ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗಾದಿ ,ಪಕ್ಷ ಸಂಘಟನೆಗಾಗಿ ಸೃಜನ ಅಭಿಯಾನ ೨ ಪ್ರಾರಂಭ :ಮಾಜಿ ಶಾಸಕ ಆರ್ ನರೇಂದ್ರ .


ಹನೂರು:ರಾಜ್ಯಾದ್ಯಂತ ಪಕ್ಷದ ಮುಂಚಿಣಿ ಘಟಕದ ಪಧಾದಿಕಾರಿಗಳ ಆಯ್ಕೆಸಂಬಂದವಾಗಿ ವರೀಷ್ಠರ ಆದೇಶದಂತೆ ವೀಕ್ಷಕರು ಆಗಮಿಸಿದ್ದಾರೆ ,
ಅವರಿಗೆ ನಮ್ಮ ಕ್ಷೇತ್ರದ ಆಕಾಂಕ್ಷಿಗಳ ಹೆಸರಿರುವ ಪಟ್ಟಿಯನ್ನು ರವಾನೆ ಮಾಡುವುದಷ್ಟೆ ನಮ್ಮ ಕೆಲಸ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದ
ಸಮಾಲೋಚನೆ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ ಅದರಂತೆ ಸಂಘಟನೆ ಸೃಜನ ಅಭಿಯಾಯ ೨ ರ ಅಂಗವಾಗಿ ಅಂತಿಮ ತಿರ್ಮಾನ ವಾಗುತ್ತದೆ ಮುಂದಿನ ತಿಂಗಳು ನಡೆಯುವ ಮತದಾನದ ಹಕ್ಕನ್ನು ಕಸಿದ ಮುಖ್ಯ ಚುನಾವಣಾ ಅಧಿಕಾರಿಗಳ ರಾಜಿನಾಮೆಗೆ ಆಗ್ರಹಿಸಿ ಮಾಡುತ್ತಿರುವ ಪ್ರತಿಭಟನೆಯ ಉಸ್ತವಾರಿ ಕೋಆರ್ಡಿನೆಟರ್ ನ ಜವಾಬ್ದಾರಿಯನ್ನು ಒಂಬತ್ತು ಜಿಲ್ಲೆಗೆ ಮಾಡಿದ್ದರು,ಅದರಲ್ಲಿ ಏಳು ಜಿಲ್ಲೆಯ ವರದಿಯನ್ನು ನಾನು ಈಗಾಗಲೇ ಸಂಬಂದಿಸಿದವರಿಗೆ ಕೊಟ್ಟಿಧ್ದೆನೆ. ಭಾರತ್ ಜೋಡೊ ಅಭಿಯಾನ ಸಂಘವನ್ನು ಸ್ಥಾಪಿಸಿದ್ದಾರೆ , ಆರು ಜನರ ಸಮಿತಿಯನ್ನು ಆಯ್ಕೆ ಮಾಡಬೇಕು. ನಮ್ಮವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದಿನಿಂದಲು ವರಿಷ್ಠರ ಆಯ್ಕೆಯೆ ಅಂತಿಮವಾಗಿದೆ .ಹಾಗಾಗಿ ಅಧ್ಯಕ್ಷ ಸ್ಥಾನವು ಅಧಿಕಾರಕ್ಕಾಗಿ ಅನುಭವಿಸುವ ಕಾರ್ಯವಲ್ಲ ಹಾಗೇಯೆ ಇದು ಒಂದು ಜವಾಬ್ದಾರಿಯುತ ಸ್ತಾನವಾಗಿದೆ, ಇದೆ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷದ ಶಕ್ತಿಯನ್ನು ತೋರಿಸಿಕೊಟ್ಟು ಮಾಧರಿಯಾಗೊಣ ಎಂದು ತಿಳಿಸಿದರು.
