ಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರ ಸ್ವಾಭಿಮಾನ ಒಗ್ಗಟ್ಟಿನ ಸಂಕೇತ.. ತ. ನ. ಪ್ರಭುದೇವ್

Bangarappa c journalist
Bangarappa c journalist - Journalist
1 Min Read

ಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರ ಸ್ವಾಭಿಮಾನ ಒಗ್ಗಟ್ಟಿನ ಸಂಕೇತ.. ತ. ನ. ಪ್ರಭುದೇವ್

ದೊಡ್ಡಬಳ್ಳಾಪುರ:ಕರ್ನಾಟಕ ಏಕೀಕರಣ ಚಳುವಳಿ  ಕನ್ನಡಿಗರ ಭಾಷಾಭಿಮಾನ, ಸಾಂಸ್ಕೃತಿಕ ಅಸ್ಮಿತೆ, ಸ್ವಾಭಿಮಾನ ಮತ್ತು ಒಗ್ಗಟ್ಟಿನ ಸಂಕೇತವಾಗಿತ್ತು ಎಂದು ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ತಿಳಿಸಿದರು.
ಅವರು‌ ದೊಡ್ಡಬಳ್ಳಾಪುರ ನಗರದ ಎಂಎಬಿಎಲ್ ಪ್ರೌಢಶಾಲೆಯಲ್ಲಿ ನಡೆದ  ಸಾಹಿತ್ಯ ವಿಜ್ಞಾನ ಸಂಸ್ಕ್ರತಿ‌ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ಏಕೀಕರಣ ಚಳುವಳಿಯು ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದುಗೂಡಿಸಿ ಪ್ರತ್ಯೇಕ ರಾಜ್ಯವನ್ನಾಗಿ ರಚಿಸುವ ಐತಿಹಾಸಿಕ ಹೋರಾಟವಾಗಿದೆ ಎಂದರು.
ಕರ್ನಾಟಕ ಏಕೀಕರಣ ಹೋರಾಟದ ಮಹನೀಯರ ತ್ಯಾಗ, ಹೋರಾಟ, ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಇಂದು ನಾವು ಏಕೀಕೃತ ಕರ್ನಾಟಕದಲ್ಲಿ ಬದುಕುತ್ತಿದ್ದೇವೆ.ಕರ್ನಾಟಕ ಏಕೀಕರಣವು ಕನ್ನಡಿಗರ ಬಹುದಿನಗಳ ಕನಸಾಗಿತ್ತು. ವಿವಿಧ ಆಡಳಿತ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದಡಿ ತರುವ ಉದ್ದೇಶದಿಂದ ಏಕೀಕರಣ ಚಳವಳಿ ನಡೆಯಿತು. ಇದರ ಫಲವಾಗಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದರು.
ವಿದ್ಯಾರ್ಥಿಗಳ ಮನಸ್ಸಿನ ನೆಮ್ಮದಿಗೆ ಬದುಕಿನ ಸೂತ್ರ ಎಂಬ ವಿಷಯ ಕುರಿತು ಮಾತನಾಡಿದ ವೈದ್ಯರಾದ ಡಾ.ಇಂದಿರಾ, ವಿದ್ಯಾರ್ಥಿಗಳು ನಿದ್ರೆ, ಆಹಾರ,ವ್ಯಾಯಾಮ ಮತ್ತು ವಿಶ್ರಾಂತಿ ಇವುಗಳ ಬಗ್ಗೆ ಅರಿಯಾದ ತಿಳುವಳಿಕೆ ಹೊಂದಬೇಕಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು.‌ ಮನಸ್ಸಿನ ನೆಮ್ಮದಿಗೆ ನಿಗದಿತ ಸಮಯದ ನಡುವೆ ನಿದ್ರೆ ಅವಶ್ಯಕ, ಚಟುವಟಿಕೆ ಸಹಿತ ಜೀವನ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಸಮತೋಲನ ಪೌಷ್ಟಿಕ ಆಹಾರ ಬಳಸಬೇಕು. ಮನಸ್ಸಿನ ಚಂಚಲತೆಯನ್ನು ಗೆದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಂಎಬಿಎಲ್ ಪ್ರೌಢಶಾಲೆಯ ಸಿಇಒ. ಬಿ.ಪಿ.ಪ್ರಿಯಾಂಕ, ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಿರ್ದೇಶಕರಾದ ಜಿ.ಸಿ.ಶಿವಕುಮಾರ್, ಸೂರ್ಯನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಸಂತೋಷ್, ಎಂಎಬಿಎಲ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article