ಪಟ್ಟಣದಲ್ಲಿ ಡಾ. ಬಿಆರ್ ಅಂಬೇಡ್ಕರ್ ಮೊಮ್ಮಗ ರವರಿಗೆ ಅದ್ದೂರಿ ಸ್ವಾಗತ.

Bangarappa c journalist
Bangarappa c journalist - Journalist
1 Min Read

ಪಟ್ಟಣದಲ್ಲಿ ಡಾ. ಬಿಆರ್ ಅಂಬೇಡ್ಕರ್ ಮೊಮ್ಮಗ ರವರಿಗೆ ಅದ್ದೂರಿ ಸ್ವಾಗತ.Kollegala
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 24 ಮತ್ತು 25ರಂದು ನಡೆಯುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಆಗಮಿಸಿದ ಡಾ. ಬಿ ಆರ್ ಅಂಬೇಡ್ಕರ್ ರವರ ಮೊಮ್ಮಗ ಭೀಮರಾವ್ ಯಶವಂತರ ಡಾ. ಅಂಬೇಡ್ಕರ್ ರವರು ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದಾಗ ಜನತೆ ಶಾಲು ಒದಿಸಿ ಹಾರಗಳನ್ನು ಹಾಕಿ ಹೋಗುಚ್ಚ ನೀಡಿ ಪುಷ್ಪ ನಮನ ಮಾಡುವ ಮೂಲಕ ಅದ್ದೂರಿ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಭೀಮರಾವ್ ಯಶವಂತ್ ಡಾ.ಅಂಬೇಡ್ಕರ್ ರವರು ಅಂಬೇಡ್ಕರ್ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಅಂಬೇಡ್ಕರ್ ಮೊಮ್ಮಗರನು ಕಂಡ ಜನತೆ ಪುಳಕಿತರಾಗಿ ಅರ್ಶೋದಾರದ ಮೂಲಕ ಜಯಕಾರಗಳನ್ನು ಕೂಗುತ್ತಿದ್ದರು. ನಂತರ ಸಿಸಿಬಿ ಡಿವೈಎಸ್ಪಿ ಮಹಾನಂದರವರ ಪಟ್ಟಣದ ಮನೆಗೆ ಭೇಟಿ ನೀಡಿ ಆತಿತ್ಯ ಸ್ವೀಕರಿಸಿ ಕುಟುಂಬಸ್ಥರ ಜೊತೆ ಕುಸಲೋಪರಿ ವಿಚಾರಿಸಿದರು. ನಂತರ ಬಿಳಿಗಿರಿರಂಗನ ಬೆಟ್ಟದ ಕೆ ಗುಡಿ ಅತಿಥಿ ಗೃಹಕ್ಕೆ ವಾಸ್ತವಕ್ಕಾಗಿ ತೆರಳಿದರು.
ಈ ಸಂದರ್ಭದಲ್ಲಿ ಚಾಮುಯೆಲ್ ಅಧ್ಯಕ್ಷ ನಂಜುಂಡಸ್ವಾಮಿ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಸಾಹಿತಿ ಮುಳ್ಳೂರು ಶಿವಮಲ್ಲು ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಾದೇವು ಮಾಜಿನಗರ ಸಭೆ ಅಧ್ಯಕ್ಷ ಶಾಂತರಾಜು ಮಾಜಿ ಉಪಾಧ್ಯಕ್ಷ ಹರ್ಷ ಸಾಹಿತಿ ಶಂಕರಪುರ ಮಹಾದೇವ ಆನಂದ ರಾಜ್ ಮೋಹನ್ ನಾಗರಾಜು ಸಿದ್ದಪ್ಪಾಜಿ ವರದ ಇತರರು ಇದ್ದರು.

Share This Article