ದೇಶದಲ್ಲೇ ಮೊದಲು ನಮ್ಮ ರಾಜ್ಯದಲ್ಲಿ ಕಾಗದರಹಿತ ನೊಂದಣೆ ಪ್ರಕ್ರಿಯೆಗೆ ಚಾಲನೆ
ರಾಜ್ಯದಲ್ಲಿ ಇನ್ನು ಮುಂದೆ ಪೇಪರ್ ಲೆಸ್ ನೋಂದಣಿ
ಚಾಮರಾಜನಗರದಲ್ಲಿ ಯಶಸ್ವಿಯಾದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ ಕಾವೇರಿ 2.0 ಅಡಿಯಲ್ಲಿ ಆಸ್ತಿ ನೋಂದಣಿ ಇನ್ಮುಂದೆ ಪೂರ್ತಿ ಕಾಗದರಹಿತ
ಬೆಂಗಳೂರು
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ಮಾಹಿತಿ ತಂತ್ರ ಜ್ಞಾನ ಕ್ರಾಂತಿ ಇದೀಗ ಆಡಳಿತದಲ್ಲಿ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ಜನವರಿ 1ರಿಂದಲೇ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಆಸ್ತಿ ನೋಂದಣಿ ಸಂಪೂರ್ಣ ಡಿಜಿಟಲೀಕರಣ ಹೊಂದಲಿದೆ. ರಾಜ್ಯದ ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆ ಇದೀಗ ಎಲ್ಲ 256 ಉಪ ನೋಂದಣಾಧಿಕಾರಿಗಳ ಕಚೇರಿಗೂ ವಿಸ್ತರಣೆಯಾಗ ಲಿದೆ. ಈ ಮೂಲಕ ಆಸ್ತಿ ನೋಂದಣಿಯಲ್ಲಿ ಸಂಪೂರ್ಣ ಡಿಜಿಟಲೀಕರಣಗೊಂಡ ದೇಶದ ಮೊದಲ ರಾಜ್ಯವಾಗಲಿದೆ.
ಆಸ್ತಿ ನೋಂದಣಿಯ ವ್ಯವಸ್ಥೆಯಡಿ ದಸ್ತಾವೇಜು ಗಳ ಮುದ್ರಣ, ಭೌತಿಕ ಕಾಗದಗಳ ಸಲ್ಲಿಕೆ, ಸಹಿ ಹಾಗೂ ದಾಖಲೆಗಳ ನಿರ್ವಹಣೆ ಪ್ರಮುಖ ಪ್ರಕ್ರಿಯೆ ಗಳಾಗಿವೆ. ಕಾಗದರಹಿತ ನೋಂದಣಿ ವ್ಯವಸ್ಥೆಯಲ್ಲಿ ದಸ್ತಾವೇಜಿನ ಸಿದ್ಧತೆ, ಆನ್ಲೈನ್ ಸಲ್ಲಿಕೆ. ಪೂರ್ವ ಪರಿಶೀಲನೆ, ಶುಲ್ಕ ಪಾವತಿ, ಡಿಜಿಟಲ್ ಸಹಿ ಹಾಗೂ ನೋಂದಾಯಿತ ದಸ್ತಾವೇಜಿನ ಡಿಜಿಟಲ್ ಸಂಗ್ರಹಣೆ ಸೇರಿದಂತೆ ಬಹುತೇಕ ಎಲ್ಲಾ ಪ್ರಕ್ರಿಯೆ ವಿದ್ಯುನ್ಮಾನ ರೂಪದಲ್ಲಿ ಕೈಗೊಳ್ಳಲಾಗುತ್ತದೆ
- 2027ರಿಂದ ರಾಜ್ಯಾದ್ಯಂತ ಸಂಪೂರ್ಣ ಕಾಗದರಹಿತ ಆಸ್ತಿ ನೋಂದಣಿ: ಆದೇಶ
- ಡಿಜಿಟಲ್ ಆಸ್ತಿ ನೋಂದಣಿಯಲ್ಲಿ ಈಗ ದೇಶದಲ್ಲೇ ನಂ.1ಆಗಲಿರುವ ಕರ್ನಾಟಕ
- ಚಾಮರಾಜನಗರದ ಯಶಸ್ವಿ ಪ್ರಯೋಗ ಈಗ ರಾಜ್ಯದ ಎಲ್ಲ ಕಚೇರಿಗೆ ವಿಸ್ತರಣೆ
- ‘ಕಾವೇರಿ 2.0’ ಪೋರ್ಟಲ್ ಮೂಲಕ ಪಾರದರ್ಶಕ ಸ್ಮಾರ್ಟ್ ನೋಂದಣಿ
“ಆನ್ಲೈನ್ನಲ್ಲೇ ದಸ್ತಾವೇಜು ಸಲ್ಲಿಕೆ ಮತ್ತು ಶುಲ್ಕ ಪಾವತಿಯ ಸೌಲಭ್ಯ
“ಆಧಾರ್ ಕಾರ್ಡ್ ಆಧಾರಿತ ‘ಇ-ಸೈನ್’ ಮೂಲಕ ಸೆಕೆಂಡ್ಗಳಲ್ಲಿ ಡಿಜಿಟಲ್ ಸಹಿ
ಸಾರ್ವಜನಿಕರಿಗೆ ಇದು ಹೇಗೆ ಪ್ರಯೋಜನ?
