ಧನಗೆರೆಯಲ್ಲಿ ಪೇಂಟಿಂಗ್ ಮಾಡುವಾಗ ವಿದ್ಯುತ್ ತಗಲಿ ವ್ಯಕ್ತಿ ಮೃತಪಟ್ಟಿದ್ದಾನೆ.
Reporter : Mallappa yadadgore

ಧನಗೆರೆಯಲ್ಲಿ ಪೇಂಟಿಂಗ್ ಮಾಡುವಾಗ ವಿದ್ಯುತ್ ತಗಲಿ ವ್ಯಕ್ತಿ ಮೃತಪಟ್ಟಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಧನಿಗೆರೆ ಗ್ರಾಮದ ಮನೆ ಒಂದರಲ್ಲಿ ಪೇಂಟಿಂಗ್ ಮಾಡುವಾಗ ಪೇಂಟಿಂಗ್ ಬ್ರಷ್ ಗೆ ಕಟ್ಟಿದ್ದ ಕಬ್ಬಿಣದ ರಾಡಿಗೆ ವಿದ್ಯುತ್ ಹರಿದ ಹಿನ್ನೆಲೆ ಮುಡುಗುಂಡ ಗ್ರಾಮದ ಶ್ರೀನಿವಾಸ್ 46 ವರ್ಷ ಮೃತಪಟ್ಟಿರುವ ಕಾರ್ಮಿಕ.
ತಾಲೂಕಿನ ಧನಗೆರೆ ಗ್ರಾಮದ ಮಾದೇವ ನಾಯಕ ಎಂಬುವರ ಮನೆಯಲ್ಲಿ ಮುಡುಗುಂಡ ಗ್ರಾಮದ ನಿವಾಸಿ ಮೃತ ಶ್ರೀನಿವಾಸ್ ಇವರ ಮಗ ವಿನಯ್ ಮತ್ತು ಮಠವಾಡಿ ಗ್ರಾಮದ ಬೈರ ಎಂಬ ಮೂವರು ಸೇರಿ ಹೊಸ ಮನೆಗೆ ಪೇಂಟ್ ಮಾಡುತ್ತಿದ್ದರು. ಪೇಂಟ್ ಮಾಡುವ ಬ್ರಷ್ ಗೆ ಕಬ್ಬಿಣದ ರಾಡನ್ನು ಕಟ್ಟಿಕೊಂಡು ಎತ್ತರದಲ್ಲಿದ್ದ ಗೋಡೆಗೆ ಪೈಂಟ್ ಮಾಡುವಾಗ ರಾಡು ವಿದ್ಯುತ್ ತಂತಿಗೆ ತಾಗಿದೆ. ಈ ವೇಳೆ ಶ್ರೀನಿವಾಸನಿಗೆ ವಿದ್ಯುತ್ ಹರಿದು ಒದ್ದಾಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಕ್ಷಣವೇ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ತುರ್ತು ವಿಭಾಗಕ್ಕೆ ಕರೆತಂದು ವೈದ್ಯರಾದ ಡಾ.ಟೀ ನಾ ರವರಿಂದ ಪರಿಶೀಲಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತ ದೇಹವನ್ನು ಶವ ಪರೀಕ್ಷೆಗಾಗಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತ ದೇಹದ ಮಹಾಜರು ನಡೆಸಿದ ಪೊಲೀಸರು ವೈದ್ಯರ ಮೂಲಕ ಶವ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುಧರರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.