ಕೆನರ ಬ್ಯಾಂಕಿನಲ್ಲಿ ಕನ್ನಡ ರಾಜ್ಯೊತ್ಸವ ಆಚರಿಸುವ ಮೂಲಕ ಮಾದರಿ ಯಾದ ಶಾಖಾ ವ್ಯವಸ್ಥಾಪಕರಾದ ವೀರಭದ್ರಸ್ವಾಮಿ ‌ಎಂ.‌

Bangarappa c journalist
Bangarappa c journalist - Journalist
2 Min Read

 

ಕೆನರ ಬ್ಯಾಂಕಿನಲ್ಲಿ ಕನ್ನಡ ರಾಜ್ಯೊತ್ಸವ ಆಚರಿಸುವ ಮೂಲಕ ಮಾದರಿ ಯಾದ ಶಾಖಾ ವ್ಯವಸ್ಥಾಪಕರಾದ ವೀರಭದ್ರಸ್ವಾಮಿ ‌ಎಂ.‌

 

ಹನೂರು :ಕರ್ನಾಟಕದಲ್ಲೆ ಪ್ರಾರಂಭವಾದ ಕೆನರ ಬ್ಯಾಂಕ್ ಜಾಲವು ಇಂದು ದೇಶದ ಉದ್ದಗಲ್ಲಕ್ಕೂ ಹಬ್ಬಿದೆ ಅಲ್ಲದೆ ಸಾರ್ವಜನಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ,ಕನ್ನಡ ರಾಜ್ಯೋತ್ಸವ ಆಚರಿಸುವುದು ನಮ್ಮ ಕರ್ತವ್ಯವಾಗಿದೆ ಇದಕ್ಕೆಲ್ಲ ಸಹಕರಿಸಿದ ಗ್ರಾಹಕರು ನಮ್ಮ ಬ್ಯಾಂಕಿನ ಜೋತೆಯಲ್ಲಿ ಉತ್ತಮ ಒಡನಾಟಹೊಂದಿದ್ದಾರೆ ಅವರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಲ್ಲದೆ ವ್ಯಕ್ತಿ ಬೆಳೆದು ಉನ್ನತ ಮಟ್ಟಕ್ಕೆರಿದರು ಸಹ ತನ್ನ ತಾಯ್ನಾಡನ್ನು ಮರೆಯವುದಿಲ್ಲ ಅದಕ್ಕೆ ಊದದಾರಣೆ ಹನೂರು ಕೆನರಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ವೀರಭದ್ರಸ್ವಾಮಿ ಎಂ ರವರು ತಮ್ಮ ಕಛೇರಿಯಲ್ಲಿ ಅನ್ಯ ಭಾಷೆಯ ನೌಕರರಿದ್ದರು ಸಹ ಅವರ ಮನಸ್ಸಿಗೂ ಅಡಚಣೆ ಮಾಡದೆ ಎಲ್ಲಾರ ಸಹಕಾರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಮಾಡಿದರು.
ನಂತರ ಮಾತನಾಡಿದ ಅವರು
ಬೆಳಗುತಿರಲಿ ಕನ್ನಡದ ಹಣತೆ! ಬೆಳಗಿದಂಗೆ ನಮ್ಮ ಕನ್ನಡವು ಎಲ್ಲಡೆ ಬೆಳಗಲಿ
ಪ್ರೀತಿಯ ಶಿಕ್ಷಕ ವೃಂದದವರೇ ಹಾಗೂ ನನ್ನ ನೆಚ್ಚಿನ ಸ್ನೇಹಿತರೇ ಹಾಗೂ ನೌಕರರೆ ಎಲ್ಲರಿಗೂ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. 1956ರ ನವೆಂಬರ್ 1 ರಂದು ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಟ್ಟುಗೂಡಿಸಿ ‘ಮೈಸೂರು ರಾಜ್ಯ’ವನ್ನು ರಚಿಸಲಾಯಿತು ಆನಂತರ 1973ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ದಿನದ ನೆನಪಿಗಾಗಿ ನಾವು ಈ ಹಬ್ಬವನ್ನು ಆಚರಿಸುತ್ತೇವೆ.
ಕರ್ನಾಟಕ ಕೇವಲ ಒಂದು ಭೂಭಾಗವಲ್ಲ, ಅದು ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಇತಿಹಾಸದ ಸಾಗರ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಮ್ಮೆ ನಮ್ಮ ಕನ್ನಡ ಭಾಷೆಯದ್ದು. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ದರ ಬೇಂದ್ರೆಯವರವರೆಗೆ ಅನೇಕ ಮಹಾನ್ ಚೇತನಗಳು ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಕವಿವಾಣಿ ನಮ್ಮ ಮಂತ್ರವಾಗಬೇಕು.
ಇಂದಿನ ಆಧುನಿಕ ಯುಗದಲ್ಲಿ ಜಾಗತಿಕ ಭಾಷೆಗಳನ್ನು ಕಲಿಯುವುದು ಎಷ್ಟು ಮುಖ್ಯವೋ, ನಮ್ಮ ತಾಯ್ನುಡಿಯಾದ ಕನ್ನಡವನ್ನು ಉಳಿಸಿ, ಬೆಳೆಸುವುದು ಅಷ್ಟೇ ಮುಖ್ಯ. ಮನೆಯಲ್ಲಿ, ಮನದಲ್ಲಿ ಮತ್ತು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ನಾವು ನಮ್ಮ ಭಾಷೆಗೆ ಗೌರವ ನೀಡಬೇಕು.
ಬನ್ನಿ, ನಾವೆಲ್ಲರೂ ಒಟ್ಟಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರತಿಜ್ಞೆ ಮಾಡೋಣ.
“ಎಲ್ಲಾದ್ರೂ ಇರು, ಎಂತಾದ್ರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.”
ಧನ್ಯವಾದಗಳು, ಜೈ ಕರ್ನಾಟಕ ಮಾತೆ! ಎಂದು ಹೇಳಿದರು.
ಇದೇ ಸಮಯದಲ್ಲಿ ಶಾಖಾ ನೌಕರರಾದ ಪುಟ್ಟರಾಜು , ಸತೀಶ್ ,ಶ್ರೀದೇವಿ , ಶುಭ, ಸೇರಿದಂತೆ ಇನ್ನಿತರರು ಹಾಜರಿದ್ದರು.

Share This Article