ಪೇಪರ್ಸ್ ನೋಂದಣಿಯಿಂದ ಭೌತಿಕ ದಸ್ತಾವೇಜುಗಳ ಮುದ್ರಣ ಮತ್ತು ನಿರ್ವಹಣೆಯ ಅವಶ್ಯಕತೆ ಕಡಿಮೆಯಾಗುವುದರ ಜೊತೆಗೆ, ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚುತ್ತದೆ. ಡಿಜಿಟಲ್ ಸಹಿಯ ಮೂಲಕ ದಸ್ತಾವೇಜಿನ ಸಮಗ್ರತೆಯನ್ನು ಕಾಪಾಡಬಹುದು. ನೋಂದಾಯಿತ ದಸ್ತಾವೇಜುಗಳು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗುವುದರಿಂದ ಅವುಗಳನ್ನು ಕಳೆದುಕೊಳ್ಳುವ ಅಥವಾ ಹಾನಿಗೊಳಗಾಗುವ ಆತಂಕ ಇರುವುದಿಲ್ಲ. ಇದರಿಂದ ನೋಂದಣಿ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ನಾಗರಿಕರ ಅನುಕೂಲತೆ ಹೆಚ್ಚಲಿದೆ.
ಪೇಪರ್ಲೆಸ್ ನೋಂದಣಿ ವ್ಯವಸ್ಥೆಯ ವೈಶಿಷ್ಟ್ಯ ಏನು?
ನಾಗರಿಕರು ಭೌತಿಕ ದಸ್ತಾವೇಜುಗಳನ್ನು (ಕಾಗದ ರೂಪದ ದಾಖಲೆಗಳು) ಸಲ್ಲಿಸುವ ಬದಲಾಗಿ ಕಾವೇರಿ 2.0 ಪೋರ್ಟಲ್ ಮೂಲಕ ಕರಡು ದಸ್ತಾವೇಜನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. ಉಪ ನೋಂದಣಾಧಿಕಾರಿಗಳು ದಸ್ತಾವೇಜನ್ನು ಆನ್ಲೈನ್ ಮೂಲಕ ಪರಿಶೀಲಿಸಿ, ದೋಷಗಳಿದ್ದಲ್ಲಿ ತಿದ್ದುಪಡಿಗಾಗಿ ಹಿಂತಿರುಗಿಸಬಹುದು. ಇದರಿಂದ ನೋಂದಣಿಗೆ ಮುನ್ನವೇ ದೋಷಗಳನ್ನು ಸರಿಪಡಿ ಸಲು ಅವಕಾಶ ದೊರೆಯುತ್ತದೆ. ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಹಿ ಪ್ರಮಾಣಪತ್ರ
ಜನರಿಗೆ ಸಕಾಲದಲ್ಲಿ ಸೇವೆಗೆ ಅನುಕೂಲ
- ತಾಂತ್ರಿಕ ಸಮಸ್ಯೆಗಳಿಂದಾಗಿ ಅಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ನೂತನ ಐಟಿ ಸೆಲ್ ಅನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆ ಉಂಟಾಗದಂತೆ ಮಾಡಿ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಇದು ಅನುಕೂಲಕರ ಆಗಲಿದೆ.
- ಡಾ.ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ತಿಳಿಸಿದ್ದಾರೆ .