ಇದೇ ಸಮಯದಲ್ಲಿ ವೀಕ್ಷಕರಾಗಿ ಆಗಮಿಸಿದ
ಪುಷ್ಪ ಅಮರನಾಥ್ ರವರು ಮಾತನಾಡಿ ಸಂಘಟನೆ ಸೃಜನ ಅಭಿಯಾನ ಎರಡರಲ್ಲಿ ಪಕ್ಷದ ಸಂಗಹಟನೆಗೆ ಒತ್ತುಕೊಟ್ಟು ಅಧ್ಯಕ್ಷರು ಆಯ್ಕೆ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಕೆಪಿಸಿಸಿ ವೀಕ್ಷಕರ ವಿಭಾಗದ ವತಿಯಿಂದ ನಾವು ಆಗಮಿಸಿದ್ದೆವೆ . ಇದೇ ತಿಂಗಳು ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರುಗಳನ್ನು ಸಿ ಎಮ್ ಡಿ ಕೆ ಶಿವಕುಮಾರ್, ಮಾಜಿ ಸಿಎಮ್ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಆದೇಶದಂತೆ ಬಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು , ನಾನು ಚಾಮರಾಜನಗರ ಜಿಲ್ಲೆಯ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಸೆ ಪಟ್ಟಿದ್ದುನೀಜ ಆದರೆ ವರೀಷ್ಠರ ತಿರ್ಮಾನವೆ ಅಂತಿಮ ,ಪಕ್ಷದ ನಾಯಕರಾದಿಯಾಗಿ ಎಲ್ಲಾರು ಸಹಕಾರ ನೀಡಬೇಕು . ಮಹಿಳ ಕೂಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದ ಪಕ್ಷ ವಿದ್ದರೆ ಅದು ಕಾಂಗ್ರೆಸ್ ಮಾತ್ರ , ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿಯ ಚುನಾವಣಾ ನಡೆಯುವ ಸಂಬಂದವಿದೆ , 2008 ರಿಂದ ಇಲ್ಲಿಯವರಿಗೂ ನಾನು ಸಹ ಪಕ್ಷಕ್ಕಾಗಿ ದುಡಿದ್ದೆನೆ . ಪಾರದರ್ಶಕವಾಗಿ ನೆಡೆಯುವ ಆಯ್ಕೆ ಇದಾಗಿದೆ , ನಮ್ಮಲ್ಲಿ ಎನೆ ಭಿನ್ನಾಭಿಪ್ರಾಯಗಳಿದ್ದರು ಬದಿಗೊತ್ತಿ ಪರಿಸ್ಥಿತಿಯನ್ನು ಸುಧಾರಿಸಲು ನಾವೆಲ್ಲ ಪ್ರಯತ್ನ ಮಾಡೋಣ ಎಂದರು .
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಯೋಗೆಶ್ ಮಾತನಾಡಿ ವರಿಷ್ಠರು ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಅದರಂತೆ ರಾಷ್ಟ್ರೀಯ ನಾಯಕರ ಆದೇಶದಂತೆ ಪ್ರಕ್ರಿಯೆ ನಡೆಸಬೇಕಾಗುತ್ತದೆ ,ಕಾಂಗ್ರೆಸ್ ಪಕ್ಷವು ಎಲ್ಲಾ ಜನಾಂಗಕ್ಕು ಸಹ ಸಮಾನ ಅವಕಾಶವನ್ನು ನೀಡುತ್ತದೆ ,ಹನೂರು ವಿಧಾನ ಸಭಾದ ಒಂಬತ್ತು ಜಿಲ್ಲಾಪಂಚಾಯಿತಿ ಕ್ಷೇತ್ರನ್ನು ಗೆಲ್ಲಲೆ ಬೆಕಾಗುತ್ತದೆ .ಪಕ್ಷದ ಮುಂಚೂಣಿ ಘಟಕದ ಪಧಾದಿಕಾರಿಗಳ ಮನವಿಯಂತೆ ಆಯ್ಕೆಮಾಡಲಾಗುವುದು . ಈಗಾಗಲೇ ಶಾಸಕರ ಜಾತಿಯವರು ಬಿಟ್ಟುಉಳಿದೆಲ್ಲ ಜಾತಿಯವರು ಸಹ ಅರ್ಜಿಹಾಕಬಹುದು. ಕೊನೆಗೆ ವರೀಷ್ಠರ ತಿರ್ಮಾನವೆ ಅಂತಿಮವಾಗಿದೆ ,ನರೇಂದ್ರ ರವರು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾದಿಸಲಿದ್ದಾರೆ. ಎಂದು ತಿಳಿಸಿದರು.
ಹನೂರು ಮತ್ತು ರಾಮಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ಆಯ್ಕೆ ಸಮಾಲೋಚನೆ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ್ ,ಮುಖಂದವರ್ಮ , ಮಹಿಳ ಜಿಲ್ಲಾಧ್ಯಕ್ಷೆ ರಾಜಮ್ಮಣಿ . ಕೊಪ್ಪಳಿ ಮಹಾದೆವನಾಯ್ಕ , ಜಗದಿಶ್ ,ಪೆದ್ದನಪಾಳ್ಯ ಸಿದ್ದರಾಜು, ಅಶೋಕ್,ಮಾದೇಶ್ ,ಶಿವಕುಮಾರ್ ಸೇರಿದಂತೆ ಹಲವಾರು ಹಾಜರಿದ್ದರು.
