಜೊತೆಗೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಉತ್ತಮ ಶಾಲೆಗಳಾಗಿ ಪರಿವರ್ತನೆ ಮಾಡಿದ್ದಾರೆ. ಇವರಿಗೆ ಕನ್ನಡ ಸಂಘಟನೆಗಳ ಪರವಾಗಿ ವೈದ್ಯ ಭೀಷ್ಮ ಎಂದು ಬಿರುದು ನೀಡಿ ಗೌರವಿಸಲಾಗುತ್ತಿದೆ. ಎಂದು ಹೇಳಿದರು.
ಡಾ.ಬಸವರಾಜೇಂದ್ರ ಅವರು ಮಾತನಾಡಿ ನಾವು ೨ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ತರುವುದು ನಮ್ಮ ಗುರಿಯಾಗಿದೆ. ನೀವು ನೀಡಿದ ಗೌರವ ಇನ್ನು ಹೆಚ್ಚಿನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾ.ರಂ.ಶ್ರೀನಿವಾಸ್ ಗೌಡ, ಜಿಲ್ಲಾ ಮರಾಠ ಸಂಘದ ಅಧ್ಯಕ್ಷ ವೆಂಕಟರಾವ್‌ಸಾಟೆ, ಕನ್ನಡ ಸಂಘಟನೆಗಳ ಸದಸ್ಯರಾದ ಬಂಗಾರಸ್ವಾಮಿ, ಆಟೋ ಲಿಂಗರಾಜು, ನಾಗೇಶ್, ನಾಂಗೇAದ್ರಗೌಡ, ಸುಶೀಲ, ಮಹದೇವಯ್ಯ, ಕಿಸಾಯತ್, ಸುಚಿತ್ರ, ಮುತ್ತುಲಕ್ಷಿö್ಮ, ಪಣ್ಯಯದಹುಂಡಿ ರಾಜು ಹಾಗೂ ಇನ್ನು ಮುಂತಾದವರು ಇದ್ದರು.

Share This Article