72 ಲಕ್ಷ ವೆಚ್ಚದ ಲಿಂಕ್ ಲೈನ್ ವಿದ್ಯುತ್ ಕಾಮಗಾರಿಗೆ ಶಾಸಕ ಹೆಚ್.ವಿ ವೆಂಕಟೇಶ್ ಶಂಕುಸ್ಥಾಪನೆ

ಪಾವಗಡ:ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮದ ಬಳಿ ಬೆಸ್ಕಾಂ ಇಲಾಖೆಯ ವತಿಯಿಂದ ಸುಮಾರು 72 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಲಿಂಕ್ ಲೈನ್ ವಿದ್ಯುತ್ ಕಾಮಗಾರಿಗೆ ಶುಕ್ರವಾರ ಶಾಸಕ ಹೆಚ್.ವಿ ವೆಂಕಟೇಶ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಕಾಮಗಾರಿಯಿಂದ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆಯಾಗಲಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಗೆ ಈ ಕಾಮಗಾರಿ ಸಹಕಾರಿಯಾಗಲಿದೆ ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರ್ ರೆಡ್ಡಿ, ಚಿಂತಲರೆಡ್ಡಿ, ಜಗನ್ನಾಥ್, ಈರಕ್ಯಾತಪ್ಪ, ಚಂದ್ರಶೇಖರ್ ರೆಡ್ಡಿ, ಟಿ.ಪಿ.ಎಸ್ ಹನುಮಂತರಾಯಪ್ಪ, ಗುಡಿಪಲಿ ರಂಗಪ್ಪ, ಗುತ್ತಿಗೆದಾರ ನಾಗರಾಜು, ಹೊಸಹಳ್ಳಿ ಮಾರಣ್ಣ, ವಸಂತ್ ರೆಡ್ಡಿ, ಜಾಲೋಡು ಈರಾರೆಡ್ಡಿ, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
