ಸರ್ಕಾರಿ ಕಛೇರಿಯಲ್ಲಿ ಮಹಿಳಾ ನೌಕರರಿಗೆ ಕಿರುಕುಳ ತನಿಕೆಗಾಗಿ – ತಹಶೀಲ್ದಾರ್‌ಗೆ ರಾಜ್ಯ ಒಕ್ಕಲಿಗರ ಸಂಘದ ಮನವಿ.

Bangarappa c journalist
Bangarappa c journalist - Journalist
2 Min Read

ಸರ್ಕಾರಿ ಕಛೇರಿಯಲ್ಲಿ ಮಹಿಳಾ ನೌಕರರಿಗೆ ಕಿರುಕುಳ ತನಿಕೆಗಾಗಿ – ತಹಶೀಲ್ದಾರ್‌ಗೆ ರಾಜ್ಯ ಒಕ್ಕಲಿಗರ ಸಂಘದ ಮನವಿ.

 

 

ಹನೂರು:ಸರಕಾರಿ ಸೇವೆಯನ್ನು ದೇವರ ಕೆಲಸ ಎಂದು ಕಾರ್ಯನಿರ್ವಹಿಸಬೇಕಾದ ನೌಕರರೆ ತಮ್ಮ ಕಛೇರಿಯಲ್ಲಿನ ಉದ್ಯೋಗಿಗಳಿಗೆ ಮಾನಸಿಕ ಸೇರಿದಂತೆ ಇನ್ನಿತರ ಕಿರುಕುಳ ನೀಡಿದರೆ ಅವರಿಗೆ ನ್ಯಾಯ ದೊರಕಿಸಿಕೊಡುವವರು ಯಾರು ಎಂದು ರಾಜ್ಯ ಒಕ್ಕಲಿಗರ. ಸಂಘದ ಕಾರ್ಯದರ್ಶಿಗಳಾದ ಗಂಗಾದರ್ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮಹಿಳಾ ನೌಕರರು ,ಕಛೇರಿಯಲ್ಲಿ ತನ್ನ ಸಹೋದ್ಯೋಗಿಯಿಂದ ಮಾನಸಿಕ ಕಿರುಕುಳಕ್ಕೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ನೇತೃತ್ವದಲ್ಲಿ ಹನೂರಿನ ಒಕ್ಕಲಿಗ ಮುಖಂಡರು ಹನೂರು ತಹಶೀಲ್ದಾರ್ ಚೈತ್ರಾ ಅವರಿಗೆ ದೂರು ಸಲ್ಲಿಸಿದರು.
ಹನೂರು ತಹಶೀಲ್ದಾರ್ ಕಚೇರಿಗೆ ತೆರಳಿದ ಮುಖಂಡರ ನಿಯೋಗವು, ಸಂತ್ರಸ್ತ ಮಹಿಳಾ ನೌಕರೆ ಎದುರಿಸುತ್ತಿರುವ ಮಾನಸಿಕ ನೋವು, ಕೆಲಸದ ಸ್ಥಳದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ತಹಶೀಲ್ದಾರ್ ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿತು. ಬಳಿಕ ಸಂತ್ರಸ್ತೆಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಅವರು, “ಸರ್ಕಾರಿ ಕಚೇರಿಯಲ್ಲೇ ಮಹಿಳಾ ನೌಕರೆಯೊಬ್ಬರು ತಮ್ಮದೇ ಇಲಾಖೆಯ ಸಹ ನೌಕರನಿಂದ ಮಾನಸಿಕವಾಗಿ ನೊಂದಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ ಸಂಗತಿ. ಈ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ನಡೆಸಿ, ಮಹಿಳಾ ನೌಕರಿಗೆ ನಿರಂತರವಾಗಿ ತೊಂದರೆ ನೀಡುತ್ತಿರುವ ನೌಕರನ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕೂಡಲೇ ಆತನನ್ನು ಅಮಾನತುಗೊಳಿಸಬೇಕು” ಎಂದು ಆಗ್ರಹಿಸಿದರು.

ಮುಂದುವರಿದು ಮಾತನಾಡಿದ ಅವರು, “ಜಿಲ್ಲಾಧಿಕಾರಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತೆಯ ಅಹವಾಲನ್ನು ಸಹಾನುಭೂತಿಯಿಂದ ಆಲಿಸಿ ನ್ಯಾಯಯುತವಾಗಿ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ನೊಂದ ಮಹಿಳೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಆಕೆಗೆ ಸಂಪೂರ್ಣ ನ್ಯಾಯ ದೊರಕುವವರೆಗೂ ಒಕ್ಕಲಿಗರ ಸಂಘವು ಬೆಂಬಲವಾಗಿ ನಿಲ್ಲಲಿದೆ. ಅಗತ್ಯ ಬಿದ್ದರೆ ಈ ಪ್ರಕರಣವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು” ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮೂಲ ಸಿದ್ದಾಂತದಡಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಗೌಡೆಗೌಡ, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳಾದ ಗಿರೀಶ್, ಹರೀಶ್, ಹನೂರಿನ ಒಕ್ಕಲಿಗ ಮುಖಂಡರಾದ ಮಂಜೇಶ್, ನಾಗೇಂದ್ರ, ನಟರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್, ಯುವ ಮುಖಂಡರಾದ ಮಹಾದೇಶ್, ಮಂಜು, ಸಂತೋಷ್, ಕಾರ್ತಿಕ್, ಚೇತನ್, ಶಂಕರ್,ಬಂಗಾರಪ್ಪ . ಅಭಿಲಾಷ್, ಸೋಮಣ್ಣ, ಹೊಂಬಾಳೆಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article