ಸತ್ಯಗಾಲದಲ್ಲಿ ಎರಡು ಗುಂಪುಗಳ ನಡುವೆ ಬಡಿದಾಟ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲು.

Bangarappa c journalist
Bangarappa c journalist - Journalist
2 Min Read

ಸತ್ಯಗಾಲದಲ್ಲಿ ಎರಡು ಗುಂಪುಗಳ ನಡುವೆ ಬಡಿದಾಟ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲು.

ಕೊಳ್ಳೇಗಾಲ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಜಮೀನಿನ ವಿಷಯಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಒಬ್ಬ ಮಹಿಳೆ ಸೇರಿದಂತೆ ಏಳು ಮಂದಿ ಗಾಯಗೊಂಡು ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಸತ್ಯಗಾಲ ಗ್ರಾಮ ನಿವಾಸಿಗಳಾದ ಪ್ರದೀಪ್ ಕುಮಾರ್ 34 ವರ್ಷ ಕಿರಣ್ ಕುಮಾರ್ 33 ಲಕ್ಷ್ಮೀಶ 30 ಹಾಗೂ ಅದೇ ಗ್ರಾಮದ ಮತ್ತೊಂದು ಗುಂಪಿನ ಮಲ್ಲಿಕಾರ್ಜುನ 53 ಪ್ರೇಮಾವತಿ 45 ಶ್ರೇಯಸ್ 22 ಚಿರಂತ್ 20 ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳು
ಪ್ರದೀಪ್ ಕುಮಾರ್ ಮಾತನಾಡಿ ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಡೆಯವರು ಜಮೀನಿನಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ತಂದು ಉಳಿವೆ ಮಾಡಲು ಮುಂದಾಗಿದ್ದರು . ಇದನ್ನು ಕೇಳಲು ಹೋದಾಗ ನನಗೆ ಮತ್ತು ಕಿರಣ್ ಕುಮಾರ್ ಲಕ್ಷ್ಮೀಶ ಇವರಿಗೆ ಮಲ್ಲಿಕಾರ್ಜುನ ಚಿರಂತ್ ಶ್ರೇಯಸ್ ಪ್ರೇಮಾವತಿ ಶೇಖರ್ ಗಲಾಟೆ ಮಾಡಿ ಮಚ್ಚು ಕಬ್ಬಿಣದ ರಾಡು ರಿಪೀಶ್ ಪಟ್ಟಿಯನ್ನು ತಂದು ನಮ್ಮ ಮೂವರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಅದೇ ರೀತಿ ಮತ್ತೊಂದು ಗುಂಪಿನವರು
ಜಮೀನಿನ ಪ್ರಕರಣ ಎರಡು ನ್ಯಾಯಾಲಯಗಳಲ್ಲಿ ನಮ್ಮಂತೆ ಆದೇಶವಾಗಿದೆ ಅದಕ್ಕಾಗಿ ನಾವು ಜಮೀನು ಉಳಿಮೆ ಮಾಡಲು ಹೋಗಿದ್ದವು.ಈ ವೇಳೆ ಜಮೀನಿಗೆ ಬಂದ ಪ್ರದೀಪ್ ಕುಮಾರ್ ಕಿರಣ್ ಲಕ್ಷ್ಮೀಶ ಇವರು ಮಚ್ಚು ಕಬ್ಬಿಣದ ರಾಡು ಮತ್ತು ರಿಪಿಸ್ ಪಟ್ಟಿ ತಂದು ಮಲ್ಲಿಕಾರ್ಜುನ ಪ್ರೇಮಾವತಿ ಶ್ರೇಯಸ್ ಚಿರಂತ್ ಇವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಲ್ಲಿಕಾರ್ಜುನ ತಿಳಿಸಿದ್ದಾರೆ. ಗಾಯಗೊಂಡಿರುವ ಏಳು ಮಂದಿಯು ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ
ತಜ್ಞ ವೈದ್ಯರಾದ ಡಾ.ಟೀನಾ ಮತ್ತು ನರ್ಸಿಂಗ್ ಅಧಿಕಾರಿಗಳು ಎಲ್ಲರಿಗೂ ಚಿಕಿತ್ಸೆ ನೀಡಿ ದಾಖಲು ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು ಗಾಯಾಳುಗಳಿಂದ ಮಾಹಿತಿಯನ್ನು ಪಡೆದು 2 ಗುಂಪಿನಿಂದಲೂ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article