ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮೇಘ ಶಾಲಾ ಸಂಸ್ಥೆ ನೆರವು ನೀಡುತ್ತಿದೆ. ಶಾಸಕ ಕೆ ಆರ್ ಕೃಷ್ಣಮೂರ್ತಿ.
ೖ ಕೊಳ್ಳೇಗಾಲ ಪಟ್ಟಣದ ಗುರುಭವನದಲ್ಲಿ ಮೇಘ ಶಾಲಾ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿಜಿಟಲ್ ಬೋಧನ ಸಾಧನಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಾಸಕ ಎ ಆರ್ ಕೃಷ್ಣಮೂರ್ತಿಯವರು ಮಾತನಾಡುತ್ತಾ. ಮೇಘಶಾಲಾ ಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಡಿಜಿಟಲ್ ಬೋಧನಾ ಸಾಮಗ್ರಿ ಟಿವಿ, ಟ್ಯಾಬ್, ಯುಪಿಎಸ್ ಪ್ರೊಜೆಕ್ಟರ್ ವಿತರಣೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇದನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಮತ್ತು ಪರಿಪೂರ್ಣ ಬೋಧನೆ ಮಾಡಲು ಅನುಕೂಲವಾಗಿದೆ ಎಂದು ಹೇಳಿದ ಅವರು ಮೇಘ ಶಾಲಾ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಾಸ್ತಾವಿಕ ನುಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ರವರು ಮೇಘ ಶಾಲಾ ಸಂಸ್ಥೆಯು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಲ್ಲಿಯ ಮಕ್ಕಳಿಗೆ ಶಿಕ್ಷಕರಿಂದ ಪರಿಪೂರ್ಣ ಬೋಧನೆ ದೊರಕಲಿ ಎಂಬ ಉದ್ದೇಶದಿಂದ ಪ್ರತಿ ವರ್ಷವೂ ಡಿಜಿಟಲ್ ಬೋಧನಾ ಸಾಮಗ್ರಿಗಳನ್ನು ನೀಡುತ್ತಿದ್ದಾರೆ 2026 27 ನೇ ಸಾಲಿಗೆ 10 ಟ್ಯಾಬ್ 10 ಟಿವಿಗಳು 10 ಪ್ರೊಜೆಕ್ಟರ್ ಮತ್ತು ಯುಪಿಎಸ್ ಗಳನ್ನು ಉಚಿತವಾಗಿ ನೀಡಿದ್ದಾರೆ ಎಂದು ಹೇಳಿದರು.
ಮೇಘ ಶಾಲಾ ಸಂಸ್ಥೆ ಇಂಟರ್ನೆಟ್ ಮುಖ್ಯಸ್ಥೆ ಜಯಲಕ್ಷ್ಮಿ ಮಾತನಾಡಿ ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ನಮಗೆ ತುಂಬಾ ಸಹಕಾರ ನೀಡಿದ್ದಾರೆ. ಸಂಸ್ಥೆಯ ಉದ್ದೇಶ ಡಿಜಿಟಲ್ ತಂತ್ರಜ್ಞಾನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಉದ್ದೇಶದಿಂದ ಸಾಧನ ಸಲಕರಣೆಗಳನ್ನು ನೀಡುತ್ತಿದ್ದೇವೆ ಎಂದು ಸಂಸ್ಥೆಯ ಹಲವಾರು ಅಮೂಲ್ಯವಾದ ಮಾಹಿತಿಗಳನ್ನು ತಿಳಿಸಿದರು.
ಕಾರ್ಯಕ್ರಮವು ಚಿಲಕವಾಡಿ ಇಮ್ಮಡಿ ಗುರುಲಿಂಗ ಸ್ವಾಮಿ ಹಾಗೂ ಮುಸ್ಲಿಂ ಧರ್ಮ ಗುರುಗಳು ಸಾನಿಧ್ಯ ವಹಿಸಿದ್ದರು. ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ರಾಜೇಂದ್ರ ಮಲೆ ಮಾದೇಶ್ವರ ಪ್ರಾಧಿಕಾರದ ನಿರ್ದೇಶಕ ತೋಟೇಶ್ ಬಿ ಆರ್ ಸಿ ಮಹದೇವ್ ಕುಮಾರ್ ಮೇಘ ಶಾಲಾ ಸಂಸ್ಥೆಯ ತರಬೇತುದಾರ ರಾಘವೇಂದ್ರ ಅನುಷ್ಠಾನ ಅಧಿಕಾರಿ ರವಿಚಂದ್ರನ್ ಮಾಜಿನಗರಸಭೆ ಅಧ್ಯಕ್ಷ ಶಾಂತರಾಜು ಯುವ ಮುಖಂಡ ಚೇತನ್ ದೊರೆರಾಜ್. ಮ್ಯಾನೇಜರ್, ಸರ್ಕಾರಿ ಮತ್ತು ಖಾಸಗಿ ಶಾಲೆ ಮುಖ್ಯ ಶಿಕ್ಷಕರು ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇತರರು ಇದ್ದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮೇಘ ಶಾಲಾ ಸಂಸ್ಥೆ ನೆರವು ನೀಡುತ್ತಿದೆ. ಶಾಸಕ ಕೆ ಆರ್ ಕೃಷ್ಣಮೂರ್ತಿ.
