ಡಿ.ಕೆ.ಶಿವಕುಮಾರ್ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ವಿರೋಧಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು 2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತದಿಂದ ಶಾಸಕರು ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆದು ದೆಹಲಿಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು.
ಎರಡೂವರೆ ವರ್ಷ ತುಂಬಿದ ಬಳಿಕ ಉನ್ನತ ಸ್ಥಾನ ದೊರಕಲಿ ಎಂದು ದೇಶದ ವಿವಿಧ ರಾಜ್ಯದ ದೇವಸ್ಥಾನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳು ಹೋಮ ಹವನಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದರು,
ಕೊಳ್ಳೇಗಾಲ ತಾಲೂಕಿನ
ಸತ್ತೇಗಾಲ ಗ್ರಾಂಪಂ ವ್ಯಾಪ್ತಿಯ ಶಿವನಸಮುದ್ರ ಮಧ್ಯರಂಗನಾಥ ದೇವಸ್ಥಾನವು ಹೊಸದಾಗಿ ಜೀರ್ಣೋದ್ಧಾರ
ಕಾಮಗಾರಿಯನ್ನು ಬೇಗ ಮುಗಿಸಿ ಮೇ 21 ರಂದು ದೇವಸ್ಥಾನದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿತ್ತು.
ಅದರಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಜೊತೆಗೆ ಆಗಮಿಸಿ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗಮ್ಮೋಹನ ರಂಗನಾಥಸ್ವಾಮಿ ದರ್ಶನ ಪಡೆದು ಬಳಿಕ ರಂಗನಾಥ ಮೂರ್ತಿಗೆ ಪುಷ್ಪಾಂಜಲಿ ಸಲ್ಲಿಸಿ ಮುಂದಿನ ದಿನಗಳು ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದರು.
ಪ್ರಧಾನ
ಆಗಮಿಕ ಶ್ರೀನಿವಾಸ ರಂಗಜಾರಿ ಅವರು ಡಿ ಕೆ ಶಿವಕುಮಾರ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿ ಮುಂದೆ ಉನ್ನತ ಸ್ಥಾನ ದೊರಕುವಂತಾಗಲಿ ಎಂದು ಹಾರೈಸಿದ್ದರು.
ಬಳಿಕ ಡಿ ಕೆ ಶಿವಕುಮಾರ್ ಅವರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡುವಾಗ ಬಾಯಲ್ಲಿ ಉದ್ದಕ್ಕೂ ಭಗವಂತನ ನಾಮಸ್ಮರಣೆಯನ್ನು ಜಪಿಸುತ್ತಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮಗೆ ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದಿರಿಸುವ ಶಕ್ತಿಯನ್ನು ನೀಡುತ್ತಾನೆ ದಾರಿ ತೋರಿಸುವುದು ದೇವರ ಕೆಲಸ ಗುರಿ ತಲುಪುವುದು ನಮ್ಮ ಕೆಲಸ .
ದೇವರು ನೀಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಸುಮಾರು 1 ವರ್ಷದಿಂದಲೂ ವಿವಿಧ ರಾಜ್ಯ ದೇವಸ್ಥಾನಗಳಿಗೆ ತೆರಳಿ ಪೂಜಾ ಕೈಂಕರ್ಯಗಳನ್ನು ನಿರಂತರವಾಗಿ ಮಾಡಿ ಕೊನೆಯಲ್ಲಿ ಶಿವನಸಮುದ್ರ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗನೋಹನ ರಂಗನಾಥಸ್ವಾ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ಅದೃಷ್ಟ ಫಲನೀಡಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸನ್ನಿವೇಶಗಳು ಉಂಟಾಗಿದೆ ,
ವೇದಿಕೆಯ ಕಾರ್ಯಕ್ರಮದಲ್ಲಿ ಸಮೂಹ ದೇವಾಲಯದ ಸಮಿತಿ ವತಿಯಿಂದ ಶ್ರೀ ಮಧ್ಯರಂಗನಾಥ ಸ್ವಾಮಿಯ ಮೂರ್ತಿಯ ಭಾವಚಿತ್ರವುಳ್ಳ ತಾಮ್ರದ ಮೂರ್ತಿಯನ್ನು ನೀಡಿದ್ದರು. ಇದರ ಫಲವೆ ಕರ್ನಾಟಕ ರಾಜ್ಯದ ದೋರೆಯಾದ ಶಿವಕುಮಾರ್ ರವರು ಮೂಡ ನಂಬಿಕೆಗೆ ಸಡ್ಡು ಹೊಡೆದು ಜಿಲ್ಲೆಗೆ ಆಗಮಿಸಿ ಅಧಿಕಾರದ ಗದ್ದುಗೆ ಅಲಂಕರಿಸಿದ್ದಾರೆ .

