ಸಿಂಗನಲ್ಲೂರು ದೊಡ್ಡಿಂದು ವಾಡಿ ನಡುವೆ ಎರಡು ಬಸ್ಸು ಒಂದು ಕಾರ್ ಡಿಕ್ಕಿ ನಾಲ್ಕು ಮಂದಿ ಗಾಯ.

Bangarappa c journalist
Bangarappa c journalist - Journalist
1 Min Read

ಸಿಂಗನಲ್ಲೂರು ದೊಡ್ಡಿಂದು ವಾಡಿ ನಡುವೆ ಎರಡು ಬಸ್ಸು ಒಂದು ಕಾರ್ ಡಿಕ್ಕಿ ನಾಲ್ಕು ಮಂದಿ ಗಾಯ.

ವರದಿ: ಮಲ್ಲಪ್ಪ ಯಡದೊರೆ


ಕೊಳ್ಳೇಗಾಲ ತಾಲೂಕಿನ ಸಿಂಗನ್ನಲೂರು ಮತ್ತು ದೊಡ್ಡಿನವಾಡಿ ಗ್ರಾಮಗಳ ನಡುವೆ ಕ್ರಾಸ್ ನಲ್ಲಿ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಒಂದು ಕಾರು ಮುಖಾಮುಖಿ ಡಿಕ್ಕಿ ನಾಲ್ಕು ಮಂದಿಗೆ ಗಾಯಗಳಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡು ಹೋಸೂರು ಸಮೀಪ ಮನಿ ಬೆಟ್ಟ ಗ್ರಾಮ ನಿವಾಸಿಗಳಾದ ಸತೀಶ್ 20 ವರ್ಷ ಗೋವಿಂದ 18 ವರ್ಷ ಶೆಲ್ವ 24 ನಾಗರಾಜು 25 ವರ್ಷ ಅಪಘಾತದಲ್ಲಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳು.
ಇವರು ಏಳು ಮಂದಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ , ನಂತರ ಕಾರಿನಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುತ್ತಿದ್ದರು. ಇದೇ ಸಮಯದಲ್ಲಿ ಮಲೆ ಮಾದೇಶ್ವರ ಬೆಟ್ಟದಿಂದ ಬರುತ್ತಿದ್ದ ಸಾರಿಗೆ ಮತ್ತು ಖಾಸಗಿ ಬಸ್ ಗಳು ಒಂದಕ್ಕೊಂದು ಹಿಂದಿಕ್ಕಲ್ಲೂ ರಭಸವಾಗಿ ಬರುತ್ತಿದ್ದ ವೇಳೆ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಮಂದಿಯಲ್ಲಿ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ತಕ್ಷಣವೇ ಆಂಬುಲೆನ್ಸ್ ಸಹಾಯದಿಂದ ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಕರೆತಂದು ದಾಖಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಲೋಕೇಶ್ವರಿ ಡಾ. ಶ್ರುತಿ ಡಾ. ಸುನಿತಾ ಡಾ. ದಿಲೀಪ್ ಹಾಗೂ ನರ್ಸಿಂಗ್ ಅಧಿಕಾರಿಗಳುಸೇರಿದಂತೆ ನೌಕರರು ಸೇರಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣದ ಎಂಎಲ್ಸಿ ವರದಿಯನ್ನು ವೈದ್ಯರು ಪೊಲೀಸ್ ಠಾಣೆಗೆ ಕಳಿಸಿಕೊಟ್ಟಿದ್ದಾರೆ .
ಅಪಘಾತ ಸಂದರ್ಭದಲ್ಲಿ ಎರಡು ಬಸ್ಸುಗಳು ಹಾಗೂ ಕಾರು ಜಕಮ್ ಗೊಂಡಿದೆ.

ಮಲೆ ಮಾದೇಶ್ವರನ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು

Share This Article