ವಿದ್ಯಾರ್ಥಿಗಳ ಕೈಗೆ ಉಚಿತ ಗುಣಮಟ್ಟದ ಲ್ಯಾಪ್‌ಟಾಪ್: ಜಿ. ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಮಹತ್ವದ ಹೆಜ್ಜೆ ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ

Bangarappa c journalist
Bangarappa c journalist - Journalist
2 Min Read

ವಿದ್ಯಾರ್ಥಿಗಳ ಕೈಗೆ ಉಚಿತ ಗುಣಮಟ್ಟದ ಲ್ಯಾಪ್‌ಟಾಪ್: ಜಿ. ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಮಹತ್ವದ ಹೆಜ್ಜೆ ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ

ಕೆ.ಎಂ ದೊಡ್ಡಿ : –

ವಿದ್ಯಾರ್ಥಿಗಳು ಕೇವಲ ಅಂತಿಮ ವರ್ಷಕ್ಕೆ ಬಂದಾಗ ಮಾತ್ರ ಲ್ಯಾಪ್‌ಟಾಪ್ ಬಳಸಲು ಪ್ರಾರಂಭಿಸುತ್ತಾರೆ. ಅದಕ್ಕೂ ಮುನ್ನ ಲ್ಯಾಬ್‌ನಲ್ಲಿರುವ ಕಂಪ್ಯೂಟರ್‌ಗಳನ್ನು ವರ್ಷಕ್ಕೆ ಎರಡು-ಮೂರು ಗಂಟೆ ಮಾತ್ರ ಬಳಸುತ್ತಾರೆ. ಇದರಿಂದ ಅವರಿಗೆ ತಾಂತ್ರಿಕ ಜ್ಞಾನ ಸಮರ್ಪಕವಾಗಿ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾಗಿ ಲ್ಯಾಪ್‌ಟಾಪ್ ಉಪಯೋಗಿಸಬೇಕು, ಅವರ ಬಳಿಯೇ ಒಂದು ಲ್ಯಾಪ್‌ಟಾಪ್ ಇರಬೇಕು ಎಂಬುದನ್ನು ಮನಗಂಡು ಜಿ. ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯ ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ಪ್ರಾರಂಭಿಸಿದೇ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮಧು ಜಿ ಮಾದೇಗೌಡ ತಿಳಿಸಿದರು

ಕೆ.ಎಂ ದೊಡ್ಡಿಯ ಭಾರತಿ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷವೇ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆವು. ಆಗ ಅನೇಕ ಪೋಷಕರು, ಮಕ್ಕಳ ವಿದ್ಯಾಭ್ಯಾಸವನ್ನೇ ಮಾಡಿಸುವುದು ಕಷ್ಟವಾಗಿದೆ, ಲ್ಯಾಪ್‌ಟಾಪ್ ಕೊಡಿಸುವುದು ಇನ್ನೂ ಕಷ್ಟ ಎಂದು ಹೇಳಿದ್ದರು ಎಂದು ಸ್ಮರಿಸಿದರು.

ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸಂಸ್ಥೆಯು ಈ ನಿರ್ಧಾರ ಕೈಗೊಂಡಿದೆ. ಸಂಸ್ಥೆಯು ಮ್ಯಾನೇಜ್‌ಮೆಂಟ್ ಫೀಸ್ ಕೂಡ ಪಡೆಯುತ್ತಿಲ್ಲ. ಕೇವಲ ಸಿಇಟಿ ಶುಲ್ಕವನ್ನು ಮಾತ್ರ ಪಡೆಯುತ್ತಿದೆ. ಸಂಸ್ಥೆಗೆ ನಷ್ಟ ಆದರೂ ಪರವಾಗಿಲ್ಲ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ಈ ವರ್ಷ ಲ್ಯಾಪ್‌ಟಾಪ್ ನೀಡಲಾಗಿದೆ. ಈಗಾಗಲೇ 40 ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ.

ವಿದ್ಯಾರ್ಥಿಗಳು ಮೊದಲ ವರ್ಷಕ್ಕೆ ಕಟ್ಟುವ ಸುಮಾರು ಒಂದು ಲಕ್ಷ, ಒಂದು ಲಕ್ಷದ ಇಪ್ಪತ್ತು-ಮೂವತ್ತು ಸಾವಿರ ಶುಲ್ಕದಲ್ಲಿ ಸುಮಾರು 50 ಸಾವಿರ ರೂ. ಲ್ಯಾಪ್‌ಟಾಪ್‌ಗೆ ಬಳಕೆಯಾಗುತ್ತದೆ. ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಜೊತೆಗೆ ನಾಲ್ಕು ವರ್ಷಗಳ ವಾರಂಟಿಯನ್ನು ಕೂಡ ನೀಡಲಾಗಿದೆ.

ಲ್ಯಾಪ್‌ಟಾಪ್‌ನಲ್ಲಿ ಏನಾದರೂ ರಿಪೇರಿ ಬಂದರೂ ಬ್ಯಾಟರಿ ಮತ್ತು ಕೇಬಲ್ ಹೊರತುಪಡಿಸಿ ಉಚಿತವಾಗಿ ರಿಪೇರಿ ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ. ಹಳೆಯ ಅಥವಾ ಕಳಪೆ ಗುಣಮಟ್ಟದ ಲ್ಯಾಪ್‌ಟಾಪ್ ನೀಡಿದ್ದಾರೆ ಎಂಬ ಮಾತು ಬರಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಂಸ್ಥೆ ತನ್ನ ಪಾತ್ರವನ್ನು ನಿರ್ವಹಿಸಿದೆ. ಇನ್ನು ವಿದ್ಯಾರ್ಥಿಗಳು ನೀಡಿರುವ ಲ್ಯಾಪ್‌ಟಾಪ್‌ನ್ನು ಸದುಪಯೋಗಪಡಿಸಿಕೊಂಡು, ಉತ್ತಮವಾಗಿ ಕಲಿತು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ನಂತರ ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಚಂದನ್ ಮಾತನಾಡಿ ಕರ್ನಾಟಕ ರಾಜ್ಯದಾದ್ಯಂತ 224 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅವುಗಳಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿರುವ ಪ್ರಮುಖ ಕಾಲೇಜು ನಮ್ಮ ಜಿ. ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯ ಎಂದು ಪ್ರಿನ್ಸಿಪಾಲ್ ಚಂದನ್ ತಿಳಿಸಿದರು
ವಿದ್ಯಾರ್ಥಿಗಳು ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಲಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂಬ ಉದ್ದೇಶದಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಗೂಗಲ್ ಮೂಲಕ ಹೆಚ್ಚಿನ ಮಾಹಿತಿ ಪಡೆದು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಈ ಲ್ಯಾಪ್‌ಟಾಪ್ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಂಜೇಗೌಡ ಪ್ರಾಂಶುಪಾಲ ಚಂದನ್,ಉಪನ್ಯಾಸಕಾರಸ ನೂತನ್, ವಿದ್ಯಾ ,ಸುಮಿತ ಇಂಜನಿರಿಂಗ್ ಕಾಲೇಜ್ ಮಕ್ಕಳು ಮತ್ತು ಪೋಷಕರು
ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರಧಿ :- ಸಂತೋಷ್ ಟಿಬಿ

Share This Article