ಆರ್ ಎಸ್ ಎಸ್ ಪತಸಂಚಲನ ಉತ್ಸವವು ಹನೂರಿನಲ್ಲಿ  ಅದ್ದೂರಿಯಾಗಿ ನೇರವೇರಿತು. ಹನೂರು: ರಾಷ್ಟ್ರೀಯ ಸ್ವಯಂಸೇವಕ

Bangarappa c journalist
Bangarappa c journalist - Journalist
1 Min Read

ಆರ್ ಎಸ್ ಎಸ್ ಪತಸಂಚಲನ ಉತ್ಸವವು ಹನೂರಿನಲ್ಲಿ  ಅದ್ದೂರಿಯಾಗಿ ನೇರವೇರಿತು.

 

ಹನೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಜಯದಶಮಿ ಪತಸಂಚಲನ ಉತ್ಸವವು ಹನೂರಿನಲ್ಲಿ ನೆರವೇರಿತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹನೂರು ಪಟ್ಟಣದ ದೇವಾಂಗಪೇಟೆಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಗಣವೇಶದಲ್ಲಿ ದಂಡವನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಾದ ಮಠದ ಬೀದಿ ಮುಂಭಾಗ ಸಾಗಿ ಕೋರ್ಟ್ ಮುಂಭಾಗದಲ್ಲಿ ರಾಮಮಂದಿರ ಬೀದಿದಲ್ಲಿ ಸಾಗಿ ಕರ್ನಾಟಕ ಬ್ಯಾಂಕ್ ಮುಂಭಾಗದ ಬೀದಿಯಲ್ಲಿ ಸಾಗಿ ಪಟ್ಟಣದ ಮುಖ್ಯ ರಸ್ತೆಗೆ ಬಂದು ಪೊಲೀಸ್ ಠಾಣೆಯ ಮುಂಭಾಗದ ಅಂಬೇಡ್ಕರ್ ವೃತ್ತವನ್ನು ಬಳಸಿಕೊಂಡು ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಸಾಗಿ ಬಂಡಳ್ಳಿ ರಸ್ತೆಯಲ್ಲಿ ಚಲಿಸಿ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಮಾರ್ಗವಾಗಿ ವಾಸವಿ ಮಹಲ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಕೆಂಪೇಗೌಡ ವೃತ್ತವನ್ನು ಬಳಸಿ ದೇವಾಂಗಪೇಟೆಯ ರಸ್ತೆಯಲ್ಲಿ ಚಲಿಸಿ ಸೇರಿದ್ದ ಸ್ವಯಂಸೇವಕರು ಭಾರತಮಾತೆಗೆ ಮತ್ತು ಸಂಘ ಸಂಸ್ಥಾಪಕರಿಗೆ ಹಾಗೂ ಭಗವದ್ವಜಕ್ಕೆ ಗೌರವ ವಂದನೆ ಸಮರ್ಪಣೆ ಮಾಡಿ ಸಂಪನ್ನ ಮಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರಕರಾದ ವೇಣು ಜಿಲ್ಲಾ ಸಹಕಾರ್ಯವಾಹ ಬೆಂಡರಹಳ್ಳಿ ಶಿವಕುಮಾರ್ ತಾಲೂಕು ಕಾರ್ಯವಾಹ ಹರಿಪ್ರಸಾದ್ ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ಕಣ್ಣೂರು ವೃಷಭೇಂದ್ರ ಸ್ವಾಮಿ ಬೆಟ್ಟ ಮುರುಗೇಶ್ ರಾಜೇಂದ್ರ ಕೃಷ್ಣಮೂರ್ತಿ ಮಾತೃಭೂಮಿ ಮೂರ್ತಿ ರಾಚಪ್ಪ ಮಹೇಶ್ ಶಿವಕುಮಾರ್ ಜಡೇಸ್ವಾಮಿ ಜಗದೀಶ್ ವೆಂಕಟೇಶ್ ವಿಜಯ್ ಕೃಷ್ಣೇಗೌಡ ಸಿದ್ದಪ್ಪ ವೆಂಕಟೇಗೌಡ ಚಂದ್ರು ಸೇರಿದಂತೆ ಸ್ವಯಂಸೇವಕರು ಭಾಗವಹಿಸಿದ್ದರು

Share This Article