ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ

Bangarappa c
2 Min Read

ಕನಕಪುರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ರೂರಲ್ ಪದವಿ ಕಾಲೇಜಿನಲ್ಲಿ ಶನಿವಾರ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ಸಂಚಾಲಕರಾದ ಡಾಕ್ಟರ್ ಜೆ ಲೋಹಿತ್ ಮಾತನಾಡಿ ನ್ಯಾಕ್ ಎಂಬುದು ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಅಳತೆ ಮಾಡಿ ಅದಕ್ಕೆ ನಿರ್ದಿಷ್ಟ ಮೌಲ್ಯವನ್ನು ಕೊಡುವ ಸಂಸ್ಥೆಯಾಗಿದೆ. ನ್ಯಾಕ್ ಗೆ ಪೂರಕ ದಾಖಲೆಗಳನ್ನು ಕೊಡುವ ವಿಧಾನಗಳನ್ನು ಸ್ಪಷ್ಟವಾಗಿ ಅರಿತರೆ ಮಾತ್ರ ಅದನ್ನು ಸುಲಭವಾಗಿ ಜಯಿಸಬಹುದು. ಕಾರ್ಯಕ್ರಮಗಳ ವರದಿ, ಫೋಟೋ, ಆಹ್ವಾನ ಪತ್ರಿಕೆ, ಹಾಜರಿದ್ದವರ ಮಾಹಿತಿ ಮತ್ತು ಸಂಸ್ಥೆಯ ಭೌತಿಕ ರೂಪಗಳು ಮತ್ತು ಬೆಳವಣಿಗೆಗಳು ಸಹಾ ನ್ಯಾಕ್ ಗೆ ಬೇಕಾದ ಪ್ರಮುಖ ಮಾಹಿತಿಗಳು ಹಾಗಾಗಿ 5 ವರ್ಷಗಳ ಮಾಹಿತಿಯನ್ನು ಒಟ್ಟಾರೆಯಾಗಿ ನೀಡುವಾಗ ಏರಿಳಿತ ಸಹಜ ಬಲು ಜಾಗೃತಿಯಿಂದ ಈ ಕೆಲಸ ನಿಭಾಯಿಸಬೇಕು ಏಕೆಂದರೆ ಒಂದು ಸಂಸ್ಥೆಗೆ ವರ್ಚಸ್ಸು ಮತ್ತು ಶಕ್ತಿಯನ್ನು ನ್ಯಾಕ್ ಗ್ರೇಡ್ ತಂದು ಕೊಡುತ್ತದೆ ಎಂದರು. ಮೈಸೂರು ವಿಶ್ವವಿದ್ಯಾನಿಲಯದ ಮಾಳವೀಯ ಮಿಶನ್ ನಾ ಶಿಕ್ಷಕ ತರಬೇತಿ ಕೇಂದ್ರದಿಂದ ಆಗಮಿಸಿದ್ದ ಪ್ರಾಧ್ಯಾಪಕರಾದ ಡಾಕ್ಟರ್ ಎಲ್ ನಂಜುಂಡ ಸ್ವಾಮಿ ಮಾತನಾಡಿ ಯುಜಿಸಿ ವೇತನ ಮತ್ತು ಬಡ್ತಿಗೆ ಇರುವ ಮಾನದಂಡಗಳು ಮತ್ತು ಅರ್ಹತೆಗಳೇನು ಎಂದು ತಿಳಿಸಿದರು. ಉನ್ನತ ಶಿಕ್ಷಣದಲ್ಲಿ ಯುಜಿಸಿ ನಿಯಮಾವಳಿಗಳನ್ನು ಅರ್ಥಮಾಡಿಕೊಂಡು ಪೂರಕ ದಾಖಲೆಯನ್ನು ಸಲ್ಲಿಸಿದಾಗ ಸಿಗುವ ಅನುಕೂಲಗಳು ಹಾಗೂ ಪ್ರಾಧ್ಯಾಪಕರಿಗೆ ಸಿಗುವ ವಿವಿಧ ರಜೆಗಳ ಕುರಿತು ವಿಸ್ತರಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಗ್ರಂಥಪಾಲಕ ಡಾಕ್ಟರ್ ಸಿಪಿ ರಮೇಶ್ ಶೈಕ್ಷಣಿಕ ಸಂಸ್ಥೆಗಳಿಗೆ ಮಾಹಿತಿ ಸಂಪನ್ಮೂಲಗಳ ಅಗತ್ಯತೆ ಮತ್ತು ಅವುಗಳ ಉಪಯೋಗದ ಕುರಿತು ವಿಸ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಇ ಎಸ್ ಅಧ್ಯಕ್ಷರಾದ ಹೆಚ್ ಕೆ ಶ್ರೀಕಂಠ ವಹಿಸಿ ಇಂತಹ ಕಾರ್ಯಕ್ರಮಗಳು ಎಂದಿಗೂ ಸ್ವಾಗತಾರ್ಹ ಸಂಸ್ಥೆಯ ಬೆಳವಣಿಗೆ ದೃಷ್ಟಿಯಿಂದ ಮತ್ತಷ್ಟು ಕಾರ್ಯಕ್ರಮಗಳಿಗೆ ಉತ್ತೇಜನೆ ನೀಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾಕ್ಟರ್ ಕೆಂಪೇಗೌಡ, ಉಪ ಪ್ರಾಂಶುಪಾಲರಾದ ಡಾಕ್ಟರ್ ಅಪ್ಪಾಜಿ, ಎ ಪಿ ಪ್ರಕಾಶ್ ಮಹೇಶ್, ಕನ್ನಿಕಾ ಪರಮೇಶ್ವರಿ, ಭೋಜರಾಜ್, ಮೋಹನ್ ಕುಮಾರ್, ಸೇರಿದಂತೆ ಹಿರಿಯ ಉಪನ್ಯಾಸಕರು ಹಾಗೂ ಭಾರತಿ ಕಾಲೇಜು ಕೋಡಿಹಳ್ಳಿ, ಚೆನ್ನಪಟ್ಟಣ, ಕನಕಪುರ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದು ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.

Share This Article