ಆದರ್ಶ ನಗರದಲ್ಲಿ ಮನೆ ಮುಂದೆ ಕಾರಿನಲ್ಲಿ ಇರಿಸಿದ್ದ ಚಿನ್ನಾಭರಣ ನಗದು ಇರಿಸಿದ್ದ ಬ್ಯಾಗ್ ಕಳವು.

Bangarappa c journalist
Bangarappa c journalist - Journalist
2 Min Read

ಆದರ್ಶ ನಗರದಲ್ಲಿ ಮನೆ ಮುಂದೆ ಕಾರಿನಲ್ಲಿ ಇರಿಸಿದ್ದ ಚಿನ್ನಾಭರಣ ನಗದು ಇರಿಸಿದ್ದ ಬ್ಯಾಗ್ ಕಳವು.


ಕೊಳ್ಳೇಗಾಲ ಪಟ್ಟಣದ ಆದರ್ಶ ನಗರ ಬಡಾವಣೆಯ ಲಿಂಗಣಾಪುರ ರಸ್ತೆ ಬಳಿ ಮನೆಯ ಮುಂದೆ ಚಿನ್ನಾಭರಣ ನಗದು ಇದ್ದ ಬ್ಯಾಗನ್ನು ಕಾರಿನಲ್ಲಿಟ್ಟು ವಾಪಸ್ ಮನೆಗೆ ಹೋಗಿ ಬರುವಷ್ಟರಲ್ಲಿ ಚಿನ್ನಾಭರಣ ವಿದ್ದ ಬ್ಯಾಗು ಕಳ್ಳತನವಾಗಿದೆ.
ಆದರ್ಶ ನಗರ ಬಡಾವಣೆಯ ಲಿಂಗನಪುರ ರಸ್ತೆಯ ಬಳಿ ಇರುವ ಭಾನುಪ್ರಕಾಶ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ ಕಾರಿನಲ್ಲಿ ಚಿನ್ನಭರಣ ನಗದು ಕಳುವಾಗಿದೆ.
ಇವರು ಮಾಂಬಳ್ಳಿ ಗ್ರಾಮದವರು ಆದರ್ಶ ನಗರದಲ್ಲಿ ವಾಸವಾಗಿದ್ದರು . ಹಗರ ಮಾಂಬಳ್ಳಿ ಗ್ರಾಮದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಮೂರ್ನಾಲ್ಕು ದಿನಗಳು ನಡೆಯುವ ಈ ಹಬ್ಬ ಆಚರಣೆ ಮಾಡುವುದಕ್ಕೋಸ್ಕರ ಮನೆಯವರೆಲ್ಲರೂ ಮಾಂಬಳ್ಳಿಗೆ ತೆರಳಿದರು. ಈ ಸಂದರ್ಭದಲ್ಲಿ ಗಿರಿಜಮ್ಮ ಮನೆಯಲ್ಲಿದ್ದ ಚಿನ್ನಾಭರಣ ನಗದು ಎಲ್ಲವನ್ನು ಒಂದು ಬ್ಯಾಗಿನಲ್ಲಿ ಇಟ್ಟು ಅವರ ಸಂಬಂಧಿಕರೇ ಆದಂತ ಸಾಗರ್ ಎಂಬುವವರ ಕೈಗೆ ಬ್ಯಾಕ್ ಕೊಟ್ಟು ಕಾರಿನಲ್ಲಿ ಇಡುವಂತೆ ಹೇಳಿದ್ದಾರೆ. ಮನೆಯಿಂದ 20 ಮೀಟರ್ ಅಂತರದಲ್ಲಿ ನಿಲ್ಲಿಸಿದ ಕಾರಿನಲ್ಲಿ ಬ್ಯಾಗನ್ನು ಇಟ್ಟು ವಾಪಸ್ ಮನೆಗೆ ಎಲ್ಲರನ್ನು ಕರೆದುಕೊಂಡು ಹೋಗಲು ಸಾಗರ್ ಬಂದಿದ್ದಾನೆ ಮನೆಯವರೆಲ್ಲರೂ ಮನೆಯ ಮುಂದೆ ಮಾತನಾಡುತ್ತಾ ನಿಂತಿರುವಾಗಲೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿ ಇದ್ದ ಚಿನ್ನಾಭರಣಗಳ ಬ್ಯಾಗನ್ನು ಕಳ್ಳರು ಎದುರಿಸಿದ್ದಾರೆ ಎಂದು ಮನೆಯವರು ಹೇಳುತ್ತಿದ್ದಾರೆ.
ಬ್ಯಾಗಿನಲ್ಲಿ 55 ಗ್ರಾಂ ಎರಡು ಚಿನ್ನದ ನೆಕ್ಲೆಸ್, 77 ಗ್ರಾಂ ನ ಒಂದು ಲಾಂಗ್ ನೆಕ್ಲೆಸ್, 40 ಗ್ರಾಂ ನ ಎರಡು ಬ್ರಾಸ್ಲೈಟ್, 10 ಗ್ರಾಂ ನ ಎರಡು ಉಂಗುರ, 30 ಗ್ರಾಂ ನ ಎರಡು ಬಳೆ, 10 ಗ್ರಾಂ ನ ಮುತ್ತಿನ ಓಲೆಗಳು 5 ಗ್ರಾಂ ಸರಾ, ಏಳು ಗ್ರಾಂ ನ ಹ್ಯಾಂಗಿಂಗ್ 8 ಗ್ರಾಂ ನ ಮಾಟಿ, 9 ಗ್ರಾಂ ನ ಮೂರು ಉಂಗುರ ಎರಡು ಜೊತೆ ಕಾಲಿನ ಚೈನ್ ಬೆಳ್ಳಿ ಮುಖವಾಡ, ಬೆಳ್ಳಿ ಚೆಂಬು 2 ಲಕ್ಷ ನಗದು ದೇವರಿಗೆ ಇಟ್ಟಿದ್ದ ಚಿಲ್ಲರೆ ದುಡ್ಡು ಕಳು ಆಗಿರುವ ಚಿನ್ನಾಭರಣ ಬೆಳ್ಳಿ ಪದಾರ್ಥ ಮುತ್ತಿನ ಓಲೆ ಹಾಗೂ ನಗದು ಎಂದು ಮನೆಯವರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ತಿಳಿಸಿದ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article