ಪಿರಿಯಾಪಟ್ಟಣ : ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿದ್ದು ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ ತಿಳಿಸಿದರು.

ತಾಲೂಕಿನ ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮದಿನದ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಅವರ ಕಲಿಕೆಗೆ ಪೂರಕವಾದ ವಾತಾವರಣವನ್ನ ಕಲ್ಪಿಸಿ ಶಿಕ್ಷಣ ನೀಡಿದಾಗ ಉತ್ತಮ ಪ್ರಜೆಗಳಾಗುತ್ತಾರೆ ನಮ್ಮ ಸ್ವಂತ ಮಕ್ಕಳು ನಮಗೆ ಅನ್ನ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಶಾಲೆಯಲ್ಲಿರುವ ಮಕ್ಕಳಿಂದ ಅನ್ನ ಸಿಗುತ್ತಿದೆ.
ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದಾಗ ಶಾಲೆಯೂ ಉತ್ತಮ ಶೈಕ್ಷಣಿಕ ಪ್ರಗತಿ ಹೊಂದಿದ ಶಾಲೆಗಳಾಗುತ್ತವೆ.
ಜವಾಲಾಲ್ ನೆಹರುರವರು ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಹಾಗೂ ಮಕ್ಕಳನ್ನು ಹೂ ನೀಡಿ ಪುಷ್ವಾರ್ಚನೆ ಮಾಡುವ ಮೂಲಕ ಮಕ್ಕಳ ದಿನಾಚರಣೆಯನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹುಚ್ಚೇಗೌಡ, ಜಲೇಂದ್ರ, ರಾಜೇಂದ್ರ, ಶಿಕ್ಷಕರಾದ ಬಸವರಾಜ್, ಅಳ್ವಾರ್ ವರದೇಶ್ , ಸತೀಶ್, ಉಮಾ, ಶಶಿಕಲಾ, ದೀಪಿಕಾ, ಮಲ್ಲೇಶ್, ಶೀಲಾಮಣಿ, ರೂಪ, ಆಶಾ ಸೇರಿದಂತೆ ಇತರರು ಇದ್ದರು.
