ಏಳಿ ಎದ್ದೇಳಿ ಜಾಗೃತಗೊಳ್ಳಿ ಒಕ್ಕಲಿಗ ಕುಲಬಾಂಧವರೇ.!?-ಎಂದು ಕೆ.ನ.ಲಿ.ಗೌಡ- ಪತ್ರಕರ್ತರು & ಹೋರಾಟಗಾರರು ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಸಂಘ ಸಜ್ಜೆ ಪಾಳ್ಯದ ಜಮೀನು ಕೋರ್ಟ್ ನಲ್ಲಿ ನಕಲಿ ಭೂಮಾಲಿಕರು ಹಾಗೂ ಭೂಗಳ್ಳರ ಪರವಾದ ತೀರ್ಪು ಬಂದಿರುವುದು ನಿಜಕ್ಕೂ ನೋವು ತರಿಸಿದೆ!!?
. ವಿಪರ್ಯಾಸ ಎಂದರೆ ಇಡೀ ರಾಜ್ಯದ ಒಕ್ಕಲಿಗ ಜನಾಂಗ ನಿನ್ನೆ ಪತ್ರಿಕೆಯಲ್ಲಿ ” ಸಜ್ಜೇಪಾಳ್ಯ ಜಮೀನು ವಿಚಾರದಲ್ಲಿ, ರಾಜ್ಯ ಒಕ್ಕಲಿಗರ ಸಂಘಕ್ಕೆ ಹಿನ್ನಡೆ “ಎನ್ನುವ ಶೀರ್ಷಿಕೆ ಬಂದ ವರದಿ ನೋಡಿ, ಎಲ್ಲರಿಗೂ ಆತಂಕ! ಆಕ್ರೋಶ !!
ಇಂತಹ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘ ಏನು ಮಾಡ್ತಾ ಇದೆ!? ಅಧ್ಯಕ್ಷರು ಏನ್ ಮಾಡ್ತಾ ಇದ್ದಾರೆ
ಸಜ್ಜೆ ಪಾಳ್ಯ ಜಮೀನು ವಿಚಾರವನ್ನ ಕೈಗೆತ್ತಿಕೊಂಡ ಕೃಷ್ಣಪ್ಪ- ರಂಗಮ್ಮ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಅಶೋಕ್ ( ತಮ್ಮಾಜಿ) ಯಾವುದೇ ಕಾರಣಕ್ಕೂ ನಾನು ಬಿಡಲ್ಲ ಎಂದು ಗುಡುಗಿದ್ದ ಟ್ರಸ್ಟ್ ಅಧ್ಯಕ್ಷರು ಏನ್ ಮಾಡ್ತಾ ಇದ್ದಾರೆ
ಈ ಎಲ್ಲಾ ಪ್ರಶ್ನೆಗಳನ್ನ ರಾಜ್ಯದ ಒಕ್ಕಲಿಗ ಸಮುದಾಯ ಕೇಳ್ತಾ ಇರುವಾಗ ,ರಾಜ್ಯ ಒಕ್ಕಲಿಗರ ಸಂಘದ ಆಸ್ತಿ ಉಳಿವಿನ ಹೋರಾಟ ಸಮಿತಿಯು ರಾಜ್ಯ ಒಕ್ಕಲಿಗರ ಸಂಘದ ಕಡೆಗೆ ಹೋಗಿ ಪ್ರಶ್ನೆ ಮಾಡುವಂತಹ ಕೆಲಸವನ್ನು ಮಾಡಿದೆ .ಆದರೆ ನಮಗಿರುವ ಆತಂಕ ಅವರಾರಿಗೂ ಇದ್ದಂತೆ ಕಂಡು ಬರುತ್ತಿಲ್ಲ !!
ತುಟಿಯ ಮೇಲಿನ ಮಾತಿನಂತೆ ಕೆಲವೊಂದು ಸಬೂಬ್ ಕೊಡ್ತಾ ಇರುವುದನ್ನು ನೋಡಿದ್ರೆ ನಮಗೆ ಆತಂಕ ಮತ್ತಷ್ಟು ಹೆಚ್ಚಿಸಿದೆ .ರಾಜ್ಯ ಒಕ್ಕಲಿಗ ಜನಾಂಗ ಈ ಕುರಿತಾಗಿ ಜಾಗೃತ ಗೊಳ್ಳಬೇಕಿದೆ.ಇದರಲ್ಲಿ ಯಾರ ಕೈವಾಡವಿದೆ!?
ಇದರ ಹಿನ್ನೆಲೆಯಲ್ಲಿ ಎಷ್ಟೆಷ್ಟು ಕೋಟಿ ಹಣ ಯಾರ್ಯಾರು ಕೈ ತಲುಪಿದೆ ಇಂಥ ಪ್ರಶ್ನೆಗಳು ಸಾಕಷ್ಟು ಅನುಮಾನಗಳು ರಾಜ್ಯ ಒಕ್ಕಲಿಗರ ಸಂಘವನ್ನ ಜಾಗೃತಗೊಳಿಸಿ, ಪ್ರಶ್ನಿಸ ಬೇಕಿದೆ. ಹೋರಾಟಕ್ಕೆ ಅಣಿಯಾಗಬೇಕಿದೆ .ಅದು ಕಾನೂನು ಹೋರಾಟವಿರಲಿ ಅಥವಾ ಸಮುದಾಯವನ್ನು ಒಗ್ಗೂಡಿಸಿ ಒಕ್ಕಲಿಗ ಸಮುದಾಯದ ಮಠಾಧಿಪತಿಗಳು ಹಾಗೂ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರುಗಳು ಎಲ್ಲರನ್ನು ಸೇರಿಸಿ ಸಜ್ಜೇಪಾಳ್ಯದ ಜಮೀನು ಉಳಿಸಿ ಜನಾಂದೋಲನ ಗಟ್ಟಿಗೊಳ್ಳಬೇಕಿದೆ.
ಏಳಿ ಎದ್ದೇಳಿ ಜಾಗೃತಗೊಳ್ಳಿ ಒಕ್ಕಲಿಗ ಕುಲಬಾಂಧವರೇ.!?-ಎಂದು ಕೆ.ನ.ಲಿ.ಗೌಡ- ಪತ್ರಕರ್ತರು & ಹೋರಾಟಗಾರರು ಆಗ್ರಹಿಸಿದರು.
