ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದು
ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ.
ತಳಿರು ತೋರಣಗಳಿಂದ ಸಿಂಗರಿಸಿ. ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು . ಎಸ್. ಎ. ಸೌಂಡ್ಸ್ ಸಿಸ್ಟಮ್ ವತಿಯಿಂದ ಪಚ್ಚೆದೊಡ್ಡಿ ಗ್ರಾಮದ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನ ದಾನ ವಿಶೇಷ ಪೂಜೆ ನಡೆದ ನಂತರ ರಾತ್ರಿ 8 ಗಂಟೆಗೆ ನೆರೆದಿರುವ ಭಕ್ತರಿಗೆ ಪಾಯಸ, ಮುದ್ದೆ, ದ್ವಿದಳ ದಾನ್ಯದ ಸಾಂಬಾರು, ಪಲ್ಯ, ಹಪ್ಪಳ,ಅನ್ನಸಾಂಬಾರ್ ಅನ್ನು ನೆರೆದಿರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನ ಕಲ್ಪಿಸಿದರು. ನಟರಾಜ್ ಮೈಸೂರು ತಂಡದವರಿಂದ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಹರಿಕಥೆ ನಡೆ ಸಲಾಯಿತು. ಇದೇ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಯ ಅರ್ಚಕ ಬಸವರಾಜು, ಅರ್ಚಕರಾದ ಶಿವು, ಶ್ರೀನಿವಾಸ್, ಗೌಡರದ ಮನ್ನಾರ್ ಕೃಷ್ಣಗೌಡ, ಕೃಷ್ಣಗೌಡ, ಕುಮಾರ, ರಾಜು, ಗಣೇಶ್, ಮಾದೇವ, ಚಂದ್ರು, ನಾರಾಯಣ ಗೌಡ, ಪಚ್ಚೇಗೌಡ. ಮಾದೇಶ್ ಗೌಡ ಬಸವರಾಜ್ ಕಾಂಚಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.



