ಕಸಾಪ ಅಸ್ಮಿತೆಯ ಉಳಿವಿಗೆ ನನಗೆ ಬೆಂಬ ನೀಡಿ : ಕಸಾಪ ಅಧ್ಯಕ್ಷ ಆಕಾಂಕ್ಷಿ ಡಾ.ಸಿ.ಸೋಮಶೇಖರ

Bangarappa c journalist
Bangarappa c journalist - Journalist
1 Min Read

 

ಕಸಾಪ ಅಸ್ಮಿತೆಯ ಉಳಿವಿಗೆ ನನಗೆ ಬೆಂಬ ನೀಡಿ : ಕಸಾಪ ಅಧ್ಯಕ್ಷ ಆಕಾಂಕ್ಷಿ ಡಾ.ಸಿ.ಸೋಮಶೇಖರ

ರಾಮನಗರ :
ಕಸಾಪ ಕಟ್ಟಿದವರು ದಾರ್ಶನಿಕ ಆಡಳಿತಗಾರರು. ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಎಚ್.ಎಲ್.ನಾಗೇಗೌಡ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಹಲವರು ಆಡಳಿತದ ಮೂಲಕ ಸಾಹಿತ್ಯ ಕ್ಷೇತ್ರ ಕಟ್ಟಿದರು. ಹೀಗಾಗಿ ಕಸಾಪ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಡಾ.ಸಿ.ಸೋಮಶೇಖರ್ ಹೇಳಿದರು.

ನಗರದ ಕರುನಾಡ ಸೇನೆ ಕಚೇರಿಯಲ್ಲಿ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಮಾಧ್ಯಮ‌ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರಿಗಳು ಸ್ಪರ್ಧೆ ಮಾಡಬಾರದು ಎಂಬುದು ತರವಲ್ಲ. ನಾನು ಅಧಿಕಾರವನ್ನು ಸೇವೆ ಎಂದು ಭಾವಿಸಿದ್ದೇನೆ. ಕಸಾಪ ಅಧ್ಯಕ್ಷ ಸ್ಥಾನ‌ ನನಗೆ ಮತ್ತಷ್ಟು ದೊಡ್ಡ ಸೇವೆ ಮಾಡಲು ಅವಕಾಶ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತನ್ನು ಉತ್ತಂಗಕ್ಕೆ ಕೊಂಡೊಯ್ಯಲಾಗುವುದು. ಸಾಹಿತ್ಯ ಪರಿಷತ್ತು ಕನ್ನಡಿಗನ‌ ಅಸ್ಮಿತೆಯಾಗಬೇಕು. ಗಡಿ ನಾಡಿನ ಶಾಲೆಗಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದರು.

ಹಿರಿಯ ಸಾಹಿತಿ ತಲಕಾಡು ಡಾ. ಚಿಕ್ಕರಂಗೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂದು ದಕ್ಷ  ಮತ್ತು ಪ್ರಾಮಾಣಿಕ ವ್ಯಕ್ತಿ ಆಯ್ಕೆ ಆಗಬೇಕಾಗಿದ್ದು ಅಂತಹವರನ್ನು ಆಯ್ಕೆ ಮಾಡುವ ಜವಾಬ್ದಾರಿ ಕನ್ನಡಿಗರ ಮೇಲಿದ್ದು, ಐಎಎಸ್ ಅಧಿಕಾರಿಯಾಗಿ ಉತ್ತಮ‌ ಕೆಲಸ ಮಾಡಿರುವ ಸೋಮಶೇಖರ್ ಅವರು ಸೂಕ್ತವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇಂದು ಕನ್ನಡ ಭಾಷೆಯು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಸಾಪ ಸಾಹಿತಿಗಳು ಮತ್ತು ಹೋರಾಟಗಾರರಿಗೆ ಮಾತ್ರ ಸೀಮಿತವಲ್ಲ. ಎಲ್ಲರನ್ನು ಇದು ಒಳಗೊಂಡಿದೆ. ಇಡಿ ವಿಶ್ವದಲ್ಲಿ ಭಾಷಾ ಸಂಘಟನೆಯೊಂದಕ್ಕೆ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಸಂಸ್ಥೆ ಕಸಾಪ ಎಂದು ಹೇಳಿದರು.

ಹಿರಿಯ ಸಾಹಿತಿ ಪಾಲನೇತ್ರ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಯೋಗಾನಂದ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ರಾ.ಬಿ.ನಾಗರಾಜ್,
ಕನಕಪುರ ಕಸಾಪ ಮಾಜಿ ಅಧ್ಯಕ್ಷರಾದ ಆರ್.ವಿ.ನಾರಾಯಣ, ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Share This Article