ಗುಂಡಿ ಬಿದ್ದ ರಸ್ತೆಗಳಲ್ಲಿ ನಾಟಿ ಮಾಡುವ ಮೂಲಕ ನೀಶಾಂತ್ ಬೆಂಬಲಿಗರೊಡನೆ ಪ್ರತಿಭಟನೆ .  

Bangarappa c journalist
Bangarappa c journalist - Journalist
3 Min Read

.

ಗುಂಡಿ ಬಿದ್ದ ರಸ್ತೆಗಳಲ್ಲಿ ನಾಟಿ ಮಾಡುವ ಮೂಲಕ bjp  ನೀಶಾಂತ್ ಬೆಂಬಲಿಗರೊಡನೆ ಪ್ರತಿಭಟನೆ .

ಹನೂರು – ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಯಾದ ಒಡೆಯರಪಾಳ್ಯ ಮುಖ್ಯರಸ್ತೆಯು ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿದ್ದರೂ ಸ್ಥಳಿಯ ಶಾಸಕರು ದುರಸ್ತಿ ಮಾಡಿಸಿ ಡಾಂಬರ್ ಕಾರ್ಯ ಮಾಡದಿರುವುದು ನಾಚಿಕೆಗೇಡಿನ ಸಂಗಾತಿಯಾಗಿದೆ ಇದರಿಂದ ಸಾರ್ವಜನಿಕರು ಶಾಲಾ ಮಕ್ಕಳು ಸೇರಿದಂತೆ ಹಲವರಿಗೆ ತಿರುಗಾಡಲು ತೊಂದರೆಯಾಗುತ್ತದೆ , ದುರಸ್ತಿ ಗೊಳ್ಳದಿರುವುದನ್ನು ಖಂಡಿಸಿ ಗ್ರಾಮಸ್ಥರು ಸೇರಿದಂತೆ ಅನೇಕರ ರಸ್ತೆಯ ಗುಂಡಿ ಬಿದ್ದಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದೆವೆ ಎಂದು ಬಿಜೆಪಿ ಮುಖಂಡರಾದ ನೀಶಾಂತ್ ರವರು ತಿಳಿಸಿದರು.

ಹನೂರು ತಾಲ್ಲೂಕಿನ ಒಡೆಯರ್ ಪಾಳ್ಯದಲ್ಲಿ ಮಾತನಾಡಿದ
ಯುವ ಮುಖಂಡ ನಿಶಾಂತ್ ಶಾಸಕರಾದ ಎಮ್ ಆರ್ ಮಂಜುನಾಥ್ ರವರು ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡದೆ ಕಳೆದ ನಾಲ್ಕು ವರ್ಷಗಳಿಂದ ಕೇವಲ ಆಶ್ವಾಸನೆ ನೀಡುವ ಮೂಲಕ ಜನರನ್ನು ಮಂಕು ಮಾಡಿದ್ದಾರೆ ,ನಮ್ಮದೆ ಕ್ಷೇತ್ರದ ಒಡೆಯರಪಾಳ್ಯ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.ವಾಣಿಜ್ಯದ ದೃಷ್ಟಿಯಿಂದ ದಿನ ನಿತ್ಯ ವಾಹನಗಳ ಸಂಚಾರ ಜಾಸ್ತಿಯಾಗುತ್ತಿದೆ , ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಸಹ ಇದಾಗಿದೆ ಅಲ್ಲದೆ ಹಲವು ವರ್ಷಗಳಿಂದ ಹದಗೆಟ್ಟಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಆರೋಗ್ಯ ಕೇಂದ್ರದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಆರು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಹನೂರು, ಪಿ.ಜಿ.ಪಾಳ್ಯ
ಹಾಗೂ ಒಡೆಯರಪಾಳ್ಯ ಗ್ರಾಮಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಂದೇ ದಿನ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಕಾಮಗಾರಿಗಳು ನೆಪಾತ್ಯಕ್ಕು ಸಹ ಆರಂಭವಾಗಿಲ್ಲ ಎಂದು ಅರೋಪಿಸಿದರು.

ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಅವರ ಮುಖಂಡರು ಸೇರಿದಂತೆ ಅನೇಕರು ನವೆಂಬರ್ 6 ರವರೆಗೆ ಕಾಲಾವಕಾಶ ಕೇಳಿದ್ದಾರೆ. ಜನರ ಸಮಸ್ಯೆಗಳನ್ನು ಅರಿತು ರಸ್ತೆ ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ, ರಸ್ತೆ ನಿರ್ಮಾಣ ಕಾರ್ಯವನ್ನು ಶಾಸಕರು ಸರ್ಕಾರದಿಂದ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲದಿದ್ದರೆ ನಮಗೆ ಸ್ಪಷ್ಟಪಡಿಸಲಿ. ಆಗ ಗ್ರಾಮಸ್ಥರೇ ಚಂದಾ ಸಂಗ್ರಹಿಸಿ ನಾವು ಅವರ ಜೋತೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಿಕೊಳ್ಳುತ್ತೇವೆ ಎಂದು ಪ್ರತಿಭಟನೆ ಮಾಡುವ ಸಮಯದಲ್ಲಿ ತಿಳಿಸಿದರು.
ಪಿಜಿ ಪಾಳ್ಯದ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಶಾಸಕರ ಬೆಂಬಲಿಗರು ರೈತರಿಂದ ದೇಣಿಗೆ ಸಂಗ್ರಹಿಸಿ ಕೆರೆಯ ಮಣ್ಣನ್ನು ಮಾರಿ ಹಣ ಸಂಗ್ರಹ ಮಾಡಿ ಶಾಸಕರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಪೊನ್ ಮಾಡಿರಬಹುದು ಯಾಕೆಂದರೆ ಅವರ ಬೆಂಬಲಿಗರು ಸುಮಾರು ಇಪ್ಪತೈದು ಲಕ್ಷ ರೂಪಾಯಿಗೂ ಹೆಚ್ಚು ಹಣ ರೈತರಿಂದ ವಸೂಲಿಮಾಡಿರುವ ಸಾಕ್ಷ್ಯವಿದೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಒಡೆಯರ್ ಪಾಳ್ಯದ ಗ್ರಾಮದ ನಿವಾಸಿ ಮಾಲಾ ಮಾತನಾಡಿ,ನಮ್ಮ ಕ್ಷೇತ್ರದಲ್ಲಿ ಶಾಸಕ ಮಂಜುನಾಥ್ ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಒಡೆಯರಪಾಳ್ಯ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡುಬಂದಿಲ್ಲ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಒಡೆಯರ್ ಪಾಳ್ಯ ಕೇಂದ್ರ ಸ್ಥಾನವಾಗಿರುವ ಗ್ರಾಮದಲ್ಲಿ ರಸ್ತೆಗಳು ಸರಿಯಿಲ್ಲದಿದ್ದರೆ ದಿನ ನಿತ್ಯದ ಕೆಲಸಗಳಿಗೆ ತೊಂದರೆ ಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಪ್ರತಿಭಟನೆಗೆ ಆಗಮಿಸಿದ ಮಹಿಳೆಯರು ಮಾತಮಾಡಿ ನಮಗೆ ಸರಿಯಾದ
ಬಸ್ ನಿಲ್ದಾಣವಿಲ್ಲ. ಮಹಿಳೆಯರಿಗೆ ಸೂಕ್ತವಾದ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಬೈಲೂರು ಗ್ರಾಪಂ ಮಾಜಿ ಅಧ್ಯಕ್ಷ ಸದಾನಂದ, ಜಯಕುಮಾ‌ರ್, ಸಿದ್ದಪ್ಪಾಜಿ ನಾಯಕ, ನಂದೀಶ್, ಜಯಪ,ಸತೀಶ್ ಕುಮಾರ್, ಮಹೇಶ್, ಪ್ರಸಾದ್, ರವಿಕುಮಾರ್, ದಿಲೀಪ್, ಬಸವರಾಜ್, ಮಾಲಾ, ಸಹನ, ಸುಶೀಲಮ್ಮ, ಮಂಜುನಾಥ್, ಸತೀಶ್ ಕುಮಾರ್, ಮಾಂತೇಶ, ಬಸಪ್ಪ, ಶಾಂತ ಮಲ್ಲಪ್ಪ, ಸಂತೋಷ್, ಕಾಮಗೆರೆ ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Share This Article