.
- ನಿಧನ ವಾರ್ತೆ•
ನಾಗಮಂಗಲ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ರಂಗಭೂಮಿ ಕಲಾವಿದ, ವಿದ್ಯುತ್ ಗುತ್ತಿಗೆದಾರ ಹಾಗೂ ಸ್ನೇಹಜೀವಿ ಪಡವಲಪಟ್ಟಣ ಗ್ರಾಮದ ಪಿ.ಜೆ.ಜಯರಾಮು(60) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮೈಸೂರಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.
ಪಿ.ಜೆ.ಜಯರಾಮ್ ಅವರು ಪ್ರಜಾನುಡಿ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಪತ್ರಿಕಾ ಕ್ಷೇತ್ರ ಪ್ರವೆಶೀಸಿದ ನಂತರ ಉದಯವಾಣಿ ಪತ್ರಿಕೆಯ ವರದಿಗಾರರಾಗಿ ಸುಧೀರ್ಘ ಸೇವೆ
ಸಲ್ಲಿಸುವ ಜೊತೆಗೆ ರಂಗಭೂಮಿ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿದ್ದಾರೆ. ವಿದ್ಯುತ್ ಗುತ್ತಿಗೆದಾರರಾಗಿ ತಾಲೂಕು ಮತ್ತು ಜಿಲ್ಲೆಯ ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.
ನಾಗಮಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಜಿಲ್ಲಾ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ಪತ್ನಿ ಲಕ್ಷ್ಮಿ, ಸೇರಿದಂತೆ ಪುತ್ರ ತೇಜಸ್ ಗೌಡ, ಕುಟುಂಬ ವರ್ಗದವರು ಮತ್ತು ಸ್ಮೇಹಿತರನ್ನು ಅಗಲಿದ್ದಾರೆ.
———-
ನಾಗಮಂಗಲ ಬಿಂಡಿಗನವಿಲೆ ರಸ್ತೆಯ ಹೇಮಾವತಿ ಇಲಾಖೆ ಮುಂಭಾಗದ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ 11-00 ಗಂಟೆವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಕಸಬಾ ಹೋಬಳಿ ಪಡವಲಪಟ್ಟಣ ಅವರ ಸ್ವಗ್ರಾಮಕ್ಕೆ ಕೊಂಡೋಯ್ಯಲಾಗುವುದು, ನಂತರ ಅಲ್ಲಿಯೂ ಸಾರ್ವಜನಿಕ ದರ್ಶನದ ವ್ಯವಸ್ಥೆ ಇದ್ದು, ಮಧ್ಯಾಹ್ನ 2 ಗಂಟೆಗೆ ಮೃತರ ಅಂತ್ಯಕ್ರೀಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
———-

