ರಾಜ್ಯಪಾಲರಿಂದ ಪಿ ಹೆಚ್ ಡಿ ಪದವಿ ಪಡೆದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು.

Bangarappa c
1 Min Read
ರಾಜ್ಯ ಪಾಲರಿಂದ. ಪಿ.ಹೆಚ್.ಡಿ ಪಡೆದ. ಶ್ರೀಗಳು.

ದಿನಾಂಕ 7 ಏಪ್ರಿಲ್ 2026 ರ ಮಂಗಳವಾರ

ವಸಂತ ಕಿರಣ ಸುದ್ದಿ :

ಬೆಂಗಳೂರು : ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ  12  ಮತ್ತು 13ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಸನ್ಮಾನ್ಯ ಶ್ರೀ ಥಾವರ್ ಚಂದ್  ಗೆಹ್ಲೋಟ್ ರವರಿಂದ  ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.  ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್ಡಿ) ಪದವಿ ಪ್ರಮಾಣಪತ್ರ ಪಡೆದರು, ಪೂಜ್ಯರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧೀಪತಿಗಳು ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ  ಅಂಶುಮದಾಗಮಮ್ ಸಂಪಾದನಾತ್ಮಕ ಅಧ್ಯಯನಮ್ ಎಂಬ  ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.

Share This Article